ಮೊಮ್ಮಕ್ಕಳನ್ನು ಹೊಗಳಿದ ದೇವೇಗೌಡ: ಪ್ರಜ್ವಲ್‌ಗೆ ಕಿವಿಮಾತು

ಬೆಂಗಳೂರು, ಜೂನ್ 26: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಸಂಸತ್‌ನಲ್ಲಿ ನಿನ್ನೆ ಬರ, ಕುಡಿಯುವ ನೀರು ಮತ್ತು ರೈತರ ಮಾತನಾಡಿದ್ದು, ದೇವೇಗೌಡ ಅವರಿಗೆ ಅತೀವ ಸಂತಸ ತಂದಿದೆ. ನಿನ್ನೆಯೇ ಮೊಮ್ಮಗನಿಗೆ ಕರೆ ಮಾಡಿ ಅಭಿನಂದನೆಯನ್ನೂ ದೇವೇಗೌಡ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ ಅವರು, ಪ್ರಜ್ವಲ್ ರೇವಣ್ಣ ಅವರೊಂದಿಗೆ ನಿನ್ನೆ ದೂರವಾಣಿಯಲ್ಲಿ ಮಾತನಾಡಿದೆ, ಮೊದಲ ಭಾಷಣದ ಬಗ್ಗೆ ಅಭಿನಂದನೆಗಳನ್ನು ಸಲ್ಲಿಸಿದೆ ಎಂದರು.

ಪ್ರಜ್ವಲ್ ರೇವಣ್ಣ ಅವರಿಗೆ ಕೆಲವು ಸಲಹೆಗಳನ್ನೂ ನೀಡಿದ್ದೇನೆ ಎಂದ ದೇವೇಗೌಡ, ವಿಚಾರವನ್ನು ಮಂಡಿಸುವ ಭರಾಟೆಯಲ್ಲಿ ಉದ್ವೇಗ ಬೇಡ. ವಿಚಾರವನ್ನು ಪರಿಪೂರ್ಣವಾಗಿ ಮಂಡನೆ ಮಾಡು. ಜೆಡಿಎಸ್‌ನಿಂದ ನಿನೊಬ್ಬನೇ ಸಂಸದ. ಕಾವೇರಿ, ಕೃಷ್ಣ ನದಿ ನೀರು ನಮ್ಮ ಹಕ್ಕು ಎಂಬುದನ್ನು ಮಂಡಿಸು," ಎಂದು ಕಿವಿಮಾತು ಹೇಳಿದ್ದಾಗಿ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ, ರೈತ ಎಚ್‌.ಡಿ.ರೇವಣ್ಣ ಅವರ ಪುತ್ರ, ಊರಿನಲ್ಲಿ ಉತ್ತಮ ಬೆಳೆ ಬೆಳೆದಿದ್ದಾನೆ, ನಿಮಗೆ ಅನುಮಾನವಿದ್ದರೆ ಬನ್ನಿ ತೋರಿಸಿಕೊಂಡು ಬರುತ್ತೇನೆ ಎಂದು ದೇವೇಗೌಡ ಅವರು ಹೇಳಿದರು.

ಹಾಸನದಲ್ಲಿ ಕೃಷಿ ಮಾಡಿರುವ ಪ್ರಜ್ವಲ್‌

ಹಾಸನದಲ್ಲಿ ಕೃಷಿ ಮಾಡಿರುವ ಪ್ರಜ್ವಲ್‌

ಪ್ರಜ್ವಲ್ ರೇವಣ್ಣ, ರೈತ ಎಚ್‌.ಡಿ.ರೇವಣ್ಣ ಅವರ ಪುತ್ರ, ಊರಿನಲ್ಲಿ ಉತ್ತಮ ಬೆಳೆ ಬೆಳೆದಿದ್ದಾನೆ, ನಿಮಗೆ ಅನುಮಾನವಿದ್ದರೆ ಬನ್ನಿ ತೋರಿಸಿಕೊಂಡು ಬರುತ್ತೇನೆ ಎಂದು ದೇವೇಗೌಡ ಅವರು ಹೇಳಿದರು.

'ನಿಖಿಲ್ ಕುಮಾರಸ್ವಾಮಿಗೂ ಕೃಷಿಯ ಬಗ್ಗೆ ಆಸಕ್ತಿ'

'ನಿಖಿಲ್ ಕುಮಾರಸ್ವಾಮಿಗೂ ಕೃಷಿಯ ಬಗ್ಗೆ ಆಸಕ್ತಿ'

ನಿಖಿಲ್ ಕುಮಾರಸ್ವಾಮಿ ಸಹ ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರೆ, ಕುಮಾರಸ್ವಾಮಿ ಕೊಂಡಿರುವ ಜಮೀನಿನಲ್ಲಿ ಕೃಷಿ ಮಾಡಿದ ಅನುಭವ ಇದೆ ಅಷ್ಟೆ ಅಲ್ಲದೆ, ಮಂಡ್ಯದಲ್ಲಿ ಈಗ ಜಮೀನು ತೆಗೆದುಕೊಂಡಿದ್ದು, ಅಲ್ಲಿ ಕೃಷಿ ಮಾಡಲಿದ್ದಾರೆ ಎಂದು ನಿಖಿಲ್ ಅವರನ್ನೂ ದೇವೇಗೌಡ ಹೊಗಳಿದ್ದಾರೆ.

'ರೈತರ ಬಗ್ಗೆ ಮಾತನಾಡದ ಸುಮಲತಾ ಬಗ್ಗೆ ನೊ ಕಮೆಂಟ್'

'ರೈತರ ಬಗ್ಗೆ ಮಾತನಾಡದ ಸುಮಲತಾ ಬಗ್ಗೆ ನೊ ಕಮೆಂಟ್'

ಮಂಡ್ಯ ಸಂಸದೆ ಸುಮಲತಾ ಅವರಿಗೆ ಪರೋಕ್ಷ ಟಾಂಗ್ ನೀಡಿರುವ ದೇವೇಗೌಡ ಅವರು, ಮಂಡ್ಯದಲ್ಲಿ ಆಗುತ್ತಿರುವ ಪ್ರತಿಭಟನೆ, ರೈತರ ಆತ್ಮಹತ್ಯೆ ಬಗ್ಗೆ ಸಂಸತ್‌ನಲ್ಲಿ ಮಾತನಾಡದ ಮಂಡ್ಯದ ಸಂಸದೆ ಬಗ್ಗೆ ನಾನು ಮಾತನಾಡುವುದಿಲ್ಲ, ಅವರ ಬಗ್ಗೆ ನಾನೇಕೆ ಕಮೆಂಟ್ ಮಾಡಲಿ ಎಂದು ದೇವೇಗೌಡ ಅವರು ಹೇಳಿದರು.

ಸಂಸತ್‌ನಲ್ಲಿ ಗಮನ ಸೆಳೆವ ಭಾಷಣ ಮಾಡಿದ ಪ್ರಜ್ವಲ್

ಸಂಸತ್‌ನಲ್ಲಿ ಗಮನ ಸೆಳೆವ ಭಾಷಣ ಮಾಡಿದ ಪ್ರಜ್ವಲ್

ಪ್ರಜ್ವಲ್ ರೇವಣ್ಣ ಅವರು ನಿನ್ನೆ ಸಂಸತ್‌ನಲ್ಲಿ ಮೊದಲ ಭಾಷಣ ಮಾಡಿದರು. ಅವರು ರಾಜ್ಯದ ಬರ, ಕುಡಿಯುವ ನೀರಿನ ಸಮಸ್ಯೆ ಜೊತೆಗೆ ರೈತರ ಆತ್ಮಹತ್ಯೆಯ ಬಗ್ಗೆ ಮಾತನಾಡಿದರು. ಅಷ್ಟೆ ಅಲ್ಲದೆ, ಸಂಸದ ತೇಜಸ್ವಿ ಸೂರ್ಯ ಸಂಸತ್‌ನಲ್ಲಿ ರಾಜ್ಯ ಮೈತ್ರಿ ಸರ್ಕಾರದ ವಿರುದ್ಧ ಮಾಡಿದ ಆರೋಪಕ್ಕೆ ತಕ್ಕ ಉತ್ತರವನ್ನೂ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+