ರಾಜ್ಯ ಸರಕಾರದ ವಿರುದ್ಧ ಸೆ. 21ರಂದು ಜೆಡಿಎಸ್ ಪ್ರತಿಭಟನೆ
ಬೆಂಗಳೂರು, ಸೆಪ್ಟೆಂಬರ್ 20: ರಾಜ್ಯ ಸರಕಾರದ ವಿರುದ್ಧ ನಾಳೆ ಅಂದರೆ ಸೆಪ್ಟೆಂಬರ್ 21ರಂದು ಜಾತ್ಯಾತೀತ ಜನತಾ ದಳ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಂಗಳೂರಿನ ಪುಟ್ಟಣ್ಣಚಟ್ಟಿ ಪುರಭವನದ ಮುಂಭಾಗ ಪ್ರತಿಭಟನೆ ನಡೆಯಲಿದೆ.
"ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಸುರಿದ ಮಳೆಯಿಂದ ರಸ್ತೆಗಳು ಹದಗೆಟ್ಟಿವೆ. ಒಳಚರಂಡಿ ಹಾಗೂ ಕಾಲುವೆಗಳಲ್ಲಿ ಸರಿಯಾಗಿ ನೀರು ಹರಿಯುತ್ತಿಲ್ಲ. ರಸ್ತೆಗಳ ದುರಸ್ಥಿ, ಡಾಂಬರೀಕರಣ, ಒಳಚರಂಡಿಗಳ ದುರಸ್ಥಿ ಹಾಗೂ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿದೆ," ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜೆಡಿಎಸ್ ಆರೋಪಿಸಿದೆ.

ಈ ಕಳಪೆ ಕಾಮಗಾರಿಗಳಿಂದ ಬೆಂಗಳೂರಿಗರ ಜೀವನ ಅಸ್ತವ್ಯಸ್ಥವಾಗಿದೆ. ಹೀಗಾಗಿ ಈ ಕಳಪೆ ಕಾಮಗಾರಿಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಜೆಡಿಎಸ್ ಪ್ರತಿಭಟನೆ ಹಮ್ಮಿಕೊಂಡಿದೆ.
ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಎಂ.ಎಸ್ ನಾರಾಯಣ ರಾವ್, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶಾಸಕರಾದ ಕೆ ಗೋಪಾಲಯ್ಯ, ಟಿ ಶರವಣ, ಉಪಮಹಾಪೌರ ಎಂ ಆನಂದ್ ಭಾಗವಹಿಸಲಿದ್ದಾರೆ.












Click it and Unblock the Notifications