• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮ್ಯಾ ಅಭಿಮಾನಿಗಳಿಗೆ ಜಗ್ಗೇಶ್ ಟ್ವೀಟ್ ಏಟು

By ಜೇಮ್ಸ್ ಮಾರ್ಟಿನ್
|
Google Oneindia Kannada News

ನವರಸ ನಾಯಕ ಜಗ್ಗೇಶ್ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಸದ್ಬಳಕೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಪ್ರತಿನಿತ್ಯ ನೀತಿ ಬೋಧನೆ, ವಚನ, ಗೀತೆ, ರಾಯರ ಬಗ್ಗೆ ತಮ್ಮ ಅಭಿಮಾನಿಗಳಿಗೆ ಹೇಳುತ್ತಿದ್ದಾರೆ. ಆದರೆ, ಟ್ವಿಟ್ಟರ್ ನಲ್ಲೇ ನವರಸಗಳನ್ನು ಹರಿಸುತ್ತ್ತಿರುವ ನಟ ಕಮ್ ರಾಜಕಾರಣಿ ಜಗ್ಗೇಶ್ ಅವರು ಇತ್ತೀಚೆಗೆ ಸಕತ್ ಗರಂ ಆಗಿದ್ದರು. ನೀರ್ ದೋಸೆ ಬೇಯುವ ಹೆಂಚು ತಣ್ಣಗಾದರೂ ನಾಯಕ ಜಗ್ಗೇಶ್ ಅವರನ್ನು ಕೆಣಕಲು ಬಂದ ಮೂವರು ಅಭಿಮಾನಿಗಳನ್ನು ಬ್ಲಾಕ್ ಮಾಡಿಬಿಟ್ಟಿದ್ದಾರೆ.

ಯೋಗ ಒಂದು ಬಾರಿ ಬರುತ್ತದೆ ಯೋಗ್ಯತೆ ಕಡೆಯವರೆಗೂ ಇರುತ್ತದೆ ಎಂದು ಟ್ವೀಟ್ ಮಾಡಿದ್ದು ರಮ್ಯಾ ಅಭಿಮಾನಿಗಳನ್ನು ಕೆರಳಿಸಿ ಟ್ವೀಟ್ ಸಮರಕ್ಕೆ ನಾಂದಿ ಹಾಡಿತ್ತು. ರಮ್ಯಾ ಹೆಸರು ಹೇಳದೆ ಚುನಾವಣೆಯಲ್ಲಿ ಸೋತ ನಂತರ ಸಿನಿಮಾ ಕಡೆ ಮುಖ ಮಾಡುವ ಮೂಳಕ ಅವಕಾಶವಾದಿಯಾಗಿದ್ದೀರಿ ಎಂದು ಹೇಳಿದ್ದರು.

ನೀರ್ ದೋಸೆ ಚಿತ್ರ ಶೂಟಿಂಗ್ ಆಟಿಟ್ಯೂಡ್ ಜನರಿಲ್ಲದೆ ಸರಾಗವಾಗಿ ನಡೆಯಲಿದೆ. ರಾಯರ ಕೃಪೆ, ಪ್ರೀತಿಯ ಅಭಿಮಾನಿಗಳ ಬೆಂಬಲವಿದ್ದರೆ ಸಾಕು ಎಂದು ಮತ್ತೊಮ್ಮೆ ಜಗ್ಗೇಶ್ ಕುಟುಕಿದ್ದರು. ಜಗ್ಗೇಶ್ ಅವರ ಯಾವುದೇ ಟ್ವೀಟ್ ನಲ್ಲೂ ರಮ್ಯಾ ಅವರ ಹೆಸರು ಪ್ರಸ್ತಾಪಿಸಿಲ್ಲ, ರಮ್ಯಾ ಕೂಡಾ ಜಗ್ಗೇಶ್ ಅವರ ಟ್ವೀಟ್ ಗೆ ಉತ್ತರಿಸಿಲ್ಲ. ರಮ್ಯಾ ಅಭಿಮಾನಿಗಳು ಮಾತ್ರ ಜಗ್ಗೇಶ್ ಜತೆ ಸಾಮಾಜಿಕ ಜಾಲ ತಾಣದಲ್ಲಿ ವಾಕ್ಸಮರ ನಡೆಸಿದ್ದಾರೆ. ಸರಣಿ ಟ್ವೀಟ್ ಸಂಗ್ರಹ ಇಲ್ಲಿದೆ ಓದಿ...

ಅಭಿಮಾನಿಗಳನ್ನು ಬ್ಲಾಕ್ ಮಾಡಿಬಿಟ್ಟಿದ್ದಾರೆ

ಅಭಿಮಾನಿಗಳನ್ನು ಬ್ಲಾಕ್ ಮಾಡಿಬಿಟ್ಟಿದ್ದಾರೆ

ನಟ ಕಮ್ ರಾಜಕಾರಣಿ ಜಗ್ಗೇಶ್ ಅವರು ಇತ್ತೀಚೆಗೆ ಸಕತ್ ಗರಂ ಆಗಿದ್ದರು. ನೀರ್ ದೋಸೆ ಬೇಯುವ ಹೆಂಚು ತಣ್ಣಗಾದರೂ ನಾಯಕ ಜಗ್ಗೇಶ್ ಅವರನ್ನು ಕೆಣಕಲು ಬಂದ ಮೂವರು ಅಭಿಮಾನಿಗಳನ್ನು ಬ್ಲಾಕ್(ಟ್ವೀಟ್ ಐಡಿ) ಮಾಡಿಬಿಟ್ಟಿದ್ದಾರೆ.

ರಾಧಿಕಾ, ಐಂದ್ರಿತಾ, ರಮ್ಯಾ ಹೆಸರೇ ಇಲ್ಲ

ರಾಧಿಕಾ ಪಂಡಿತ್, ಐಂದ್ರಿತಾ, ಹರ್ಷಿಕಾ ಒಳ್ಳೆ ನಡವಳೀಕೆ ಹೊಂದಿದ್ದಾರೆ ಅವರಿಗೆ ಒಳ್ಳೆ ಭವಿಷ್ಯವಿದೆ ಎಂದಿರುವ ಜಗ್ಗೇಶ್ ರಮ್ಯಾ ಹೆಸರು ಪ್ರಸ್ತಾಪಿಸೇ ಇಲ್ಲ.

ಅಭಿಮಾನಿಗಳ ಕಿರಿಕಿರಿಗೆ ಬೇಸತ್ತ ಜಗ್ಗೇಶ್

ರಮ್ಯಾ ಪರ ಟ್ವೀಟ್ ಮಾಡಿ ಕಿರಿಕಿರಿ ಉಂಟು ಮಾಡಿದ ಅಭಿಮಾನಿಗಳಿಂದ ಬೇಸತ್ತ ಜಗ್ಗೇಶ್

ಅಧಿಕ ಪ್ರಸಂಗಿಗಳನ್ನು ಬ್ಲಾಕ್ ಮಾಡಿದೆ

ನನ್ನ ಅಕೌಂಟ್ ನಲ್ಲಿ ಅಧಿಕಪ್ರಸಂಗಿಗಳಿಗೆ ಜಾಗವಿಲ್ಲ ಎಂದ ಜಗ್ಗೇಶ್

ರಮ್ಯಾ ಅಭಿಮಾನಿಯೊಬ್ಬರಿಂದ ಟ್ವೀಟ್

ರಮ್ಯಾ ಅಭಿಮಾನಿಯೊಬ್ಬರಿಂದ ಟ್ವೀಟ್, ಜಗ್ಗೇಶ್ ಅಭಿಮಾನಿಗೆ ಪ್ರತಿ ಸವಾಲು

ವಿಪರೀತ ಹೋದ ಟ್ವೀಟ್ ವಾಕ್ಸಮರ

ವಿಪರೀತ ಹೋದ ಟ್ವೀಟ್ ವಾಕ್ಸಮರ, ರಮ್ಯಾ ಅಭಿಮಾನಿಯಿಂದ ಆಕ್ರೋಶಿತ ಟ್ವೀಟ್

ಜಗ್ಗೇಶ್ ಅವರಿಗೆ ಹಿತ ವಚನ ನೀಡಿದ ಟ್ವೀಟ್

ಜಗ್ಗೇಶ್ ಅವರಿಗೆ ಅಭಿಮಾನಿಯೊಬ್ಬರು ಹಿತ ವಚನ ನೀಡಿದ ಟ್ವೀಟ್

English summary
Actor, BJP leader Jaggesh's comments on twitter about Neerdose film and vague reference to actor turned politician Ramya has started a twitter war of words among fans. Tweet war continued till Jaggesh forced to block Ramya Fans
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X