ಕರ್ನಾಟಕದ ಇಂದಿನ ಸ್ಥಿತಿಗತಿ ಕೇಂದ್ರದ ಮುಂದಿಟ್ಟ HD ದೇವೇಗೌಡರು
ಬೆಂಗಳೂರು, ಸೆಪ್ಟಂಬರ್ 27: ಕರ್ನಾಟಕದಲ್ಲಿ ಬರಗಾಲ ಎದುರಾಗಿದ್ದು, ಕಾವೇರಿ ನೀರಿನ ವಿವಾದ ಹೆಚ್ಚಾಗಿದೆ. ರೈತರ ಸಮಸ್ಯೆಗಳು ಸಾಕಷ್ಟಿವೆ. ಇದೆಲ್ಲದ ಮಧ್ಯೆ ಲೋಕಸಭೆಗೆ ಸಜ್ಜಾಗುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿವೆ. ಈ ವೇಳೆ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಕೇಂದ್ರ ಸರ್ಕಾರದ ಜೊತೆಗೆ ರಾಜ್ಯದ ವಿಚಾರಗಳನ್ನು ಚರ್ಚೆ ಮಾಡಿರುವುದಾಗಿ ತಿಳಿಸಿದ್ದಾರೆ.
ಬುಧವಾರ ಎಚ್‌ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ದೇವೇಗೌಡರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು. ಅಲ್ಲದೇ ಮೈತ್ರಿ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರನ್ನ ಭೇಟಿ ಆಗುವ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾನು ಭೇಟಿ ಮಾಡಿ ಕೆಲವು ವಿಚಾರಗನ್ನು ತಿಳಿಸಿದ್ದೇನೆ.

ಬಿಜೆಪಿ ನಾಯಕರ ಬೇಟಿಯನ್ನು ಕದ್ದು ಮುಚ್ಚಿ ಮಾತನಾಡುವ ಅಗತ್ಯ ಇಲ್ಲ. ಕರ್ನಾಟಕ ಪರಿಸ್ಥಿತಿ ಏನಿದೆ ಎಂದು ಎಲ್ಲವನ್ನು ನಾನು ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ. ರಾಜ್ಯದ ವಿಚಾರಗಳನ್ನು ಮೊದಲು ಸರಿಪಡಿಸಿ ನಂತರವೇ ಕುಮಾರಸ್ವಾಮಿ ಅವರು ಬಂದು ನಿಮ್ಮ ಬಳಿ ಪಕ್ಷದ ವಿಚಾರಗಳನ್ನು ಮಾತನಾಡುತ್ತಾರೆ ಎಂದು ತಿಳಿಸಿದ್ದೇವೆ ಎಂದು ಅವರು ಹೇಳಿದರು.
ಸರ್ಕಾರ ಬಿಳಿಸಿದ್ದು ಗೊತ್ತಿದೆ: ಕಾಂಗ್ರೆಸ್ ಮೇಲೆ ಗೌಡರು ಕಿಡಿ
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಯಾವುದೇ ಸಮುದಾಯಕ್ಕೆ ಈ ಪಕ್ಷದಿಂದ ಅನ್ಯಾಯ ಆಗಲು ಬಿಟ್ಟಿಲ್ಲ. ಇವತ್ತು ಯಾಕೆ ಹೀಗಾಗುತ್ತಿದೆ, ಯಾರು ಇದಕ್ಕೆ ಕಾರಣ. ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ಸರ್ಕಾರ ತೆಗೆದದ್ದು ಯಾರು? ಎಂದು ಕಾವೇರಿ ನೀರು, ರೈತರ ಸಮಸ್ಯೆ, ಅಭಿವೃದ್ಧಿ ವಿಚಾರಗಳನ್ನು ಹೆಸರಿಸದೇ ನೇರವಾಗಿ ಕಾಂಗ್ರೆಸ್ ವಿರುದ್ಧ ಎಚ್‌ಡಿ ದೇವೇಗೌಡರು ವಾಗ್ದಾಳಿ ನಡೆಸಿದರು.
ಕೇಂದ್ರ ನಾಯಕರ ಜೊತೆಗೆ ಮಾತನಾಡುವ ಮೂಲಕ ರಾಜ್ಯದ ಸ್ಥಳೀಯ ಪಕ್ಷ ಜೆಡಿಎಸ್ ಕರ್ನಾಟಕದ ಸಮಸ್ಯೆಗಳನ್ನು ಕೇಂದ್ರ ನಾಯಕರಿಗೆ ತಲುಪಸಿದೆ ಎಂದು ಜೆಡಿಎಸ್ ಕಾರ್ಯಕರ್ತರು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ದೂರಿದ ಬಿಜೆಪಿ-ಜೆಡಿಎಸ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿವೆ. ಅಷ್ಟರಲ್ಲಾಗಲೇ ಕಾವೇರಿ ವಿವಾದ ಭುಗಿಲೆದ್ದು ಬೆಂಗಳೂರು ಬಂದ್ ಆಗಿದೆ. ರೈತರು ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಬಿಜೆಪಿ-ಜೆಡಿಎಸ್ ಒಟ್ಟಾಗಿ ಪ್ರತಿಭಟನೆಗೆ ಮುಂದಾಗಿದೆ. ಗಾಂಧಿ ಪ್ರತಿಮೆ ಬಳಿಕ ಧರಣಿ ಹಮ್ಮಿಕೊಂಡಿವೆ.
ಈ ಬಾರಿ ಕರ್ನಾಟಕದಲ್ಲಿ ಮಳೆ ಕೊರತೆ ಉಂಟಾಗಿ ಬರಗಾಲ ಘೋಷಣೆ ಕುರಿತು ಕಾಂಗ್ರೆಸ್ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿತ್ತು. ತಡವಾಗಿ ಘೋಷಣೆ ಮಾಡಿತೇ ಹೊರತು ಇನ್ನೂವರೆಗೆ ಪರಿಹಾರ ದೊರೆತಿಲ್ಲ. ಅಲ್ಲದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಒಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೂರಿದ್ದಾರೆ.
ಇದೀಗ ಕಾವೇರಿ ವಿಚಾರದಲ್ಲಿ ಸರ್ಕಾರ ನಿರ್ಧಾರ, ನಿಲುವುಗಳನ್ನು ಖಂಡಿಸಿ ನಡೆದ ಬೆಂಗಳೂರು ಬಂದ್ ಬೆನ್ನಲ್ಲೆ ಶುಕ್ರವಾರ ಸೆಪ್ಟಂಬರ್ 29ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ನಿರ್ಧಾರ ಮಾಡಿವೆ.












Click it and Unblock the Notifications