ಸಚಿವ ರಾಜಶೇಖರ ಪಾಟೀಲ್ ಸಂಬಂಧಿಗಳ ಮೇಲೆ ಐಟಿ ದಾಳಿ?

ಬೆಂಗಳೂರು, ಜನವರಿ 25: ಸಚಿವ ರಾಜಶೇಖರ ಪಾಟೀಲ್ ಅವರ ಸಂಬಂಧಿಗಳು ಎನ್ನಲಾಗಿರುವ ಇಬ್ಬರ ಮೇಲೆ ಇಂದು ಹಠಾತ್ತನೆ ಐಟಿ ದಾಳಿ ನಡೆದಿದೆ.

ಸದಾಶಿವನಗರದಲ್ಲಿ ನಿವಾಸಹೊಂದಿರುವ ರವಿ ಎರಗ ಹಾಗೂ ನಾಗರಬಾವಿ ನಿವಾಸಿ ಸುರೇಶ್ ಎಂಬುವರಿಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ಈ ಇಬ್ಬರೂ ಸಹ ಗಣಿ, ಭೂವಿಜ್ಞಾನ ಮತ್ತು ಮುಜರಾಯಿ ಖಾತೆ ಸಚಿವರಾಗಿರುವ ರಾಜಶೇಖರ ಪಾಟೀಲ್ ಅವರ ಸಂಬಂಧಿಗಳು ಎನ್ನಲಾಗುತ್ತಿದೆ.

IT officers raid on minister Rajashekhar Patils relatives in Bengaluru

ಇಂದು ಬೆಳ್ಳಂಬೆಳಿಗ್ಗೆಯೇ ಐಟಿ ದಾಳಿ ನಡೆಸಲಾಗಿದ್ದು, 53 ಸೇಲ್‌ಡೀಡ್‌ ದಾಖಲೆಗಳನ್ನು ಜೊತೆಗೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಕೆಲವು ವಾರಗಳ ಹಿಂದಷ್ಟೆ ಐಟಿ ಅಧಿಕಾರಿಗಳು ಕನ್ನಡ ಚಿತ್ರರಂಗದ ಸ್ಟಾರ್ ನಟರು, ನಿರ್ಮಾಪಕರ ಮನೆಗಳ ಮೇಲೆ ದಾಳಿ ನಡೆಸಿ ಸತತ ಮೂರು ದಿನಗಳ ಕಾಲ ಪರಿಶೀಲನೆ ನಡೆಸಿದ್ದರು. ಈಗ ಚಿತ್ರರಂಗದ ನಂತರ ರಾಜಕಾರಣಿಗಳ ಮೇಲೆ ಐಟಿ ಕಣ್ಣು ಬಿದ್ದಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+