NISAR Satellite: ಅಮೆರಿಕಾದ NASAದಿಂದ ಬೆಂಗಳೂರಿಗೆ ಬಂದ 'ನಿಸಾರ್' ಉಪಗ್ರಹ, ಇದರ ವಿಶೇಷತೆ, ಉಪಯೋಗ ತಿಳಿಯಿರಿ
ಅಮೆರಿಕಾದ NASA ಮತ್ತು ಭಾರತದ ISRO ಅಭಿವೃದ್ಧಿ ಪಡಿಸಿದ 'ಉಪಗ್ರಹ' ಒಂದು ಅಮೆರಿಕಾದಿಂದ ಕರ್ನಾಟಕ ರಾಜ್ಯಧಾನಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದೆ.
ಬೆಂಗಳೂರು, ಮಾರ್ಚ್ 09: ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದಡಿ ಮುಂದೆ ಸಾಗುತ್ತಿದೆ. ಸಾಕಷ್ಟು ಪ್ರಯೋಜನ ನೀಡಬಹುದಾದ ಅಮೆರಿಕಾದ NASA ಮತ್ತು ಭಾರತದ ISRO ಅಭಿವೃದ್ಧಿ ಪಡಿಸಿದ 'ಉಪಗ್ರಹ' ಒಂದು ಅಮೆರಿಕಾದಿಂದ ಕರ್ನಾಟಕ ರಾಜ್ಯಧಾನಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದೆ.
Touchdown in Bengaluru! @ISRO receives NISAR (@NASA-ISRO Synthetic Aperture Radar) on a @USAirforce C-17 from @NASAJPL in California, setting the stage for final integration of the Earth observation satellite, a true symbol of #USIndia civil space collaboration. #USIndiaTogether pic.twitter.com/l0a5pa1uxV
— U.S. Consulate General Chennai (@USAndChennai) March 8, 2023
ಹೌದು, ಅಮೆರಿಕಾದ (US) National Aeronautics and Space Administration (NASA) ಹಾಗೂ ಭಾರತದ Indian Space Research Organisation (ISRO) ಜಂಟಿಯಾಗಿ ಅಮೆರಿಕದಲ್ಲಿ 'ನಿಸಾರ್' ಎಂಬ ಉಗ್ರಹವನ್ನು ಅಭಿವೃದ್ಧಿಪಡಿಸಿವೆ. ಬುಧವಾರ ಅದನ್ನು ಅಮೆರಿಕಾದ ವಾಯುಪಡೆಯ C-17 ವಿಮಾನದ ಮೂಲ ಬೆಂಗಳೂರಿಗೆ ತರಲಾಗಿದೆ ಎಂದು ಚೆನ್ನೈನ ಕಾನ್ಸುಲೇಟ್ ಟ್ವೀಟ್ ನಲ್ಲಿ ಹಂಚಿಕೊಂಡಿದೆ.

ದೇಶದಲ್ಲಿ ಭೂ ಕುಸಿತದಂತಹ ಅಪಾಯ ಎದುರಿಸುವ ಪ್ರದೇಶಗಳ ಅಧ್ಯಯನ, ಕೃಷಿ ಮ್ಯಾಪಿಂಗ್, ಅಪರ್ಚರ್ ರಾಡಾರ್ ಸೇರಿದಂತೆ ವಿವಿಧ ಕಾರ್ಯಗಳಿಗೆ ಈ ನಿಸಾರ್ ಉಪಗ್ರಹ ಬಳಸಲು ಇಸ್ರೋ (ISRO) ನಿರ್ಧರಿಸಿದೆ. ಈ ಉಪಗ್ರಹವು ಅಮೆರಿಕ ಮತ್ತು ಭಾರತದ ಮಧ್ಯದ ಬಾಹ್ಯಾಕಾಶ ಕ್ಷೇತ್ರದಲ್ಲಿನ ಬಾಂಧವ್ಯದ ಪ್ರತೀಕವಾಗಿದೆ ಎಂದು ಕಾನ್ಸುಲೇಟ್ ತಿಳಿಸಿದೆ.

ಪ್ರಸಕ್ತ ಈ ಉಪಗ್ರಹವು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂದಿನ ವರ್ಷ ಉಡಾವಣೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಭಾರತ ಭೂಕೂಸಿತವನ್ನು ಆಯಾ ಪ್ರದೇಶಗಳ ಭೌಗೋಳಿಕ ಲಕ್ಷಣಗಳು, ಅಧ್ಯಯನಗಳ ಆಧಾರದ ಮೇಲೆ ಶೀಘ್ರ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇದರಿಂದ ಸಂಭವನೀಯ ಅಪಾಯ ತಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications