ಜಯ ವಿರುದ್ಧದ ತೀರ್ಪು ಶನಿವಾರ ಏನೇನಾಯ್ತು?

ಬೆಂಗಳೂರು, ಸೆ. 27 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಹೊರಬಿದ್ದಿದ್ದು 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ. ಪರಪ್ಪನ ಅಗ್ರಹಾರದ ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ತನ್ನ ತೀರ್ಪನ್ನು ಪ್ರಕಟಿಸಿದ್ದು, 18 ವರ್ಷಗಳ ಕಾನೂನು ಹೋರಾಟ ಅಂತ್ಯಗೊಂಡಿದೆ.

ಶನಿವಾರ ಬೆಳಗ್ಗೆ 9.40ಕ್ಕೆ ವಿಶೇಷ ವಿಮಾನದಲ್ಲಿ ಚೆನ್ನೈನಿಂದ ಬೆಂಗಳೂರಿನ ಎಚ್‌ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದರು, ಪ್ರಕರಣದಲ್ಲಿನ ಎಲ್ಲಾ ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದು ಎಲ್ಲರಿಗೂ 4 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರು ಶನಿವಾರ ಈ ತೀರ್ಪು ನೀಡಿದ್ದು, ಈ ವೇಳೆ ಮುಖ್ಯಮಂತ್ರಿ ಜಯಲಲಿತಾ ಹಾಗೂ ಇತರೆ ಮೂವರು ಆರೋಪಿಗಳಾದ ಸುಧಾಕರನ್, ಶಶಿಕಲಾ ಹಾಗೂ ಇಲವರಸಿ ಕೋರ್ಟ್‌ನಲ್ಲಿ ಹಾಜರಿದ್ದರು. [ಜೈಲಲ್ಲಿರುವ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ]

ಸಮಯ 6 ಗಂಟೆ : ಪರಪ್ಪನ ಅಗ್ರಹರಾ ಜೈಲಿಗೆ ಜಯಲಲಿತಾ ಶಿಫ್ಟ್‌, 7.30ಕ್ಕೆ ಕೈದಿ ಸಂಖ್ಯೆ ನೀಡಲಿರುವ ಜೈಲಿನ ಅಧಿಕಾರಿಗಳು

ಸಮಯ 5.15 : ಪರಪ್ಪನ ಅಗ್ರಹಾರ ಕಾರಾಗೃಹತ ವೈದ್ಯರಿಂದ ಜಯಲಲಿತಾ ವೈದ್ಯಕೀಯ ಪರೀಕ್ಷೆ

ಸಮಯ 5 ಗಂಟೆ : ಜಯಲಲಿತಾ ಅವರಿಗೆ 100 ಕೋಟಿ ದಂಡ ವಿಧಿಸಲಾಗಿದೆ.

ಸಮಯ 4.54 : ಇದೀಗ ಬಂದ ಮಾಹಿತಿಯಂತೆ ಜಯಲಲಿತಾಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ

ಸಮಯ 4.41 : ಪರಪ್ಪನ ಅಗ್ರಹಾರ ಜೈಲಿನ ಮುಂದೆ ಪೊಲೀಸರ ಮೇಲೆ ಜಯಾ ಅಭಿಮಾನಿಗಳಿಂದ ಕಲ್ಲು ತೂರಾಟ

ಸಮಯ 4.28 : ಅನಾರೋಗ್ಯದ ಕಾರಣಕ್ಕಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಕೋರ್ಟ್‌ಗೆ ಜಯಲಲಿತಾ ಮನವಿ

ಸಮಯ 4.27 : ಜಯಲಲಿತಾ ತೀರ್ಪಿನ ನಂತರ ಚೆನ್ನೈ ನಿಲ್ದಾಣದಲ್ಲಿ ಉಳಿದ 51 ಕೆಎಸ್‌ಆರ್‌ಟಿಸಿ ಬಸ್

Jayalalithaa

ಸಮಯ 4.23 : ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯದ ಸುತ್ತಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ, ಭಾನುವಾರ ರಾತ್ರಿಯ ತನಕ ಅನ್ವಯ

ಸಮಯ 4.04 : ತಮಿಳುನಾಡಿನ ಅಂಬತ್ತೂರಿನಲ್ಲಿ ಕೆಎಸ್ಆರ್‌ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ

ಸಮಯ 4 ಗಂಟೆ : ಪರಪ್ಪನ ಅಗ್ರಹಾರ ವಿಶೇಷ ನ್ಯಾಯಾಲಯದಲ್ಲಿ ಊಟ ನಿರಾಕರಿಸಿದ ಜಯಲಲಿತಾ, ನೀರು ಕುಡಿದು ಕಲಾಪಕ್ಕ ಹಾಜರ್

ಸಮಯ 3.44 : ವಿಶೇಷ ಕೋರ್ಟ್‌ ಕಲಾಪ ಊಟದ ವಿರಾಮದ ನಂತರ ಪುನಃ ಆರಂಭವಾಗಿದೆ.

ಸಮಯ 3.33 : ಕಂಚಿಪುರಂನಲ್ಲಿ ಅಣ್ಣಾ ಡಿಎಂಕೆ ಕಾರ್ಯಕರ್ತರಿಂದ ಬಸ್ಸಿಗೆ ಬೆಂಕಿ, ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿರುವ ಕಾರ್ಯಕರ್ತರು

ಸಮಯ 3 ಗಂಟೆ : ಚೆನ್ನೈನಲ್ಲಿ ಅಘೋಷಿತ ಬಂದ್, ವಾಹನ ಸಂಚಾರ ವಿರಳ. ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.

ಸಮಯ 2.55 : ಒಂದು ವರ್ಷ ಶಿಕ್ಷೆ ನೀಡುವಂತೆ ಜಯಲಲಿತಾ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಏಳು ವರ್ಷ ಶಿಕ್ಷೆ ನೀಡುವಂತೆ ಸರ್ಕಾರಿ ವಕೀಲರು ಮನವಿ ಮಾಡಿದ್ದಾರೆ.

ಸಮಯ 2.40 : ಜಯಲಲತಾ ಶಾಸಕ ಸ್ಥಾನ ರದ್ದು, ಸುಪ್ರೀಂಕೋರ್ಟ್ ಆದೇಶದ ಅನ್ವಯ ಅವರ ಶಾಸಕ ಸ್ಥಾನ ಅನರ್ಹವಾಗಿದೆ. ತೀರ್ಪಿಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆದರೆ ಮಾತ್ರ ಶಾಸಕ ಸ್ಥಾನ ಉಳಿಯಲಿದೆ.

ಸಮಯ 2.14 : ಜಯಲಲಿತಾ ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಊಟದ ವಿರಾಮ ಮುಗಿದ ಬಳಿಕ ಪುನಃ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ

ಸಮಯ : 2.09 : ಜಯಲಲಿತಾ ಅವರ ಶಿಕ್ಷೆಯ ಪ್ರಮಾಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದೆ [ತಮಿಳುನಾಡು ಮುಂದಿನ ಸಿಎಂ ಯಾರು?]

ಸಮಯ 2 ಗಂಟೆ : ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಬ್ರಹ್ಮಾವರದಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ.

ಸಮಯ 1 ಗಂಟೆ : ಜಯಲಲಿತಾ ಆರೋಪಿ ಎಂದು ಸಾಬೀತಾದ ಹಿನ್ನಲೆಯಲ್ಲಿ ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಕರುಣಾನಿಧಿ ಅವರ ನಿವಾಸದ ಸಮೀಪ ಸಂಭ್ರಮಾಚರಣೆ ಸಾಗಿದೆ.

ಸಮಯ 12.50 : ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ [ಅಕ್ರಮ ಆಸ್ತಿ ಪ್ರಕರಣದ ಸಂಪೂರ್ಣ ವಿವಿರ]

ಸಮಯ 12.48 : ಪರಪ್ಪನ ಅಗ್ರಹಾರ ಕೋರ್ಟ್‌ ಬಳಿ ಪರಿಸ್ಥಿತಿ ನಿಯಂತ್ರಣದಲ್ಲಿದೆ

ಸಮಯ 12.47 : ತಮಿಳುನಾಡಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಸ್ಥಗಿತ, ತಮಿಳುನಾಡಿನಲ್ಲಿ ಕರೆಂಟ್ ಕಟ್

ಸಮಯ 12.25 : ಮಧ್ಯಾಹ್ನ 1 ಗಂಟೆಗೆ ಶಿಕ್ಷೆ ಪ್ರಮಾಣ ಪ್ರಕಟ ಮಾಡಲಿರುವ ಬೆಂಗಳೂರು ವಿಶೇಷ ನ್ಯಾಯಾಲಯ.

ಸಮಯ 12.15 : ಜಯಲಲಿತಾ ವಿರುದ್ಧದ ಆರೋಪ ಸಾಬೀತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಆರೋಪ ಸಾಬೀತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಮಯ 11.16 : ಹೊಸೂರು ರಸ್ತೆ ಜಂಕ್ಷನ್‌ನಲ್ಲಿ ಜನರನ್ನು ಚದುರಿಸಲು ಲಾಠಿ ಚಾರ್ಚ್‌, ಬ್ಯಾರಿಕೇಡ್ ಮುರಿದು ನುಗ್ಗಿದ ಜನರು

ಸಮಯ 11.11 : ಜಯಲಲಿತಾ ಪ್ರಕರಣದ ತೀರ್ಪು ಏನಾಗಲಿದೆ ಎಂಬ ಕುತೂಹಲ ತಮಿಳುನಾಡಿನಲ್ಲಿದೆ. ಒಂದು ವೇಳೆ ಶಿಕ್ಷೆಯಾದರೆ ರಾಜಕೀಯ ಲೆಕ್ಕಾಚಾರಗಳು ಆರಂಭವಾಗಲಿವೆ

ಸಮಯ 11 ಗಂಟೆ : ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಕೋರ್ಟ್‌ ಹಾಲ್‌ಗೆ ಆಗಮಿಸಿದ್ದಾರೆ

ಸಮಯ 10.53 : ಕೋರ್ಟ್‌ಗೆ ಆಗಮಿಸಿದ ಜಯಾ ದತ್ತು ಪುತ್ರ ಸುಧಾಕರನ್, ಜಯಾ ಸ್ನೇಹಿತೆ ಶಶಿಕಲಾ

ಸಮಯ 10.45 : ಪರಪ್ಪನ ಅಗ್ರಹಾರ ತಲುಪಿದ ಜಯಲಲಿತಾ, ಸುಮಾರು 50 ವಾಹನಗಳ ಮೂಲಕ ತಮಿಳುನಾಡು ಸಿಎಂಗೆ ಭದ್ರತೆ [ಜಯಾ ಪ್ರಕರಣದ ನ್ಯಾಯಮೂರ್ತಿಗಳ ಬಗ್ಗೆ ನೋಡಿ ]

ಸಮಯ 10.40 : ಹೊಸೂರು ರಸ್ತೆ ಜಂಕ್ಷನ್‌ನಲ್ಲಿ ಜೈ ಜಯಲಲಿತಾ ಎಂಬ ಘೋಷಣೆ, ಕಾರ್ಯಕರ್ತರತ್ತ ಕೈ ಬೀಸಿದ ಅಮ್ಮಾ

ಸಮಯ : 10.17 : ಹೊಸೂರು ರಸ್ತೆ ಜಂಕ್ಷನ್‌ನತ್ತ ಜಯಲಲಿತಾ

ಸಮಯ 10.10 : ಮಡಿವಾಳ ತಲುಪಿದ ಜಯಲಲಿತಾ

ಸಮಯ 10 ಗಂಟೆ : ಎಚ್ಎಎಲ್‌ ವಿಮಾನ ನಿಲ್ದಾಣದಿಂದ ಹೊರಟ ಜಯಲಲಿತಾ, ರಸ್ತೆ ಮಾರ್ಗದಲ್ಲಿಯೇ ಪ್ರಯಾಣ

ಸಮಯ 9.55 : ವಿಶೇಷ ಬಸ್‌ನಲ್ಲಿಯೇ ವಿಶ್ರಾಂತಿ ಪಡೆದ ಸಿಎಂ ಜಯಲಲಿತಾ, ಲೀಲಾ ಪ್ಯಾಲೇಸ್ ಹೋಟೆಲ್ ಭೇಟಿ ರದ್ದು

ಸಮಯ 9.50: ಪರಪ್ಪನ ಅಗ್ರಹಾರದ ವಿಶೇಷ ಕೋರ್ಟ್‌ಗೆ ಆಗಮಿಸಿದ ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ

ಸಮಯ 9.40 : ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜಯಲಲಿತಾ

ಸಮಯ 9 ಗಂಟೆ : ಜಯಲಿತಾ ಸಂಪುಟದ ಕೆಲವು ಸಚಿವರು ಬೆಂಗಳೂರಿಗೆ ಆಗಮನ, ಪೊಲೀಸರೊಂದಿಗೆ ಕಾರ್ಯಕರ್ತರ ಮಾತಿನ ಚಕಮಕಿ

ಸಮಯ 8.50 : ಚೆನ್ನೈನ ಪೋಯಸ್‌ ಗಾರ್ಡ್‌ನ್‌ನಲ್ಲಿರುವ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ತೆರಳಿದ ಜಯಲಲಿತಾ

ಸಮಯ 8.40 : ಪರಪ್ಪನ ಅಗ್ರಹಾರ ಸುತ್ತಮುತ್ತ ಎಐಎಡಿಎಂಕೆ ಕಾರ್ಯಕರ್ತರು ದಂಡು

ಸಮಯ 8.30 : ಪರಪ್ಪನ ಅಗ್ರಹಾರ, ಎಚ್‌ಎಎಲ್ ವಿಮಾನ ನಿಲ್ದಾಣಗಳ ಸುತ್ತ ಬಿಗಿ ಭದ್ರತೆ

ಸಮಯ 8.15 : ಭದ್ರತೆ ಕಾರಣದಿಂದಾಗಿ ರಸ್ತೆ ಮಾರ್ಗದಲ್ಲಿನ ಪ್ರಯಾಣ ರದ್ದುಗೊಳಿಸಿದ ಪೊಲೀಸರು

ಸಮಯ 8 ಗಂಟೆ : ಜಯಲಲಿತಾ ಕಾರ್ಯಕ್ರಮದಲ್ಲಿ ಬದಲಾವಣೆ, ಹೆಲಿಕಾಪ್ಟರ್‌ ಮೂಲಕ ನ್ಯಾಯಾಲಯಕ್ಕೆ ಪ್ರಯಾಣ

ಪ್ರಕರಣದ ಸಂಕ್ಷಿಪ್ತ ಮಾಹಿತಿ : ಜಯಲಲಿತಾ ಅವರು 1991 ರಿಂದ 1996ರ ಅವಧಿಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 66.65 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಸಂಬಂಧ ದೂರು ದಾಖಲಾಗಿದ್ದು. ಈ ಕುರಿತ ವಿಚಾರಣೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಡೆದಿದ್ದು, ಇಂದು ನ್ಯಾಯಮೂರ್ತಿ ಮೈಕಲ್ ಜಾನ್ ಕುನ್ಹ ಅವರ ಪೀಠ ತೀರ್ಪು ನೀಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+