ಬೆಂಗಳೂರಲ್ಲಿ ಜಯಾ 'ಅಮ್ಮ' ಪಡೆಗೆ ನೋ ಎಂಟ್ರಿ?
ಬೆಂಗಳೂರು,ಸೆ.25: ಅಕ್ರಮ ಆಸ್ತಿ ಗಳಿಕೆ ಸಂಬಂಧ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮೇಲಿನ ಕೇಸಿನ ತೀರ್ಪು ಸೆ.27ರಂದು ಪರಪ್ಪನ ಅಗ್ರಹಾರ ವಿಶೇಷ ನ್ಯಾಯಾಲಯದಲ್ಲಿ ಪ್ರಕಟವಾಗಲಿದೆ. ಭಾರಿ ಕುತೂಹಲ ಕೆರಳಿಸಿರುವ ಈ ತೀರ್ಪನ್ನು ಆಲಿಸಲು ಸುಮಾರು 10 ಸಾವಿರಕ್ಕೂ ಅಧಿಕ ಜಯಾ ಅಮ್ಮನ ಭಕ್ತರು ಬೆಂಗಳೂರಿನತ್ತ ಧಾವಿಸಲಿರುವ ಸುದ್ದಿ ಬಂದಿದ್ದು, ಬೆಂಗಳೂರಿನ ಪೊಲೀಸರಿಗೆ ತಲೆನೋವಿನ ವಿಷಯವಾಗಿದೆ.
ಸೆ.27ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದ ಗಾಂಧಿ ಭವನದಲ್ಲಿ ತಮಿಳುನಾಡಿನ ಸಿಎಂ ಜೆ ಜಯಲಲಿತಾ, ಶಶಿಕಲಾ ಇನ್ನಿಬ್ಬರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ತೀರ್ಪು ಬೆಳಗ್ಗೆ 11 ಗಂಟೆಗೆಹೊರಬೀಳಲಿದೆ. ಈ ಸಂದರ್ಭದಲ್ಲಿ ಜಯಲಲಿತಾ ಅವರು ಖುದ್ದು ಹಾಜರಾಗಬೇಕಿದೆ. ಇದಕ್ಕಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಕರ್ನಾಟಕ, ತಮಿಳುನಾಡು ಪೊಲೀಸರು ತಯಾರಿ ಪೂರ್ಣಗೊಳಿಸಿದ್ದಾರೆ. [ಬರುವ ಮುನ್ನವೇ ಜಯಾ ರಾಜೀನಾಮೆ?]
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರು, ಸಿಟಿ ಸಿವಿಲ್ ಕೋರ್ಟ್ ನಿಂದ ವಿಚಾರಣೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಮನವಿ ಬಂದಿತ್ತು. ಭದ್ರತೆ ದೃಷ್ಟಿಯಿಂದ ಪರಪ್ಪನ ಅಗ್ರಹಾರ ಕೋರ್ಟಿನಲ್ಲಿ ತೀರ್ಪು ಪ್ರಕಟಿಸುವುದು ಸೂಕ್ತ ಕೋರ್ಟಿಗೆ ತಿಳಿಸಿದ್ದೆವು ಎಂದಿದ್ದಾರೆ.
ಪರಪ್ಪನ ಅಗ್ರಹಾರ ಕೋರ್ಟ್ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಿ, ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ.

ಕೋರ್ಟ್ ಬದಲಾಯಿಸಲಾಗಿತ್ತು
ತಮಗೆ ಜೀವ ಬೆದರಿಕೆ ಇರುವುದರಿಂದ ಹೆಚ್ಚಿನ ಜನಸಂದಣಿ ಇರುವ ಸಿವಿಲ್ ಕಟ್ಟಡಕ್ಕೆ ಭದ್ರತೆಯೊಂದಿಗೆ ಬರುವುದು ಕಷ್ಟ. ಆದ್ದರಿಂದ ಪರಪ್ಪನ ಅಗ್ರಹಾರದ ವಿಶೇಷ ಕೋರ್ಟ್‍ನಲ್ಲಿ ತೀರ್ಪು ಪ್ರಕಟಿಸಬೇಕೆಂದು ಜಯಲಲಿತ ಮನವಿ ಮಾಡಿದ್ದರು. ಭದ್ರತೆ ದೃಷ್ಟಿಯಿಂದ ಪರಪ್ಪನ ಅಗ್ರಹಾರ ಕೋರ್ಟಿನಲ್ಲಿ ತೀರ್ಪು ಪ್ರಕಟಿಸುವುದು ಸೂಕ್ತ. ಈ ಕಾರಣದಿಂದ ತೀರ್ಪನ್ನು ಮುಂದೂಡಿ ನ್ಯಾಯಾಲಯವನ್ನು ಸ್ಥಳಾಂತರಿಸಲಾಗಿತ್ತು

ಭದ್ರತಾ ವಿಷಯದಲ್ಲಿ ಮಾತುಕತೆ ಜಾರಿಯಲ್ಲಿ
ತಮಗೆ ಜೀವ ಬೆದರಿಕೆ ಇರುವುದರಿಂದ ಹೆಚ್ಚಿನ ಜನಸಂದಣಿ ಇರುವ ಸಿವಿಲ್ ಕಟ್ಟಡಕ್ಕೆ ಭದ್ರತೆಯೊಂದಿಗೆ ಬರುವುದು ಕಷ್ಟ. ಆದ್ದರಿಂದ ಪರಪ್ಪನ ಅಗ್ರಹಾರದ ವಿಶೇಷ ಕೋರ್ಟ್‍ನಲ್ಲಿ ತೀರ್ಪು ಪ್ರಕಟಿಸಬೇಕೆಂದು ಜಯಲಲಿತ ಮನವಿ ಮಾಡಿದ್ದರು. ಭದ್ರತೆ ದೃಷ್ಟಿಯಿಂದ ಪರಪ್ಪನ ಅಗ್ರಹಾರ ಕೋರ್ಟಿನಲ್ಲಿ ತೀರ್ಪು ಪ್ರಕಟಿಸುವುದು ಸೂಕ್ತ. ಈ ಕಾರಣದಿಂದ ತೀರ್ಪನ್ನು ಮುಂದೂಡಿ ನ್ಯಾಯಾಲಯವನ್ನು ಸ್ಥಳಾಂತರಿಸಲಾಗಿತ್ತು.
40 ಕೆಎಸ್ಆರ್ ಪಿ ತುಕಡಿ, 5 ಸಾವಿರ ಸಿಬ್ಬಂದಿ,5 RAF 25 CAR ತುಕಡಿ ನಿಯೋಜಿಸಲಾಗುವುದು ಎಂದಿದ್ದಾರೆ.
ಬೆಂಗಳೂರಿನಲ್ಲಿ ಎಐಎಡಿಎಂಕೆ ಕಾರ್ಯಕರ್ತರು
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗಳು, ಲಾಡ್ಜ್ ಗಳಲ್ಲಿ ಸೆ.20ಕ್ಕೂ ಮುನ್ನವೇ ರೂಮುಗಳನ್ನು ಎಐಎಡಿಎಂಕೆ ಕಾರ್ಯಕರ್ತರು ಕಾಯ್ದಿರಿಸಿದ್ದರು. ಕೆಲವರು ಈಗಾಗಲೇ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದಾರೆ. ಅಮ್ಮನ ಆಪ್ತ ಬೆಂಬಲಿಗರು ತೀರ್ಪು ಏನಾಗಬಹುದೋ ಎಂಬ ಆತಂಕದಲ್ಲಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿರುವ ಎಐಡಿಎಂಕೆ ಕಾರ್ಯಕರ್ತರು ಮತ್ತು ತಮಿಳುನಾಡಿನಲ್ಲಿರುವ ಜಯಾ ಬೆಂಬಲಿಗರು ನಗರಕ್ಕೆ ಆಗಮಿಸುವುದರಿಂದ ಭದ್ರತೆ ಒದಗಿಸುವುದು ಪೊಲೀಸರಿಗೆ ದೊಡ್ಡ ತಲೆಬಿಸಿಯಾಗಿದೆ. ಕಳೆದ ಶನಿವಾರವೇ ವಿಶೇಷ ನ್ಯಾಯಾಲಯದಿಂದ ಈ ತೀರ್ಪು ಪ್ರಕಟವಾಗಬೇಕಿತ್ತು.

ತೀರ್ಪು ವ್ಯತಿರಿಕ್ತವಾದರೆ ಜಯಾ ರಾಜೀನಾಮೆ?
ಸುಮಾರು 66.6 ಕೋಟಿ ರು ಅಕ್ರಮ ಆಸ್ತಿ ಗಳಿಕೆಯ ತೀರ್ಪು ಜಯಲಲಿತಾ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಗುತ್ತದೆ.
ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಹಾಗೂ ಉಳಿದ ನಾಲ್ವರು ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕಾದ ಹಿನ್ನಲೆಯಲ್ಲಿ ಅವರಿಗೆ ವಿಶೇಷ ಭದ್ರತೆ ಕಲ್ಪಿಸಬೇಕಿದೆ. ಅಲ್ಲದೆ, ಈ ಕೋರ್ಟಿನ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿ, ತೀರ್ಪಿಗೆ ತಡೆಯಾಜ್ಞೆ ನೀಡುವವರೆಗೆ ಅಥವಾ ರದ್ದು ಮಾಡುವವರೆಗೆ ಜೈಲು ಸೇರುವ ಸಾಧ್ಯತೆ ಇದೆ.












Click it and Unblock the Notifications