ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಕನಸು ಸಾಕಾರವಾಗುವುದೆ?
ನವದೆಹಲಿ, ಜೂ. 26 : ಪ್ರಧಾನಿ ನರೇಂದ್ರ ಮೋದಿ ಅವರ ಸ್ಮಾರ್ಟ್ ಸಿಟಿಯ ಕಲ್ಪನೆಗೆ ರೆಕ್ಕೆಪುಕ್ಕ ಬಂದಿವೆ. ಜನರ ಅಗತ್ಯಕ್ಕೆ ತಕ್ಕಂತೆ ನಿರ್ಮಾಣವಾಗುವ ಈ ಸ್ಮಾರ್ಟ್ ಸಿಟಿಗಳು ಎರಡು ಹೆಜ್ಜೆ ಮುಂದಿರುತ್ತವೆ ಎಂದು ಮೋದಿ ಹೇಳಿದ್ದಾರೆ. ಈ ಕಲ್ಪನೆಗೆ ಜೀವ ಕೊಡಲು ಕರ್ನಾಟಕ ಸಿದ್ಧವಾಗಿದೆಯೆ? ಕಾಂಗ್ರೆಸ್ ಸರಕಾರ ನಡೆಸುತ್ತಿರುವ ಸಿದ್ದರಾಮಯ್ಯ ಇದಕ್ಕೆ ಇಂಬು ನೀಡುತ್ತಾರೆಯೆ?
ಸ್ಮಾರ್ಟ್ ನಗರಾಡಳಿತವನ್ನು ಜಾರಿಗೆ ತರುವಲ್ಲಿ ಸಿದ್ದರಾಮಯ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದಿರುವ ಮಲ್ಲೇಶ್ವರದ ಶಾಸಕ ಡಾ. ಅಶ್ವತ್ಥ ನಾರಾಯಣ ಸಿಎನ್ [ಸಂದರ್ಶನ] ಅವರು, ಎರಡು ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತ ಉತ್ತಮ ನಗರಾಡಳಿತ ನೀಡುವ ಎಲ್ಲ ಅವಕಾಶಗಳನ್ನು ಗಾಳಿಗೆ ತೂರಿದೆ ಎಂದು ದೂರಿದ್ದಾರೆ. ಸ್ಮಾರ್ಟ್ ಸಿಟಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅದರ ಮುಖ್ಯಾಂಶಗಳು ಇಲ್ಲಿವೆ. [ನಗರಗಳನ್ನು 'ಸ್ಮಾರ್ಟ್' ಮಾಡುವ 3 ಯೋಜನೆಗೆ ಚಾಲನೆ]

* ಮ್ಯಾಕ್‌ಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್ ನಡೆಸಿರುವ ಸಮೀಕ್ಷೆಯ ಪ್ರಕಾರ, 2030ರಲ್ಲಿ ಅಮೆರಿಕಾದ ಜನಸಂಖ್ಯೆಯ ಎರಡರಷ್ಟು ಜನರು ಭಾರತದ ನಗರಗಳಲ್ಲಿ ವಾಸಿಸಲಿದ್ದಾರೆ.
* ಯೋಜನೆರಹಿತ ನಗರೀಕರಣದಿಂದಾಗಿ ನಗರ ಜೀವನ ಅಸ್ತವ್ಯಸ್ತವಾಗಲಿದೆ, ಜನರು ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಮೋದಿ ಅವರ ಕನಸಿನ ಸ್ಮಾರ್ಟ್ ಸಿಟಿ ಯೋಜನೆ ಪರಿಹಾರ ಕಂಡುಕೊಳ್ಳಲಿದೆ.
* ಯುಪಿಎ ಸರಕಾರಕ್ಕೂ, ಎನ್ಡಿಎ ಸರಕಾರಕ್ಕೂ ಇದ್ದ ವ್ಯತ್ಯಾಸವೇ ಇದು. ಯುಪಿಎ ಸರಕಾರ ಮುಚ್ಚಿದ ಬಾಗಿಲುಗಳ ಹಿಂದೆ ನೀತಿಗಳನ್ನು ರೂಪಿಸುತ್ತಿದ್ದರೆ, ಎನ್ಡಿಎ ಸರಕಾರ MyGov ಡಿಜಿಟಲ್ ವೇದಿಕೆಯ ಮೂಲಕ ನೀತಿ ರೂಪಿಸುವುದನ್ನು ಜನರ ಮುಂದೆ ತೆರೆದಿಟ್ಟಿದೆ.
* ಸ್ಮಾರ್ಟ್ ಸಿಟಿ ಯೋಜನೆಗೆ ಕರ್ನಾಟಕದಿಂದ ನಾಮಾಂಕಿತಗೊಂಡಿದ್ದು ಇತರ ನಗರಗಳು ಬೆಳಗಾವಿ, ಬೀದರ್, ವಿಜಯಪುರ, ಪಟ್ಟದಕಲ್ಲು, ಮಹಾಕೂಟ, ಬಾದಾಮಿ. ['ಸ್ಮಾರ್ಟ್ ಸಿಟಿಯಾಗಿ ಪೀಣ್ಯ, ವೈಟ್ ಫೀಲ್ಡ್ ಅಭಿವೃದ್ಧಿ']
* ಚುನಾವಣಾ ಪ್ರಣಾಳಿಕೆಯಲ್ಲಿ ಸ್ಮಾರ್ಟ್ ಸಿಟಿಯ ಮಹತ್ವವನ್ನು ಹೇಳಿತ್ತು. ಜನರು ಇಂಥ ಯೋಜನೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದಕ್ಕೆ ಅವರು ಬಹುಮತ ನೀಡಿದ್ದೇ ಸಾಕ್ಷಿ. ಸ್ಮಾರ್ಟ್ ಸಿಟಿ ಯೋಜನೆ ಕೆಳಗಿನಂತೆ ಕೆಲಸ ಮಾಡುತ್ತದೆ.
1. ಸ್ಪರ್ಧೆಗಳ ಭಾಗವಹಿಸುವಿಕೆಯಲ್ಲಿ ಪ್ರತಿ ರಾಜ್ಯಗಳಿಗೆ ಕೆಲವು ಮಿತಿಗಳಿವೆ ಮತ್ತು ನಗರಗಳ ನಡುವೆ ಸ್ಪರ್ಧೆಯಿರುತ್ತದೆ.
2. ಮೊದಲ ವರ್ಷದಲ್ಲಿ 20 ನಗರಗಳನ್ನು ಆಯ್ದು ಕೊಳ್ಳಲಾಗುವುದು. ನಂತರದ ವರ್ಷದಲ್ಲಿ 80 ನಗರಗಳನ್ನು ಆಯ್ಕೆ ಮಾಡಲಾಗುವುದು.
3. ಪ್ರತಿಯೊಂದು ರಾಜ್ಯಕ್ಕೂ ನಗರಗಳ ಜನಸಂಖ್ಯೆಯ ಆಧಾರದ ಮೇಲೆ ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲು ಕೇಂದ್ರ ತಿಳಿಸಲಿದೆ.
4. ಈ ಯೋಜನೆಗೆ 5 ವರ್ಷದಲ್ಲಿ ಸುಮಾರು 48,000 ಕೋಟಿ ರು. ವೆಚ್ಚ ತಗಲಿದೆ. [ಸ್ಮಾರ್ಟ್ ಸಿಟಿಯ ಕುರಿತು ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ಓದಿರಿ]












Click it and Unblock the Notifications