• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್.ಆರ್.ನಗರ: ಬಿಜೆಪಿ ಟಿಕೆಟ್ ಸಿಗದೇ ಇದ್ದಲ್ಲಿ ಮುನಿರತ್ನ ಪ್ಲ್ಯಾನ್ ಬಿ ರೆಡಿ!

|

ಬೆಂಗಳೂರು, ಅ 6: ನವೆಂಬರ್ ಮೂರರಂದು ನಡೆಯಲಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಇನ್ನೂ ಸಿಗಬೇಕಿದೆ.

ಆರ್.ಆರ್. ನಗರ ಕ್ಷೇತ್ರದಿಂದ, ಬಿಜೆಪಿ ಎರಡು ಹೆಸರು ಅನುಮೋದನೆ ಮಾಡಿ ಹೈಕಮಾಂಡ್ ಗೆ ಕಳುಹಿಸಿರುವುದರಿಂದ, ಅಲ್ಲಿಂದ, ಮುನಿರತ್ನ ಸ್ಪರ್ಧಿಸಲಿದ್ದಾರೋ ಅಥವಾ ತುಳಸಿ ಮುನಿರಾಜು ಗೌಡ ಕಣಕ್ಕಿಳಿಯಲಿದ್ದಾರೋ ಎನ್ನುವುದರ ಬಗ್ಗೆ ಕುತೂಹಲ ಮುಂದುವರಿದಿದೆ.

ಉಪಚುನಾವಣೆ: ಡಿ.ಕೆ.ಶಿವಕುಮಾರ್ ಹೇಳಿದ ಅಚ್ಚರಿಯ ಅಭ್ಯರ್ಥಿ ಇವರೇನಾ?

ಮೇಲ್ನೋಟಕ್ಕೆ ಮುನಿರತ್ನಗೆ ಟಿಕೆಟ್ ಒಲಿಯಲಿದೆ ಎಂದು ಹೇಳಲಾಗುತ್ತಿದ್ದರೂ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ತುಳಸಿ ಮುನಿರಾಜು ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಇವರಿಬ್ಬರಲ್ಲಿ ಯಾರಿಗಾದರೂ ಟಿಕೆಟ್ ಸಿಗುವ ಸಾಧ್ಯತೆಯಿದೆ.

ರಾಜರಾಜೇಶ್ವರಿ ನಗರ ಉಪಚುನಾವಣೆ: ನೊಣವಿನಕೆರೆ ಅಜ್ಜಯ್ಯ ನುಡಿದ ಭವಿಷ್ಯ

ಆದರೆ, ಮುನಿರತ್ನಗೆ ಕೊನೇ ಗಳಿಗೆಯಲ್ಲಿ ಬಿಜೆಪಿ ಟಿಕೆಟ್ ನೀಡದೇ ಇದ್ದಲ್ಲಿ, ಅವರು ಪ್ಲ್ಯಾನ್ ಬಿ ರೆಡಿಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಕಾಂಗ್ರೆಸ್ಸಿನಿಂದ, ಐಪಿಎಸ್ ಅಧಿಕಾರಿ ಡಿ.ಕೆ.ರವಿಯವರ ಪತ್ನಿ ಕುಸುಮಾಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಏನು ಮುನಿರತ್ನದ್ದು ಪ್ಲ್ಯಾನ್ ಬಿ?

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ರಾಜರಾಜೇಶ್ವರಿ ನಗರ ಅಸೆಂಬ್ಲಿ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಎರಡು ಬಣವಿದೆ. ಒಂದು ತುಳಸಿ ಮುನಿರಾಜು, ಇನ್ನೊಂದು, ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿರುವ ಮುನಿರತ್ನದ್ದು. ಮೂಲ ಬಿಜೆಪಿ ಕಾರ್ಯಕರ್ತರು ಈಗಲೂ ತುಳಸಿ ಮುನಿರಾಜು ಪರ ಇರುವುದನ್ನು ಅರಿತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುನಿರಾಜು ಪರ ಕೋರ್ ಕಮಿಟಿ ಸಭೆಯಲ್ಲಿ ಬ್ಯಾಟ್ ಬೀಸಿದ್ದರು ಎಂದು ಹೇಳಲಾಗುತ್ತಿದೆ.

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ

ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ

ಬಿಜೆಪಿ ರಾಜ್ಯ ಕಮಿಟಿಯಿಂದ ಇಬ್ಬರ ಹೆಸರು ಅನುಮೋದನೆಗೊಂಡ ನಂತರ ಮಾತನಾಡಿದ್ದ ಮುನಿರತ್ನ, "ನನಗೆ ಟಿಕೆಟ್ ಸಿಕ್ಕರೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆಯೇ ಹೊರತು ಪಕ್ಷ ಬಿಡುವ ನಿರ್ಧಾರ ತೆಗೆದುಕೊಳ್ಲುವುದಿಲ್ಲ"ಎಂದೇನೋ ಹೇಳಿದ್ದಾರೆ. ಆದರೆ, ಟಿಕೆಟ್ ಸಿಗದೇ ಇದ್ದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಲಿದ್ದಾರಾ ಎನ್ನುವ ಚರ್ಚೆ ಆರಂಭವಾಗಿದೆ.

ಕಾದು ನೋಡುವ ತಂತ್ರಕ್ಕೆ ಸದ್ಯ ಮುಂದಾಗಿರುವ ಜೆಡಿಎಸ್

ಕಾದು ನೋಡುವ ತಂತ್ರಕ್ಕೆ ಸದ್ಯ ಮುಂದಾಗಿರುವ ಜೆಡಿಎಸ್

ಕೆಲವೊಂದು ಮೂಲಗಳ ಪ್ರಕಾರ, ಜೆಡಿಎಸ್ ಪಕ್ಷ, ಆರ್.ಆರ್.ನಗರದಿಂದ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಲಿಲ್ಲ. ಕಾದು ನೋಡುವ ತಂತ್ರಕ್ಕೆ ಸದ್ಯ ಮುಂದಾಗಿರುವ ಜೆಡಿಎಸ್, ಒಂದು ವೇಳೆ, ಮುನಿರತ್ನಗೆ ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಅವರನ್ನು ತಮ್ಮತ್ತ ಸೆಳೆಯುವ ಯೋಜನೆ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ, ಮುನಿರತ್ನ ಕೂಡಾ ಪ್ಲ್ಯಾನ್ ಬಿ ರೆಡಿಮಾಡಿಕೊಂಡಿದ್ದಾರೆ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿದೆ.

ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣೀಕರ್ತರಲ್ಲಿ ಒಬ್ಬರು

ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣೀಕರ್ತರಲ್ಲಿ ಒಬ್ಬರು

ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣೀಕರ್ತರಲ್ಲಿ ಒಬ್ಬರಾಗಿರುವ ಮುನಿರತ್ನ, ಅಂದು ತಮ್ಮ ಜೊತೆಗಿದ್ದ ಹದಿನಾರು ಮುಖಂಡರ ಮೂಲಕ ಯಡಿಯೂರಪ್ಪನವರಿಗೆ ಒತ್ತಡವನ್ನು ಹೇರುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಸಾಮರಸ್ಯದ ಕೊರತೆ ಕಾಡುತ್ತಿರುವುದರಿಂದ, ಇದು ಕೂಡಾ ಒಂದು ವೇಳೆ ಮುನಿರತ್ನಗೆ ಟಿಕೆಟ್ ಸಿಗದೇ ಇದ್ದರೆ ಕಾರಣವಾಗಬಹುದು.

   RR Nagar ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ Muniratna | Oneindia Kannada

   English summary
   Is Plan B Ready Of BJP Ticket Aspirant From RR Nagar Bypoll Munirathna
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X