ದಸರಾ ಸಂದರ್ಭದಲ್ಲಿ ಉಗ್ರದಾಳಿಯ ಸಂಚು, ಹಿಟ್ ಲಿಸ್ಟ್ ನಲ್ಲಿ ಬೆಂಗಳೂರು!

Recommended Video

      ದಸರಾ ಸಂದರ್ಭದಲ್ಲಿ ಉಗ್ರದಾಳಿಯ ಸಂಚು | Oneindia Kannada

      ಶ್ರೀನಗರ, ಸೆಪ್ಟೆಂಬರ್ 16: ದಸರಾ ಹಬ್ಬದ ಹಿನ್ನೆಲೆಯಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸುವಂತೆ ಭದ್ರತಾ ಸಿಬ್ಬಂದಿಗಳಿಗೆ ಸೂಚನೆ ಸಿಗುತ್ತಿರುವ ಹೊತ್ತಲ್ಲೇ ಮತ್ತೊಂದು ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

      ದೇಶದ ಆರಕ್ಕೂ ಹೆಚ್ಚು ರಾಜ್ಯಗಳ ದೇವಾಲಯ, ರೈಲ್ವೇ ನಿಲ್ದಾಣಗಳಲ್ಲಿ ಜೈಶ್ ಇ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಭಯೋತ್ಪಾದಕ ದಾಳಿ ನಡೆಸಲಿದೆ ಎಂಬ ಬೆದರಿಕೆ ಪತ್ರವೊಂದು ಭದ್ರತಾ ದಳಕ್ಕೆ ಸಿಕ್ಕಿದೆ. ಪತ್ರದಲ್ಲಿ ಕರ್ನಾಟಕದ ಬೆಂಗಳೂರಿನ ಹೆಸರೂ ಉಲ್ಲೇಖವಾಗಿರುವುದು ಕನ್ನಡಿಗರಲ್ಲಿ ಸಾಕಷ್ಟು ಆತಕ ಸೃಷ್ಟಿಸಿದೆ.

      ಒಟ್ಟು ಆರು ರಾಜ್ಯಗಳ 11 ಸ್ಥಳಗಳಲ್ಲಿ ದಸರಾ ಸಂದರ್ಭದಲ್ಲಿ ಉಗ್ರದಾಳಿ ನಡೆಸಲಾಗುವುದು ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.

      Jaish-e-Mohammad Terror Outfit Threatens Attack In 6 States On Dasara

      ರೋಹ್ಟಕ್, ರೆವಾರಿ, ಹಿಸಾರ್, ಕುರುಕ್ಷೇತ್ರ, ಮುಂಬೈ ನಗರ, ಬೆಂಗಳೂರು, ಚೆನ್ನೈ, ಜೈಪುರ, ಭೋಪಾಲ್, ಕೋಟಾ, ಇಟಾರ್ಸಿ ರೈಲ್ವೇ ನಿಲ್ದಾಣಗಳು ಮತ್ತು ರಾಜಸ್ಥಾನ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರ್ಯಾಣ ಮುಂತಾದ ರಾಜ್ಯಗಳ ಪ್ರಮುಖ ದೇವಾಲಯಗಳಲ್ಲಿ ಉಗ್ರ ದಾಳಿ ನಡೆಯಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

      ಹರ್ಯಾಣದ ರೆವಾರಿ ರೈಲ್ವೇ ನಿಲ್ದಾಣದ ಮೇಲೆ ಅಕ್ಟೋಬರ್ 8 ರಂದು ದಾಳಿ ನಡೆಸಲಾಗುವುದು ಎಂದು ಪತ್ರದಲ್ಲಿ ಹೇಳಲಾಗಿದ್ದು, ಈ ಪತ್ರ ಶನಿವಾರದಂದು ಹರ್ಯಾಣ ಪೊಲೀಸ್ ಠಾಣೆಯನ್ನು ತಲುಪಿದೆ.

      ಈ ಪತ್ರದ ಕೊನೆಯಲ್ಲಿ ಪಾಕಿಸ್ತಾನದ ಕರಾಚಿಯ ಮಸೂದ್ ಅಹ್ಮದ್ ಎಂಬ ಹೆಸರನ್ನು ಉಲ್ಲೇಖಿಸಲಾಗಿದೆ. ಪತ್ರ ಬಂದ ಹಿನ್ನೆಲೆಯಲ್ಲಿ ರೆವಾರಿ ರೈಲ್ವೇ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+