Kannada: ರಾಜ್ಯೋತ್ಸವದಂದೆ ಕನ್ನಡಕ್ಕೆ ಅಜ್ಞಾನಿ ಜಮೀರ್ ಅಹ್ಮದ್ ಖಾನ್ ಅವಮಾನ: ಜೆಡಿಎಸ್
ಬೆಂಗಳೂರು, ನವೆಂಬರ್ 02: ಕನ್ನಡ ರಾಜ್ಯೋತ್ಸವದಂದೆ ಕನ್ನಡ ಭಾಷೆಗೆ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಅಪಮಾನ ಮಾಡಿದ್ದಾರೆ. ಕನ್ನಡದ ಹಿನ್ನೆಲೆ ಗೊತ್ತಿಲ್ಲದ ಸಚಿವರು ಮಾತನಾಡಿದ್ದಾರೆ. ಕನ್ನಡ ಬಗ್ಗೆ ತಪ್ಪು ಸಂದೇಶ ರವಾನಿಸಿ ಅಪಮಾನ ಮಾಡಿದ್ದಾರೆ ಎಂದು ಜೆಡಿಎಸ್ ಗುಡುಗಿದಿದೆ. ಇತಿಹಾಸದ ಜ್ಞಾನವಿಲ್ಲದ ಅಜ್ಞಾನಿ ಎಂದು ಜೆಡಿಎಸ್ ಗುಡುಗಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಜನತಾದಳ (ಜಾತ್ಯಾತೀತ), ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಗುಡುಗಿದೆ. "ಕನ್ನಡ ರಾಜ್ಯೋತ್ಸವ ದಿವದಂತೆ ಭಾಷೆ ಹಿನ್ನೆಲೆ ಗೊತ್ತಿಲ್ಲದೇ ಮಾತನಾಡಿರುವುದು ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 2000 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಕನ್ನಡ ಭಾಷೆ ಹಾಗೂ ಕರ್ನಾಟಕ ಇತಿಹಾಸದ ಜ್ಞಾನವಿಲ್ಲದ ಅಜ್ಞಾನಿ B.Z.ಜಮೀರ್ ಅಹ್ಮದ್ ಖಾನ್ ಗೆ ನಾಚಿಕೆಯಾಗಬೇಕು'.

ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಶಾಸ್ತ್ರೀಯ ಭಾಷೆ ಸ್ಥಾನಮಾನ ಹೊಂದಿರುವ ಕನ್ನಡದ ಬಗ್ಗೆ ಸಚಿವ ಜಮೀರ್ ರಾಜ್ಯದ ಜನರಿಗೆ ತಪ್ಪು ಸಂದೇಶಗಳನ್ನು ನೀಡಿ ಅಪಮಾನ ಮಾಡಿದ್ದಾರೆ. ಇದನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇಂತಹ ಬೇಜವಾಬ್ದಾರಿ, ಅವಿವೇಕಿ ಮಂತ್ರಿ ಜಮೀರ್‌ರನ್ನು ಸಂಪುಟದಿಂದ ಮೊದಲು ವಜಾಗೊಳಿಸಿ' ಎಂದು ಆಗ್ರಹಿಸಿದೆ. ರಾಜ್ಯೋತ್ಸವ ವೇದಿಕೆಯ ಭಾಷಣದಲ್ಲಿ ಅವರು ಮಾತನಾಡಿದ ವಿಡಿಯೋ ಹಂಚಿಕೊಳ್ಳಲಾಗಿದೆ. ಆ ವಿಡಿಯೋ ವೈರಲ್ ಆಗುತ್ತಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದೇನು?
ಕನ್ನಡ ರಾಜ್ಯೋತ್ಸವ ಭಾಷಣದಲ್ಲಿ ಎರಡು ಬಾರಿ ಜಮೀರ್ ಅಹ್ಮದ್ ಖಾನ್ ಅವರು "ತಪ್ಪು ಮಾಹಿತಿ ಉಚ್ಛಾರ ಮಾಡಿದ್ದಾರೆ. ಕನ್ನಡ ಭಾಷೆಗೆ 200 ವರ್ಷಗಳ ಇತಿಹಾಸ ಇದೆ. ನಾಲ್ಕೈದು ಭಾಷೆಗಳಲ್ಲಿ ಕನ್ನಡ ಒಂದು ಎಂದು ಹೇಳುತ್ತೇನೆ. 1993ರಲ್ಲಿ ಕನ್ನಡ ಅಂತಾ ನಾಮಕರಣ ಮಾಡಲಾಗಿದೆ' ಎಂದು ಜೆಡಿಎಸ್ ಆರೋಪಿಸಿದೆ.
1973ರಲ್ಲಿ ಕರ್ನಾಟಕ ಎಂದು ನಾಮಕರಣವಾಗಿತ್ತು. ಆದರೆ ಜಮೀರ್ ಅವರು, 1993ರಲ್ಲಿ ಕರ್ನಾಟಕ ಅಂತಾ ಕರೆಯಲಾಯಿತು ಎಂದು ತಿಳಿಸಿದ್ದಾರೆ. ಜೊತೆಗೆ 2000 ವರ್ಷಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ 200 ವರ್ಷಗಳ ಇತಿಹಾಸ ಇದೆ ಎಂದು ಮಾತನಾಡಿದ್ದಾರೆ. ರಾಜ್ಯೋತ್ಸವ ಸಂಭ್ರಮದ ದಿನದಂದೆ ಕನ್ನಡ ಭಾಷೆ ಇತಿಹಾಸ ಬಗ್ಗೆ ಅರಿವಿಲ್ಲದೇ ಮಾತನಾಡಿದ್ದನ್ನು ಕನ್ನಡಿಗರು ಖಂಡಿಸಿದ್ದಾರೆ. ಜನತಾದಳ ಪಕ್ಷವು ಸಹ ಆಕ್ರೋಶ ಹೊರ ಹಾಕಿದೆ.












Click it and Unblock the Notifications