ಜಂತಕಲ್ ಮೈನಿಂಗ್: ಎಚ್ಡಿಕೆ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಬೆಂಗಳೂರು, ಜೂನ್ 13: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಂತಕಲ್ ಮೈನಿಂಗ್ ಕಂಪೆನಿಯಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಎಸ್ ಐಟಿ (ವಿಶೇಷ ತನಿಖಾ ದಳ) ವಿಶೇಷ ಕೋರ್ಟ್ ವಜಾ ಮಾಡಿದೆ.
ಜಂತಕಲ್ ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರಿಂದ ಲೋಕಾಯುಕ್ತ ವಿಶೇಷ ತನಿಖಾ ದಳ ತನಿಖೆ ಆರಂಭಿಸಿತ್ತು. ಇದೇ ಮೇ 17 ರಂದು ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದ ನ್ಯಾಯಾಲಯ, ಈ ಬಾರಿ ಅರ್ಜಿಯನ್ನು ವಜಾ ಮಾಡಿದೆ.

ಕುಮಾರಸ್ವಾಮಿಯವರ ಮೇಲೆ ಯಾವುದೇ ಬಂಧನ ವಾರೆಂಟ್ ಇಲ್ಲದ ಕಾರಣ, ಅವರಿಗೆ ಬಂಧನದ ಭೀತಿ ಇಲ್ಲವಾದರೂ, ಜಾಮೀನು ಅರ್ಜಿ ವಜಾ ಆಗಿರುವುದು ಒಂದು ಬಹುದೊಡ್ಡ ಹಿನ್ನೆಡೆ ಎಂದೇ ಅನ್ನಿಸಿದೆ.












Click it and Unblock the Notifications