16 ಸಾವಿರ ಟೆಕ್ಕಿ ನೇಮಕ: ಇನ್ಫಿ ನಾರಾಯಣ ಮೂರ್ತಿ

job-16000-fresh-software-engineers-recruitment-infosys-nrn-murthy
ಬೆಂಗಳೂರು, ಡಿ.19: ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಹೊರಗುತ್ತಿಗೆಗೆ ಉತ್ತಮ ಬೇಡಿಕೆ ದೊರೆತಿದೆ. ಈ ಭಾಗಗಳಲ್ಲಿ ಇನ್ಫೋಸಿಸ್ ಉತ್ತಮ ಮಾರುಕಟ್ಟೆ ಪಾಲು ಹೊಂದಿದೆ. ಹಾಗಾಗಿ ಬೇಡಿಕೆ ಕುದುರಿರುವುದರಿಂದ ಮಾನವ ಸಂಪನ್ಮೂಲದ ಅಗತ್ಯವೂ ಬಹಳಷ್ಟಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆರ್ಥಿಕ ವರ್ಷದ ವೇಳೆಗೆ ಭಾರಿ ಸಂಖ್ಯೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿಯ ಕಾರ್ಯವಾಹಕ ಅಧ್ಯಕ್ಷ ಎನ್ ಆರ್ ನಾರಾಯಣ ಮೂರ್ತಿ ಅವರು ತಿಳಿಸಿದ್ದಾರೆ.

ಸುಮಾರು ಹದಿನಾರು ಸಾವಿರ ಮಂದಿ ಇಂಜಿನಿಯರುಗಳ ಅಗತ್ಯ ಬೀಳಲಿದೆ. ಹಾಗಾಗಿ ಈ ನೇಮಕಾತಿ ನಡೆದಿದೆ. ಮುಂದಿನ ವರ್ಷಕ್ಕಾಗಿ ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ದೇಶದ ಎರಡನೆಯ ಅತಿ ದೊಡ್ಡ ಐಟಿ ಕಂಪನಿಯ ಕಾರ್ಯವಾಹಕ ಅಧ್ಯಕ್ಷ ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

ಆದರೆ ಮುಂದಿನ ನೇಮಕಾತಿಯನ್ನು ಕಡಿತಗೊಳಿಸುವುದಾಗಿ Infosys CEO ಎಸ್ ಡಿ ಶಿಬುಲಾಲ್ ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ಹೇಳಿದ್ದರು. 2014ರ ಆರ್ಥಿಕ ವರ್ಷಕ್ಕೆ 10 ಸಾವಿರ ಇಂಜಿನಿಯರುಗಳು ಸಾಕಾಗಬಹುದು. ಇದರಲ್ಲಿ 2013ನೇ ಸಾಲಿನಲ್ಲಿ ಆಯ್ಕೆಗೊಂಡಿರುವ 5 ಸಾವಿರ ಮಂದಿ ಹೊಸಬರೂ ಸೇರುತ್ತಾರೆ ಎಂದು ತಿಳಿಸಿದ್ದರು.

ಆದರೆ ಕಂಪನಿಗೆ ಸಿಗಲಿರುವ ಪ್ರಾಜೆಕ್ಟುಗಳು ಮತ್ತು ಬೇಡಿಕೆಯನ್ನು ಮನಗಂಡು ನೇಮಕಾತಿಯನ್ನು ಹೆಚ್ಚು ಮಾಡುವುದಾಗಿ ಹೇಳಿದ್ದರು. ಇದಕ್ಕೆ ಹೋಲಿಸಿದಲ್ಲಿ, ಕಂಪನಿಯ ಕಾರ್ಯವಾಹಕ ಅಧ್ಯಕ್ಷ ಮೂರ್ತಿ ಅವರು ಹೇಳಿರುವಂತೆ ಇನ್ಫಿ ಈ ಬಾರಿ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಳ್ಳುವುದು ಖಾತ್ರಿಯಾಗಿದೆ. (ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗ)

ಆದರೆ ಇದು ದೇಶದ ಅತಿ ದೊಡ್ಡ ಐಟಿ ಕಂಪನಿಯಾದ TCS ನೇಮಕಾತಿಗಿಂತ ಅರ್ಧದಷ್ಟು ಕಡಿಮೆಯಾಗಿದೆ. ಮುಂದಿನ ವರ್ಷದ ವೇಳೆಗೆ 25 ಸಾವಿರ ಮಂದಿ ಹೊಸ ಇಂಜಿನಿಯರಿಂಗ್ ಪದವೀಧರರನ್ನು ನೇಮಿಸಿಕೊಳ್ಳುವುದಾಗಿ TCS CEO ಎನ್ ಚಂದ್ರಶೇಖರನ್ ತಿಳಿಸಿದ್ದಾರೆ.

ಅರ್ಥಾತ್, ಐಟಿ ಕ್ಷೇತ್ರಕ್ಕೆ ಮತ್ತೆ ಬೇಡಿಕೆ ಕುದುರಿದ್ದು ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಉತ್ತಮ ಭವಿಷ್ಯವಿದೆ ಎಂಬುದು ಚೇತೋಹಾರಿ ಸುದ್ದಿಯಾಗಿದೆ. Nasscom ಸಹ ಇದನ್ನೇ ಹೇಳಿದ್ದು ಪ್ರಸಕ್ತ ಸಾಲಿನಲ್ಲಿ ಶೇ. 14ರಷ್ಟು ಐಟಿ ರಫ್ತು ನಡೆಯಲಿದೆ ಎಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+