ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಪರಾರಿಯಾದನೆ ಐಎಸ್ಐಎಸ್ ಮೆಹದಿ?

|
Google Oneindia Kannada News

ಬೆಂಗಳೂರು, ಡಿ. 12 : ಟ್ವಿಟ್ಟರ್ ಖಾತೆ ಬಳಸಿ ಉಗ್ರ ವಾದವನ್ನು ಹಂಚುತ್ತಿದ್ದವನ ಪತ್ತೆಗೆ ಬೆಂಗಳೂರು ಪೊಲೀಸರು ಬಲೆ ಬೀಸಿದ್ದಾರೆ. @ShamiWitnes ಹೆಸರಿನಲ್ಲಿ ಭಯೋತ್ಪಾದಕರ ಕೃತ್ಯಗಳನ್ನು ಜನರಿಗೆ ತಿಳಿಸಿ ಮತ್ತಷ್ಟು ಭಯ ಹುಟ್ಟಿಸುತ್ತಿದ್ದವನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಉಗ್ರ ನಗರದಿಂದ ಪಲಾಯನ ಮಾಡಿರುವ ಶಂಕೆಯಿದೆ. ಪ್ರಕರಣವನ್ನು ಸಿಸಿಬಿ ಗಂಭೀರವಾಗಿ ಪರಿಗಣಿಸಿದೆ. ಆತ ಬಳಸುತ್ತಿದ್ದ ಸೈಬರ್ ಸೆಲ್ ಗಳ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಶುಕ್ರವಾರ ತಿಳಿಸಿದ್ದಾರೆ.[ಬೆಂಗಳೂರಿನ 'ಟ್ವಿಟ್ಟರ್' ಉಗ್ರನ ರಹಸ್ಯ ಬಯಲು!]

isis

ಉಗ್ರವಾದ ಬಿತ್ತುತ್ತಿದ್ದವನು ತನ್ನ ಹೆಸರನ್ನು ಮೆಹದಿ ಎಂದು ಹೇಳಿಕೊಂಡಿದ್ದಾನೆ. ಈತ ಮಲ್ಟಿನ್ಯಾಶನಲ್ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೇ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಕಳೆದ ವರ್ಷ ಒಪನ್ ಆಗಿದ್ದ ಟ್ವಿಟ್ಟರ್ ಖಾತೆಯಲ್ಲಿ ನಿರಂತರವಾಗಿ ಐಸ್ ಐಸ್ ಉಗ್ರವಾದದ ಚಿತ್ರ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ಎಂದು ಬ್ರಿಟಿಷ್ ಸುದ್ದಿ ವಾಹಿನಿಯೊಂದು ಹೇಳಿದೆ.

ಅವಕಾಶ ಸಿಕ್ಕಿದ್ದರೆ ನಾನು ಉಗ್ರಗಾಮಿಗಳೊಂದಿಗೆ ಕೈ ಜೋಡಿಸುತ್ತಿದ್ದೆ. ಆದರೆ ನನ್ನ ಕುಟುಂಬದೊಂದಿಗೆ ನಾನಿರಬೇಕಿತ್ತು. ಹಾಗಾಗಿ ಉಗ್ರವಾದ ಬಿತ್ತುವ ಕೆಲಸವನ್ನು ಸಾಮಾಜಿಕ ಜಾಲತಾಣ ಬಳಸಿಕೊಂಡು ಮಾಡುತ್ತಿದ್ದೆ ಎಂದು ಯುಕೆ ಚಾನಲ್ -4 ಗೆ ನೀಡಿದ ಸಂದರ್ಶನವೊಂದರಲ್ಲಿ ಮೆಹದಿ ಹೇಳಿದ್ದ.[ಮದುವೆಯಾಗದ ಮುಸ್ಲಿಂ ಯುವಕರಿಗಿಲ್ಲ ಇರಾಕ್ ವೀಸಾ]

ಉಗ್ರರ ನಂಟಿಟ್ಟುಕೊಂಡು ಇಷ್ಟು ದಿನ ಬೆಂಗಳೂರಿನಲ್ಲಿ ತಿರುಗಾಡಿಕೊಂಡಿದ್ದ ವ್ಯಕ್ತಿ ಈಗ ಪಲಾಯನ ಮಾಡಿದ್ದಾನೆ. ಪೊಲೀಸರ ಕೈ ಗೆ ಆತ ಸಿಕ್ಕಿಬಿದ್ದ ನಂತರ ಇನ್ನಷ್ಟು ಆತಂಕಕಾರಿ ಮಾಹಿತಿಗಳು ಬಹಿರಂಗವಾಗಲಿವೆ.

English summary
Senior Bengaluru police officials said that a search is on for the man who is suspected to have operated ISIS's most successful Twitter account, @ShamiWitnes. Police commissioner MN Reddi on Friday said that the task of investigation has been given to the central crime branch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X