ಅ.10ರಿಂದ 'ಜ್ಯುವೆಲ್ಸ್‌ ಆಫ್ ಇಂಡಿಯಾ' ಆಭರಣ ಮೇಳ

ಬೆಂಗಳೂರು, ಅ.8 : ದೇಶದ ಸುಪ್ರಸಿದ್ಧ ಆಭರಣ ತಯಾರಕರು ವಿನ್ಯಾಸಗೊಳಿಸಿದ ಬಗೆಬಗೆಯ ವಿನ್ಯಾಸದ ಆಭರಣಗಳ ಮೇಳ 'ಜ್ಯುವೆಲ್ಸ್‌ ಆಫ್‌ ಇಂಡಿಯಾ' ಅ.10ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಮೇಳವನ್ನು ಆಯೋಜಿಸಲಾಗಿದೆ.

ನಟಿ ಪ್ರಣೀತಾ ಮತ್ತು ಅನುಪ್ರಭಾಕರ್ ಜ್ಯುವೆಲ್ಸ್‌ ಆಫ್ ಇಂಡಿಯಾದ ರಾಯಭಾರಿಗಳಾಗಿದ್ದು, ಅ.10ರಂದು ವಿಠ್ಠಲ್‌ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ನಾಲ್ಕು ದಿನಗಳ ಮೇಳವನ್ನು ಉದ್ಘಾಟಿಸಲಿದ್ದಾರೆ. ಅ.10 ರಿಂದ 13ರತನಕ ಆಭರಣ ಮೇಲೆ ನಡೆಯಲಿದೆ.

Jewels of India exhibition

ದೇಶದ ವಿವಿಧ ರಾಜ್ಯಗಳ ಸುಮಾರು 100ಕ್ಕೂ ಹೆಚ್ಚು ಪ್ರಸಿದ್ಧ ಆಭರಣ ತಯಾರಕರು ಸಿದ್ಧಪಡಿಸಿದ ಆಭರಣಗಳು ಒಂದೇ ಸೂರಿನಡಿ ಲಭ್ಯವಾಗಲಿವೆ ಎಂದು ಮೇಳದ ಆಯೋಜಕರಾದ ಸಂದೀಪ್ ಬೇಕಲ್ ಹೇಳಿದ್ದಾರೆ. ಸಾಂಪ್ರದಾಯಿಕ ಆಭರಣಗಳು ಸೇರಿದಂತೆ ವಿವಿಧ ಬಗೆಯ ಆಭರಣಗಳು ಪ್ರದರ್ಶನದಲ್ಲಿ ದೊರೆಯಲಿವೆ ಎಂದು ಸಂದೀಪ್ ಮಾಹಿತಿ ನೀಡಿದ್ದಾರೆ. [ಮುಂಬೈ: ಚಿನ್ನದ ಅಂಗಿ ತೊಟ್ಟ ಉದ್ಯಮಿ ಪಂಕಜ]

ಜೈಪುರದ ಮೀನಾಕುಮಾರಿ, ರಾಜಸ್ಥಾನದ ಥೆವಾ, ಕೊಲ್ಕತ್ತಾದ ಕರಕುಶಲ ಆಭರಣಗಳು, ಉತ್ತರ ಭಾರತ ಮತ್ತು ಗುಜರಾತಿ ಶೈಲಿಯ ಆಭರಣಗಳು, ದಕ್ಷಿಣ ಭಾರತದ ಮೆಚ್ಚಿನ ವಿಸ್ಯಾಸಗಳು, ವಧು ಸಂಗ್ರಹ, ಪುರುಷರ ಆಭರಣಗಳು ಸೇರಿದಂತೆ ಹಲವು ವಿಸ್ಯಾಗಳ ಆಭರಣಗಳು ಜ್ಯುವೆಲ್ಸ್ ಆಫ್ ಇಂಡಿಯಾ ಪ್ರದರ್ಶನದಲ್ಲಿ ದೊರೆಯಲಿವೆ. [ನಟಿ ಅನು ಪ್ರಭಾಕರ್ ವಿಚ್ಛೇದನ ಕೋರಿ ಅರ್ಜಿ]

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಟಿ ಅನುಪ್ರಭಾಕರ್, ಸಾಂಪ್ರದಾಯಿಕ ಆಭರಣಗಳು ನನಗಿಷ್ಟ. ಬೆಂಗಳೂರಿನ ಮಹಿಳೆಯರು ಆಭರಣ ಮೇಳಕ್ಕೆ ಬಂದು ನೂರಾರು ಬಗೆಯ ಆಭರಣಗಳನ್ನು ನೋಡುವುದರ ಜೊತೆಗೆ ಶಾಪಿಂಗ್ ಅನುಭೂತಿಯನ್ನು ಕಣ್ತುಂಬಿಕೊಳ್ಳಬೇಕು ಎಂದು ಮನವಿ ಮಾಡಿದರು. [ಇಂದಿನ ಚಿನ್ನದ ದರ ನೋಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+