Darshan: ಜಾಮೀನು ನಿರೀಕ್ಷೆಯಲ್ಲಿರುವ ನಟ ದರ್ಶನ್‌ಗೆ ಐಟಿ ಶಾಕ್, ವಿಚಾರಣೆಗೆ ಕೋರ್ಟ್ ಅನುಮತಿ
ಬೆಂಗಳೂರು, ಸೆಪ್ಟಂಬರ್ 23: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಸಾಲು ಸಾಲು ಸಂಕಷ್ಟ ಎದುರಾಗುತ್ತಿದೆ. ಪ್ರಕರಣದಲ್ಲಿ ನಟ ದರ್ಶನ್ ಜಾಮೀನು ವಿಚಾರಣೆ ಮುಂದೂಡಿಕೆ ಆದ ಬೆನ್ನಲ್ಲೆ, ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಕೋರ್ಟ್‌ನಿಂದ ಅನುಮತಿ ಪಡೆದಿದ್ದಾರೆ. ಈ ಮೂಲಕ ನಟ ದರ್ಶನ್ ಬೆನ್ನು ಬಿದ್ದಿರುವ ಅಧಿಕಾರಿಗಳು ಜಾಲಾಡಲಿದ್ದಾರೆ.
ಹೌದು, ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ ಅನ್ನು ಐಟಿ ಅಧಿಕಾರಿಗಳು ಸೋಮವಾರ ಭೇಟಿ ಮಾಡಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಬಂಧನ ಬಳಿಕ ಅವರ ಮನೆಯಲ್ಲಿ ಮೊದಲು 30 ಲಕ್ಷ ಪತ್ತೆ ಆಗಿತ್ತು. ನಂತರ ಬೇರೆ ಬೇರೆ ಕಡೆಗಳಲ್ಲಿ ಲಕ್ಷ ಲಕ್ಷ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ನಾಳೆ ಜೈಲಿನಲ್ಲಿ ದರ್ಶನ್ ವಿಚಾರಣೆ ಸಾಧ್ಯತೆ
ನಟ ದರ್ಶನ್ ನ್ಯಾಯಾಂಗ ಅವಧಿ ವಿಸ್ತರಣೆ ಆಗಿದೆ. ಜಾಮೀನು ಅರ್ಜಿ ಸಹ ಮುಂದೂಡಿಕೆ ಆಗಿದೆ. ಹಣದ ಮೂಲಕ ಪತ್ತೆಗೆ ಜೈಲಲ್ಲಿರುವ ನಟ ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಅದರಂತೆ ಐಟಿ ಅಧಿಕಾರಿಗಳು 24 ಎಸಿಎಂಎಂ ನ್ಯಾಯಾಲಯದಿಂದ ಮಂಗಳವಾರ ದರ್ಶನ್ ವಿಚಾರಣೆಗೆ ಅನುಮತಿ ಪಡೆದಿದ್ದಾರೆ. ಪ್ರಕರಣದ ಬಳಿಕ ಹಂತ ಹಂತವಾಗಿ ಸಿಕ್ಕ ಒಟ್ಟು 85 ಲಕ್ಷ ರೂ. ವಶಕ್ಕೆ ಪಡೆದಿದ್ದು, ಆ ಹಣ ಮೂಲವನ್ನು ಅಧಿಕಾರಿಗಳು ಪತ್ತೆ ಮಾಡಲಿದ್ದಾರೆ. ನಾಳೆ ಮಂಗಾಳವಾರ ಬಳ್ಳಾರಿ ಜೈಲಿನಲ್ಲಿಯೇ ಅಧಿಕಾರಿಗಳು ದರ್ಶನ್ ವಿಚಾರಣೆ ಮಾಡುವ ಸಾಧ್ಯತೆ ಇದೆ.
ಏನಿದು ದರ್ಶನ್ ಮತ್ತು ಐಟಿ ಪ್ರಕರಣ?
ನಟ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ತಂದು ಹತ್ಯೆಗೈದ ಬಳಿಕ ಅದನ್ನು ಸಾಕ್ಷಿ ನಾಶಕ್ಕೆ ಪ್ಲಾನ್ ಮಾಡಿ ದರ್ಶನ್ ಆಂಡ್ ಗ್ಯಾಂಗ್, ಈ ಪ್ರಕರಣದಲ್ಲಿ ಭಾಗಿಯಾಗಿರದ ಮೂವರನ್ನು ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳಲು ಲಕ್ಷ ಲಕ್ಷ ಹಣ ನೀಡಿದ್ದರು. ಮೂರು ಜನರಿಗೆ ತಲಾ 05 ಲಕ್ಷ ರೂಪಾಯಿ ಹಣ ನೀಡಿದ್ದರು.
ರೇಣುಕಾಸ್ವಾಮಿ ಶವದ ಮುಂದೆ ಡಿಗ್ಯಾಂಗ್ ಪ್ಲಾನ್ ಮಾಡಿಕೊಂಡು ತರಾತುರಿಯಲ್ಲಿಯೇ ಬರೋಬ್ಬರಿ 30ಲಕ್ಷ ರೂಪಾಯಿ ಹಣ ಹೊಂದಿಸಿದ್ದರು. ಅದನ್ನೆ ಸಾಕ್ಷ್ಯ ನಾಶಕ್ಕೆ, ಅಮಾಯಕರನ್ನು ಸರೆಂಡರ್ ಮಾಡಿಸಲು ಬಳಸಲಾಗಿತ್ತು.
ಬಳಿಕ ಈ ಕುರಿತು ತನಿಖೆ ನಡೆಸಿದ ತನಿಖಾಧಿಕಾರಿಗಳು ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊದಲು 30 ಲಕ್ಷ ದರ್ಶನ್ ಮನೆಯಲ್ಲಿ, ನಂತರ 30 ಹೀಗೆ ಒಟ್ಟು 85ಲಕ್ಷ ರೂಪಾಯಿಯನ್ನು ಆರೋಪಿಗಳ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಪ್ರಕರಣವನ್ನು ಐಟಿ ಇಲಾಖೆಗೆ ಒಪ್ಪಿಸಿದ್ದರು. ಇದೀಗ ಐಟಿ ಇಲಾಖೆಗೆ ಪ್ರಕರಣ ಮುಂದುವರೆಸಲು ಕೋರ್ಟ್ ಒಪ್ಪಿಗೆ ಪಡೆದುಕೊಂಡಿದೆ.












Click it and Unblock the Notifications