ನಮ್ಮ ಕ್ಯಾಂಟೀನ್ ಅಲ್ಲ, ಇಂದಿರಾ ಕ್ಯಾಂಟೀನ್: ಸಿದ್ದರಾಮಯ್ಯ
ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿರುವಂತೆ ಏಪ್ರಿಲ್ 1ರಿಂದ ಬೆಂಗಳೂರಿನ 198 ವಾರ್ಡ್ಗಳಲ್ಲಿ ಕ್ಯಾಂಟಿನ್ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಲಾಗಿದ್ದು, ನಮ್ಮ ಕ್ಯಾಂಟೀನ್ ಅಲ್ಲ : ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 28: ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿರುವಂತೆ ಏಪ್ರಿಲ್ 1ರಿಂದ ಬೆಂಗಳೂರಿನ 198 ವಾರ್ಡ್ಗಳಲ್ಲಿ ಕ್ಯಾಂಟಿನ್ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಲಾಗಿದ್ದು, ನಮ್ಮ ಕ್ಯಾಂಟೀನ್ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೆಭೆಯಲ್ಲಿ ಮಂಗಳವಾರ(ಮಾರ್ಚ್ 28)ದಂದು ಹೇಳಿದರು.
ತಮಿಳುನಾಡಿನ 'ಅಮ್ಮ ಕ್ಯಾಂಟೀನ್' ಮಾದರಿಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ 'ನಮ್ಮ ಕ್ಯಾಂಟೀನ್' ಗೆ ಇಂದಿರಾಗಾಂಧಿ ಹೆಸರಿಡಲು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಮುಖಂಡರು ಒತ್ತಾಯಿಸಿದ್ದರು.

'ಇಂದಿರಾ ಕ್ಯಾಂಟೀನ್' ಎಂಬ ಹೆಸರು ಕಾಂಗ್ರೆಸ್ ಪಕ್ಷದ ಯೋಜನೆ ಎಂಬುದನ್ನು ಬೇಗ ಗುರುತಿಸುತ್ತದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಮತದಾರರನ್ನು ಆಕರ್ಷಿಸಲು ಇದು ನೆರವಾಗುತ್ತದೆ ಎಂಬ ತಂತ್ರ ಎಂದು ಅಪಾದನೆ ಕೇಳಿ ಬಂದಿದೆ. ಆದರೆ, ಸರ್ಕಾರ ತನ್ನ ಯೋಜನೆಯನ್ನು ಮುಂದುವರೆಸಿದೆ.
ಲಕ್ಷಾಂತರ ಮಂದಿ ಹಸಿವು ನೀಗಿಸಲು ಬೆಂಗಳೂರಿನಲ್ಲಿ ಆರಂಭಿಸಲಿರುವ ರಿಯಾಯತಿ ದರದ ಕ್ಯಾಂಟೀನ್ ಗಳಿಗೆ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡಲಾಗುವುದು.#Vision4Karnataka
— CM of Karnataka (@CMofKarnataka) March 28, 2017
ಕ್ಯಾಂಟೀನ್ನ ಲಾಂಛನ ವಿನ್ಯಾಸ ಮತ್ತು ಕ್ಯಾಂಟೀನ್ ಒಳಾಂಗಣ ವಾಸ್ತುಶಿಲ್ಪ ವಿನ್ಯಾಸ ರೂಪಿಸಿ ಕಳುಹಿಸುವಂತೆ ಬಿಬಿಎಂಪಿ ಸಾರ್ವಜನಿಕರಿಗೆ ಮನವಿ ಮಾಡಿದೆ.












Click it and Unblock the Notifications