Bengaluru: ಮದುವೆಯಾಗಲು ನಿರಾಕರಿಸಿದ ಯುವತಿಗೆ 16 ಬಾರಿ ಚಾಕುವಿನಿಂದ ಇರಿದು ಕೊಂದ ಭಗ್ನ ಪ್ರೇಮಿ
ಪ್ರೇಮ ತಿರಸ್ಕರಿಸಿದ ಕಾರಣಕ್ಕೆ ಹೆಚ್ಚಾಗಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಗೆ ಬೆಂಗಳೂರು ಸಾಕ್ಷಿಯಾಗಿದೆ.
ಬೆಂಗಳೂರು, ಮಾರ್ಚ್. 01: ತನ್ನನ್ನು ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಯ ಮೇಲೆ 16 ಬಾರಿ ಚಾಕುವಿನಿಂದ ಇರಿದು ಭಗ್ನ ಪ್ರೇಮಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಇತ್ತೀಚೆಗೆ ಇಂತಹ ಪ್ರೇಮ ಸಂಬಂಧಿತ ಕೊಲೆ ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿದ್ದು, ಅವುಗಳ ಪಟ್ಟಿಗೆ ಮತ್ತೊಂದು ಸೇರಿದೆ.
ಮಂಗಳವಾರ ಪೂರ್ವ ಬೆಂಗಳೂರಿನ ಮುರುಗೇಶಪಾಳ್ಯದಲ್ಲಿರುವ ಒಮೆಗಾ ಹೆಲ್ತ್‌ಕೇರ್‌ನ ಬಳಿ ಘಟನೆ ನಡೆದಿದೆ. 28 ವರ್ಷದ ಭಗ್ನ ಪ್ರೇಮಿ ದಿನಕರ್ ಬನಾಲಾ, 25 ವರ್ಷದ ಲೀಲಾ ಪವಿತ್ರಾ ನಳಮತಿ ಎಂಬುವವರನ್ನು ಕೊಲೆ ಮಾಡಿದ್ದಾರೆ. ಮದುವೆಯಾಗಲು ನಿರಾಕರಿಸಿದ ನಂತರ ಸಾರ್ವಜನಿಕವಾಗಿ 16 ಬಾರಿ ಆಕೆಯನ್ನು ಇರಿದಿದ್ದಾನೆ. ಕೆಲಸದ ಸ್ಥಳದಿಂದ ಆಕೆ ಹೊರಬಂದ ನಂತರ ಆರೋಪಿ ಆಕೆಯೊಂದಿಗೆ ವಾಗ್ವಾದ ಮಾಡಿಕೊಂಡು, ಕೃತ್ಯ ಎಸಗಿದ್ದಾನೆ.

ಯುವತಿ ಲೀಲಾ ಪವಿತ್ರಾ ನಳಮತಿ ಕೆಲಸ ಮುಗಿಸಿಕೊಂಡು ಹೊರನಡೆದ ಕೂಡಲೇ ಈ ಕೊಲೆ ನಡೆದಿದೆ. ಆರೋಪಿ ದಿನಕರ್ ಬನಾಲಾ ಆಕೆಯ ಕಚೇರಿಯ ಹೊರಗೆ ಆಕೆಗಾಗಿ ಕಾಯುತ್ತಿದ್ದರು. ಆಕೆ ಹೊರ ಬಂದ ತಕ್ಷಣ ಆಕೆಯೊಂದಿಗೆ ವಾಗ್ವಾದಕ್ಕಿಳಿದು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆಕೆ ಮದುವೆಯಾಗಲು ನಿರಾಕರಿಸಿದ ನಂತರ, ದಿನಕರ್ ತನ್ನ ಪ್ಯಾಂಟ್ ಜೇಬಿನಿಂದ ಚಾಕುವನ್ನು ತೆಗೆದು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಲೀಲಾ ಪವಿತ್ರಾ ನಳಮತಿ ಅವರ ಕುತ್ತಿಗೆ, ಎದೆ, ಹೊಟ್ಟೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಆಕೆಯ ದೇಹದ ಮೇಲೆ ಸುಮಾರು 16 ಬಾರಿ ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಆರೋಪಿ ದಿನಕರ್ ಬನಾಲಾ ಅವರನ್ನು ಬಂಧಿಸಿದ್ದಾರೆ.
ಘಟನೆಯನ್ನು ದೃಢಪಡಿಸಿದ ಉಪ ಪೊಲೀಸ್ ಆಯುಕ್ತ (ಪೂರ್ವ) ಭೀಮಾಶಂಕರ್ ಎಸ್ ಗುಳೇದ್, ಯುವತಿಗೆ 10 ಕ್ಕೂ ಹೆಚ್ಚು ಬಾರಿ ಇರಿದಿದ್ದಾರೆ ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ನಿಖರವಾದ ಲೆಕ್ಕಾಚಾರ ಸಿಗಲಿದೆ ಎಂದು ಮಾಗಿತಿ ನೀಡಿದ್ದಾರೆ.

ಲೀಲಾ ಪವಿತ್ರಾ ಅವರು ಆಂಧ್ರಪ್ರದೇಶದ ಕಾಕಿನಾಡದ ಜಗನ್ನಾಥಪುರದಲ್ಲಿ ಎಂಎಸ್ಸಿ ಪದವೀಧರರಾಗಿದ್ದರು. ದಿನಕರ್ ಬನಾಲಾ ಅವರು ಆಂಧ್ರಪ್ರದೇಶದ ಶ್ರೀಕಾಕುಳಂನ ನರಸನ್ನಪೇಟೆಯವರು. ಇಬ್ಬರು ದೊಮ್ಮಲೂರಿನಲ್ಲಿ ಲಾಜಿಸ್ ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದು, ಹತ್ತಿರದ ಪೇಯಿಂಗ್ ಗೆಸ್ಟ್‌ನಲ್ಲಿ ವಾಸಿಸುತ್ತಿದ್ದರು. ಐದು ವರ್ಷಗಳ ಹಿಂದೆ ಹೆಲ್ತ್‌ಕೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಇಬ್ಬರೂ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ನಿರ್ಧರಿಸಿದರು.
ಈ ನಡುವೆ ಆರೋಪಿ ದಿನಕರ್ ಬನಾಲಾ ಬೇರೆ ಜಾತಿಗೆ ಸೇರಿದ ಕಾರಣ ಲೀಲಾಳ ಪೋಷಕರು ಈ ಸಂಬಂಧವನ್ನು ವಿರೋಧಿಸಿದ್ದರು. ಮದುವೆಗೆ ಒಪ್ಪಿರಲಿಲ್ಲ. ತಂದೆ ತಾಯಿಯ ಮಾತು ಕೇಳಿ ಆಕೆಯು ಮದುವೆಯಾಗಲು ನಿರಾಕರಿಸಿದ್ದರು. ಆರೋಪಿಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು. ಇದರಿಂದ ಕೋಪಗೊಂಡ ದಿನಕರ್, ಆಕೆ ಕೆಲಸ ಮಾಡುವ ಕಚೇರಿಯ ಬಳಿ ಬಂದು ಆಕೆ ಜೊತೆಗೆ ವಾಗ್ವಾದ ನಡೆಸಿದ್ದಾರೆ.
ಪೊಲೀಸರು ಆರೋಪಿ ದಿನಕರ್ ಬನಾಲಾ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಲೀಲಾ ಪವಿತ್ರಾ ನಳಮತಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಯುವತಿಯ ಕುಟುಂಬದವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು











Click it and Unblock the Notifications