ಪರಪ್ಪನ ಅಗ್ರಹಾರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಬೆಂಗಳೂರು, ಸೆ. 27 : ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದೆ. ಜಯಾ ದೋಷಿ ಎಂದು ಕೋರ್ಟ್ ತೀರ್ಮಾನ ನೀಡಿದೆ. ಶಿಕ್ಷೆ ಇನ್ನಷ್ಟೇ ಅಧಿಕೃತವಾಗಿ ಹೊರಬೀಳಬೇಕಿದೆ.
ತೀರ್ಪು ರಾಜಕೀಯ ವಲಯದಲ್ಲಿ ಅಲ್ಲದೇ ರಾಜ್ಯಗಳ ನಡುವಿನ ಸಂಬಂಧಗಳ ಮೇಲೆ ಪರಿಣಾಮ ಬೀರಲಿದ ಎನ್ನುವುದರ ಜತೆಗೆ ಇತ್ತ ಬೆಂಗಳೂರಿನಲ್ಲಿ ತಮಿಳು ಪ್ರಾಬಲ್ಯ ಇರುವ ಏರಿಯಾಗಳಲ್ಲಿ ಏನಾಗ್ತಿದೆ ಎಂಬುದು ಅಷ್ಟೇ ಮುಖ್ಯ....(ಜಯಾ ಪ್ರಕರಣದ ನ್ಯಾಯಾಧೀಶರ ಬಗ್ಗೆ ಗೊತ್ತಾ?)

* ಬೆಂಗಳೂರಿನ ಅತ್ತಿಬೆಲೆ ಬಳಿ ಪ್ರತಿಭಟನೆಗೆ ಮುಂದಾದ ಜಯಲಲಿತಾ ಬೆಂಬಲಿಗರ ಬಂಧನ
* ಜಯಲಲಿತಾ ಬೆಂಬಲಿಗರಿಂದ ಪರಪ್ಪನ ಅಗ್ರಹಾರಕ್ಕೆ ನುಗ್ಗಲು ಯತ್ನ, ಪೊಲೀಸರ ಮೇಲೆ ಕಲ್ಲು ತೂರಾಟ
* ಪರಪ್ಪನ ಅಗ್ರಹಾರದ ಸುತ್ತ ಸೆ. 28ರ ಮಧ್ಯರಾತ್ರಿವರೆಗೆ 5 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ಬೆಂಗಳೂರು ಪೊಲೀಸ್ ಆಯುಕ್ತ ಎಂ .ಎನ್ ರೆಡ್ಡಿ ಆದೇಶ
* ಸಂಜೆ 5 ಗಂಟೆ ವರೆಗೂ ಬಸ್ ಬಿಡದರಿಲು ಕೆಎಸ್ ಆರ್‌ಟಿಸಿ ತೀರ್ಮಾನ
* ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದಲೂ ತಮಿಳುನಾಡಿಗೆ ಬಸ್ ಇಲ್ಲ.
* ಬದಲಿ ಮಾರ್ಗದಲ್ಲಿ ತೆರಳುವಂತೆ ಪ್ರಯಾಣಿಕರಿಗೆ ಸೂಚನೆ
* ಗಡಿ ಭಾಗದ ಜಿಲ್ಲೆಗಳಿಂದ ತಮಿಳುನಾಡಿಗೆ ಯಾವುದೆ ಕೆಎಸ್‌ಆರ್‌ಟಿಸಿ ಬಸ್ ಇಲ್ಲ
* ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾರಮಯ್ಯ
* ರಾಜ್ಯಾದ್ಯಂತ ಮತ್ತು ಬೆಂಗಳೂರಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
* ಮನ್ನೆಚ್ಚರಿಕೆ ಕ್ರಮವಾಗಿ ಗಡಿ ಭಾಗದಲ್ಲಿ ವ್ಯಾಪಕ ಭದ್ರತೆ
* ಚಾಮರಾಜ ನಗರದಿಂದ ತಮಿಳುನಾಡಿಗೆ ಕೆಸ್‌ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ನಿಷೇಧ
* ಕಾಟನ್ ಪೇಟೆ, ಜೀವನ್ ಭೀಮಾ ನಗರ, ಮುರುಗೇಶ್ ಪಾಳ್ಯ, ಕಾಟನ್ ಪೇಟೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
* ವಿವೇಕನಗರದಲ್ಲಿ ಎರಡು ಪೊಲೀಸ್ ತುಕಡಿ ನಿಯೋಜಿಸಲಾಗಿದೆ.
* ಪರಪ್ಪನ ಅಗ್ರಹಾರ ಬಳಿ ಸಾರ್ವಜನಿಕರಿಗೆ ಪ್ರವೇಶ ನಿಷೇಧ.
* ಬೆಂಗಳೂರಿನಲ್ಲಿ ಜಯಾ ಅಭಿಮಾನಿಗಳಿಂದ ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ.












Click it and Unblock the Notifications