ಐಟಿ ಅಧಿಕಾರಿ- ಸಿಬ್ಬಂದಿಗೆ ಡ್ರೆಸ್ ಕೋಡ್ ಜಾರಿ!
ನವದೆಹಲಿ, ಏಪ್ರಿಲ್ 18: ಕೇಂದ್ರ ಆದಾಯ ತೆರಿಗೆ ಇಲಾಖೆ ತನ್ನ ಇಲಾಖೆಯ ಅಧಿಕಾರಿಗಳು, ನೌಕರರು, ಸಿಬ್ಬಂದಿಗಳಿಗೆ ಡ್ರೆಸ್ ಕೋಡ್ ಜಾರಿ ಮಾಡಿದೆ.
ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತರ ಕಚೇರಿಯಲ್ಲಿ ಈ ಕುರಿತು ಆದೇಶ ಹೊರಡಿಸಿವೆ. ನೀಟಾದ, ಶುಭ್ರ, ಫಾರ್ಮಲ್ ಡ್ರೆಸ್ ಗಳನ್ನೇ ಧರಿಸಬೇಕು. ಉದ್ಯೋಗದ ಸ್ಥಳದಲ್ಲಿ ಅಸಂಬದ್ಧ ಡ್ರೆಸ್ ಗಳನ್ನು ಧರಿಸಕೂಡದು ಎಂದು ಆದೇಶದಲ್ಲಿ ತಿಳಿಸಿದೆ.
ಈ ಆದೇಶದಿಂದ ಇಲಾಖೆಯ ಯುವ ನೌಕರರಿಗೆ ಕೆಲ ಮಟ್ಟಿನ ಮುಜುಗರ ಉಂಟುಮಾಡಿದೆ. ಜೀನ್ಸ್, ಟೀ ಶರ್ಟ್ ಮತ್ತಿತರೆ ಅಸಂಪ್ರದಾಯಿಕ ಉಡುಪು ಧರಿಸುತ್ತಿದ್ವರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕ್ಯಾಶುವಲ್ ಹಾಗೂ ಪಾರ್ಟಿವೇರ್ ಗಳನ್ನು ಕಡ್ಡಾಯವಾಗಿ ಧರಿಸಕೂಡದು ಎಂಬ ಕಟ್ಟಳೆಗೆ ಯುವ ಅಧಿಕಾರಿ, ನೌಕರರುಬೆಚ್ಚಿ ಬಿದ್ದಿದ್ದಾರೆ.

ಇದೇ ರೀತಿಯ ನಿಯಮವನ್ನು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಜಾರಿಗೊಳಿಸಿದ್ದು, ಆದಾಯ ತೆರಿಗೆ ಇಲಾಖೆಯ ನಿಯಮವನ್ನು ಸ್ವಾಗತಿಸಿದೆ. ಕಚೇರಿ ವಾತಾರವಣ ಕಾಪಾಡಲು ಇದು ನೆರವಾಗಿದೆ ಎಂದು ನೌಕರರು ಅಭಿಪ್ರಾಯಪಟ್ಟಿದ್ದಾರೆ.
ಈ ನಿಯಮ ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು ಅಲ್ಲದೇ ನೌಕರರನ್ನು ಮನೆಗೆ ವಾಪಸ್ ಕಳಿಸಿ ಫಾರ್ಮಲ್ ಧರಿಸಿಕೊಂಡು ಬರಲು ಸೂಚಿಸಲಾಗುವುದು ಎಂದು ಆದೇಶ ಹೇಳಿದೆ.












Click it and Unblock the Notifications