ಸಿಡಿ ಗರ್ಲ್ ಹೇಳಿಕೆ: ಪರದೆ ಹಿಂದಿನ ಅಸಲಿ ಸತ್ಯವೇನು?
ಬೆಂಗಳೂರು, ಮಾರ್ಚ್ 14: ರಕ್ಷಣೆ ಕೋರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿ ಸಂಸ್ತಸ್ತೆ ಎನ್ನಲಾದ ಯುವತಿ ಬಿಡುಗಡೆ ಮಾಡಿರುವ 32 ಸೆಕೆಂಡ್ ವಿಡಿಯೋ ಬಿಡುಗಡೆ ಮಾಡಿದ್ದಾಳೆ. ಜಾರಕಿಹೊಳಿ ಸಿಡಿ ಬಿಡುಗಡೆಯಾಗಿ 12 ದಿನ ಕಳೆದರೂ ಎಲ್ಲೂ ಕಾಣಿಸಿಕೊಳ್ಳದ ಯುವತಿ ದಿಡೀರ್ ಪ್ರತ್ಯಕ್ಷವಾಗಿದ್ದಾಳೆ. ಆಕೆ ಬಿಡುಗಡೆ ಮಾಡಿರುವ ರಕ್ಷಣೆ ವಿಡಿಯೋ ಕೂಡ ಬುದ್ಧಿವಂತಿಕೆಯಿಂದಲೇ ಮಾಡಿದಂತಿದೆ. ಆಕೆ ಯಾವ ಮನೆಯಲ್ಲಿದ್ದಾಳೆ, ಎಲ್ಲಿದ್ದಾಳೆ ಎಂಬ ಸಣ್ಣ ಸುಳಿವು ಸಿಗದ ಹಾಗೆ ಆಕೆ ಮಾತನ್ನು ಟಿವಿ ಪರದೆ ಮೇಲೆ ಬರುವಾಗ ರೆಕಾರ್ಡ್ ಮಾಡಲಾಗಿದೆ !
ಆಕೆ ಇರುವ ಜಾಗದ ಸುಳಿವು ಸಿಗಬಾರದೆಂಬ ಕಾರಣಕ್ಕಾಗಿಯೇ ಈ ಮಾರ್ಗ ಹಿಡಿದಳೇ ? ಇಂತದ್ದೊಂದು ಅನುಮಾನ ಇದೀಗ ಚರ್ಚೆಗೆ ಕಾರಣವಾಗಿದೆ.
ಕೈಯಲ್ಲಿ ಜಂಡೂ ಬಾಂಬ್?: ತನಗೆ ಮಹಾ ಅನ್ಯಾಯ ಆಗಿದೆ ಎಂದು ಅಳುತ್ತಿರುವ ಸಂತ್ರಸ್ತ ಯುವತಿ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿರುವುದು ಕೂಡ ಕಾನೂನಿನಲ್ಲಿ ಅಪರಾಧ. ಹೀಗಾಗಿ ಆಕೆ ಹೇಳಿಕೆ ಆಧರಿಸಿ ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಕೇಸು ದಾಖಲಿಸಿದರೂ ಅಚ್ಚರಿ ಪಡಬೇಕಿಲ್ಲ. ಇನ್ನು ಸಂತ್ರಸ್ತ ಯುವತಿ ಅಳುವಂತೆ ಕಾಣತ್ತಿದ್ದು, ಕೈಯಲ್ಲಿ ವಿಕ್ಸ್/ ಜಂಡೂ ಬಾಂಬ್ ಕೂಡ ಇಟ್ಟುಕೊಂಡಿದ್ದಾಳೆ. ಹೀಗಾಗಿ ಆಕೆಯ ಪ್ರತಿ ನಡೆಯೂ ಅನುಮಾನ ಮೂಡಿಸಿದಂತಿದೆ.

ಟಿವಿ ಪರದೆಯ ವಿಡಿಯೋ: ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿರುವ ಸಂತ್ರಸ್ತ ಎನ್ನಲಾದ ಯುವತಿಯ ವಿಡಿಯೋ ಪರದೆ ಹೊಸ ಕಥೆ ಹೇಳುತ್ತಿದೆ. ಅಕೆ ಎಲ್ಲಿದ್ದಾಳೆ ಎಂಬ ಸುಳಿವು ಸಿಗಬಾರದು ಎಂಬ ಕಾರಣಕ್ಕಾಗಿಯೇ ಆಕೆ ಮಾತನ್ನು ಚಿತ್ರೀಕರಣವನ್ನು ಬುದ್ಧಿವಂತಿಕೆಯಿಂದ ಮಾಡಲಾಗಿದೆ. ಆಕೆ ಮಾತನಾಡುವುದನ್ನು ಟಿವಿಗೆ ಸಂಪರ್ಕ ಕಲ್ಪಿಸಿ ಟಿವಿ ಪರದೆಯಿಂದ ರೆಕಾರ್ಡ್ ಮಾಡಿಕೊಂಡ ವಿಡಿಯೋ ಹರಿದು ಬಿಡಲಾಗಿದೆ. ಪ್ರಭಾವಿ ನಾಯಕ ರಮೇಶ್ ಜಾರಕಿಹೊಳಿ ಮೇಲೆ ಆರೋಪ ಮಾಡಿರುವುದರಿಂದ ಸಂತ್ರಸ್ತೆ ಎನ್ನಲಾದ ಯುವತಿಗೆ ಜೀವ ಭಯ ಕಾಡಿರುವುದು ನಿಜ.
ಆದರೆ, ದಿನೇಶ್ ಕಲ್ಲಹಳ್ಳಿ ದೂರು ನೀಡುವ ಬದಲು ಸಂತ್ರಸ್ತ ಯುವತಿಯೇ ನೀಡಬಹುದಿತ್ತಲ್ಲವೇ ? ಸುಮಾರು ಹನ್ನೆರಡು ದಿನಗಳ ಕಾಲ ಯುವತಿ ಮೌನವಾಗಿರುವ ಕಾರಣವೇನು ? ಇದೀಗ ಜಾರಕಿಹೋಳಿ ದೂರು ಕೊಟ್ಟ ಬಳಿಕವಷ್ಟೇ ಆಕೆ ಪ್ರತ್ಯಕ್ಷವಾಗಿದ್ದಾಳೆ. ಇನ್ನು ಸಂಸ್ತ್ರಸ್ತೆ ಎನ್ನಲಾದ ಯುವತಿಯ ರಕ್ಷಣೆ ವಿಡಿಯೋ ಗೆ ಸಾಮಾಜಿಕ ಜಾಲ ತಾಣದಲ್ಲಿ ಕೆಟ್ಟದಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.












Click it and Unblock the Notifications