ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ಮನೆ ಮೇಲೆ ಐಟಿ ದಾಳಿ: ಸಿದ್ದು ಟ್ವೀಟ್ ನಲ್ಲೇನಿದೆ?

|
Google Oneindia Kannada News

"ಸಚಿವ ಡಿ.ಕೆ.ಶಿವಕುಮಾರ್ ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿ ರಾಜಕೀಯ ಪ್ರೇರಿತ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ. ಇಂಥ ಬೆದರಿಕೆಗಳಿಗೆ ನಾವು ಬಗ್ಗೋದಿಲ್ಲ." ಇದು ಇಂಧನ ಸಚಿವ ಡಿ ಕೆ ಶಿವಕುಮಾರ್ ನಿವಾಸಗಳ ಮೇಲೆ ನಡೆಯುತ್ತಿರುವ ಐಟಿ ದಾಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ಪ್ರತಿಕ್ರಿಯೆ.

ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?ಪವರ್ ಸಚಿವ ಡಿಕೆ ಶಿವಕುಮಾರ್ ಅಂದಾಜು ಆಸ್ತಿ ಎಷ್ಟಿದೆ?

ಇಂದು(ಆಗಸ್ಟ್ 2) ಬೆಳಗ್ಗೆ ಸಚಿವ ಡಿಕೆ ಶಿವಕುಮಾರ್ ಮನೆ ಹಾಗೂ ಗುಜರಾತ್ ನ 44 ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದ 'ಈಗಲ್ಟನ್ - ದಿ ಗಾಲ್ಫ್ ವಿಲೇಜ್' ರೆಸಾರ್ಟ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದರು.

ಡಿಕೆಶಿ ಮೇಲೆ ಐಟಿ ದಾಳಿ : 10 ಪ್ರಮುಖ ಬೆಳವಣಿಗೆಗಳುಡಿಕೆಶಿ ಮೇಲೆ ಐಟಿ ದಾಳಿ : 10 ಪ್ರಮುಖ ಬೆಳವಣಿಗೆಗಳು

ರಾಜಕೀಯ ದ್ವೇಷ ಸಾಧನೆಗಾಗಿ ಕೇಂದ್ರ ಐಟಿ ದಾಳಿ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ. ಇದು ಅಧಿಕಾರ ದುರುಪಯೋಗವಷ್ಟೇ ಅಲ್ಲ, ಪ್ರಜಾಪ್ರಭುತ್ವದ ಕೊಲೆ ಎಂದು ಸಹ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಐಟಿ ದಾಳಿಗೆ ಸಂಬಂಧಿಸಿದ ಸಿದ್ದರಾಮಯ್ಯನವರ ಎಲ್ಲಾ ಟ್ವೀಟ್ ಗಳೂ ಇಲ್ಲಿವೆ...

ರಾಜಕೀಯ ಪ್ರೇರಿತ

ಸಚಿವ ಡಿ.ಕೆ.ಶಿವಕುಮಾರ್ ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿ ರಾಜಕೀಯ ಪ್ರೇರಿತ. ಇದರ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇದೆ.

ರಾಜಕೀಯ ಷಡ್ಯಂತ್ರ

ರಾಜಕೀಯ ಷಡ್ಯಂತ್ರಕ್ಕೆ ಆದಾಯ ತೆರಿಗೆ ಇಲಾಖೆಯ ದುರ್ಬಳಕೆ. ಇಂತಹ ಬೆದರಿಕೆ ತಂತ್ರಗಳಿಗೆ ಕಾಂಗ್ರೆಸ್ ಬಗ್ಗುವುದಿಲ್ಲ.

ಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯಕರ್ನಾಟಕದ 'ಪವರ್' ಫುಲ್ ಸಚಿವ ಡಿಕೆ ಶಿವಕುಮಾರ್ ಪರಿಚಯ

ಸಿಆರ್ ಪಿಎಫ್ ಸಿಬ್ಬಂದಿಯ ದುರ್ಬಳಕೆ

ಐಟಿ ದಾಳಿ ಸಂದರ್ಭದಲ್ಲಿ ನಿಯಮದಂತೆ ಸ್ಥಳೀಯ ಪೊಲೀಸ್ ನೆರವು ಪಡೆಯಬೇಕು. ಆದರೆ ನಿಯಮ ಉಲ್ಲಂಘಿಸಿ ಸಿಆರ್ ಪಿಎಫ್ ಸಿಬ್ಬಂದಿಯ ದುರ್ಬಳಕೆ. ಇದು ಖಂಡನೀಯ.

ಪ್ರಜಾಪ್ರಭುತ್ವದ ಕೊಲೆ

ರಾಜಕೀಯ ದ್ವೇಷ ಸಾಧನೆಗಾಗಿ ಕೇಂದ್ರ ಐಟಿ ದಾಳಿ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ. ಇದು ಅಧಿಕಾರ ದುರುಪಯೋಗವಷ್ಟೇ ಅಲ್ಲ, ಪ್ರಜಾಪ್ರಭುತ್ವದ ಕೊಲೆ.

ಬಿಜೆಪಿಯ ಹತಾಶ ಮನಸ್ಥಿತಿ

ರಾಜ್ಯಸರ್ಕಾರವನ್ನು ರಾಜಕೀಯವಾಗಿ ಎದುರಿಸಲಾಗದ ಬಿಜೆಪಿ, ಐಟಿ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಇದು ಬಿಜೆಪಿಯ ಹತಾಶ ಮನಸ್ಥಿತಿ.

ಸ್ವಾಭಿಮಾನಿ ಜನತೆ ನಮ್ಮ ಜೊತೆಗಿದೆ

ಬಿಜೆಪಿಯನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ. ಬೆದರಿಕೆಗೆ ಬಗ್ಗುವುದಿಲ್ಲ.ಈ ಹೋರಾಟದಲ್ಲಿ ಕರ್ನಾಟಕದ ಸ್ವಾಭಿಮಾನಿ ಜನತೆ ನಮ್ಮ ಜತೆ ಇರುತ್ತಾರೆ.

English summary
IT raid on energy minister D K Shivakumar's residence is murder of democracy, Karnataka chief minister Siddaramaiah tweeted. Here is his all tweets regarding IT raid issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X