ಜೈಲೂಟದಿಂದಲೇ ತೂಕ ಕಳೆದುಕೊಳ್ಳುತ್ತಿದ್ಯಾ ಡೈಲಿ ತುಂಡಿನಲ್ಲೇ ಮುಳುಗಿ ಮದವೇರಿದ್ದ ಗಜ.?-ನೆಟ್ಟಿಗರ ಪ್ರಶ್ನೆ
Darshan Case: ಆನೆ ನಡೆದಿದ್ದೇ ದಾರಿ ಎನ್ನುವ ರೀತಿಯಲ್ಲಿ ತನ್ನಗಿಷ್ಟ ಬಂದಂತೆ ಎಳುವವರು- ಕೇಳುವವರು ಯಾರೂ ಇಲ್ಲವೆಂಬಂತೆ ಮೆರೆಯುತ್ತಿದ್ದ ನಟ ದರ್ಶನ್ ಇದೀಗ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿದ್ದಾನೆ. ಹಾಗಾದರೆ ಅಲ್ಲಿ ನಟ ದರ್ಶನ್ ಜೈಲು ಜೀವನ ಹೇಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಮುಖದಲ್ಲಿ ಆನೆ ಗುಣ, ಆದರೆ ಮನಸ್ಸಲ್ಲಿ ವಿಕೃತಿಯನ್ನೊಳ್ಲಗೊಂಡ ನಟ ದರ್ಶನ್ ಇದೀಗ ತಕ್ಕ ಶಾಸ್ತಿಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಕೊಲೆ ಮಾಡಿರುವ ಆರೋಪದಲ್ಲಿ ಜೈಲು ಸೇರಿರುವ ಈತನನ್ನೇ ಮತ್ತೆ ಬಾಸ್.. ಬಾಸ್ ಎಂದು ಅಂಧಾಭಿಮಾನಿಗಳು ಮೆರೆಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಅಂತಲೂ ಆಕ್ರೋಶಗಳು ಭುಗಿಲೆದ್ದಿವೆ. ಅಲ್ಲದೆ ಪೊಲೀಸರೇನು ಕೈಕಟ್ಟಿ ಸುಮ್ಮನೆ ಕುಳಿತಿಲ್ಲ.. ಅಂಧಾಭಿಮಾನಿಗಳ ಸೊಕ್ಕು ಮುರಿಯಲು ಮುಂದಾಗಿದ್ದಾರೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಕೇಂದ್ರ ಕಾರಾಗೃಹ ಸೇರಿದ್ದಾರೆ. ಜೈಲಿನ ಸಿಬ್ಬಂದಿ ಬಳಿ ಬಿಸಿ ನೀರನ್ನು ಕೇಳಿ ದರ್ಶನ್ ಪಡೆದಿದ್ದು, ಬಳಿಕ ಕೆಲ ಹೊತ್ತು ಬ್ಯಾರಾಕ್ನಲ್ಲಿಯೇ ವಾಕಿಂಗ್ ಮಾಡಿದ್ದಾರೆ. ಆದರೆ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ಊಟ ಸೇರುತ್ತಿಲ್ಲವಂತೆ. ಹೀಗಾಗಿ ದರ್ಶನ್ ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ವಿಷಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ, ಮಂಗಳವಾರ (ಜೂನ್ 25) ರಾತ್ರಿ ಬೇಗನೇ ನಿದ್ರೆಗೆ ದರ್ಶನ್ ಮರುದಿನ ಅಂದರೆ ಬುಧವಾರ (ಜೂನ್ 26) ಬೆಳಗ್ಗೆ 5:30ಕ್ಕೆ ಎದ್ದಿದ್ದಾರೆ. ಬಳಿಕ ಬಿಸಿ ನೀರನ್ನು ಕೇಳಿ ಪಡೆದಿದ್ದಾರೆ. ಇನ್ನು ಜೂನ್ 25ರಂದು ದರ್ಶನ್ ಪತ್ನಿ, ಮಗನ ಭೇಟಿ ಮಾಡಿದಾಗಿನಿಂದ ತುಸು ರಿಲ್ಯಾಕ್ಸ್ ಮೂಡ್‌ನಲಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಪ್ರದಿದಿನ, ಬರೀ ತುಂಡಿನಲ್ಲೇ ಮುಳುಗಿರುತ್ತಿದ್ದ ನಟ ದರ್ಶನ್‌ಗೆ ಜೈಲೂಟ ಸೇರುತ್ತಿಲ್ಲವಂತೆ. ಅನಿವಾರ್ಯವಾಗಿ ಯಾವುದೇ ವಿದಿಯಿಲ್ಲದೆ, ಅದನ್ನೇ ಸೇವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ದಿನ ಕಳೆದಂತೆ ಅವರು ತೂಕ ಕಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ದರ್ಶನ್ ಜೈಲಿನಲ್ಲಿ ಯಾರ ಜತೆಯೂ ಬೆರೆಯದೆ ಒಂಟಿಯಾಗಿ ಕುಳಿತುಕೊಳ್ಳುತ್ತಿದ್ದಾರೆ ಎಂದು ತಿಳಿದಿಬಂದಿದೆ.
"ದರ್ಶನ್ ಜೈಲು ಜೀವನವನ್ನು ನೆನೆದರೆ, ದರ್ಶನ್ ರೇಣುಕಾಸ್ವಾಮಿಯಂತೆ ಆಗುವುದಂತೂ ಪಕ್ಕಾ. ಕರ್ಮ ಯಾರನ್ನೂ ಬಿಡುವುದಿಲ್ಲ. ಮಾಡಿದ ಪಾಪ ಅದು ಹಿಂತಿರುಗಿ ಬಂದೇ ಬರುತ್ತದೆ. ಅದಕ್ಕೇ ಇದೀಗ ದರ್ಶನ್ ಗುಂಡು, ತುಂಡು ಬಿಟ್ಟು ಜೈಲೂಟ ಸೇವನೆ ಮಾಡುತ್ತಿರುವುದೇ ಉದಾಹರಣೆಯಾಗಿದೆ, ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ನೆಟ್ಟಿಗರ ಆಕ್ರೋಶ: ಮೂಲಗಳ ಪ್ರಕಾರ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ತಿಳಿಯುತ್ತಿದ್ದಂತೆ, ನಟ ದರ್ಶನ್ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿಗೆ ಕರೆತಂದಿದೆ. ಮೊದಲಿಗೆ ರೇಣುಕಾಸ್ವಾಮಿಯನ್ನು ನಟ ದರ್ಶನ್ ಮನೆಗೆ ಕರೆದೊಯ್ಯಲಾಗಿದ್ದು, ಬಳಿಕ ನೇರವಾಗಿ ಪಟ್ಟಣಗೆರೆಯ ಶೆಡ್‌ಗೆ ಕೊರೆದೊಯ್ಯಲಾಗಿದೆ. ನಂತರ ಅಲ್ಲಿಗೆ ದರ್ಶನ್ & ಪವಿತ್ರಾ ಗೌಡ ಆಗಮಿಸಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿತ್ತು.
ಶೆಡ್‌ನಲ್ಲಿ ಪವಿತ್ರಾ ಗೌಡ ರೇಣುಕಾಸ್ವಾಮಿಯನ್ನು ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ನಂತರ ಆತ ನಾನ್‌ವೆಜ್ ತಿನ್ನಲ್ಲ ಅಂತಾ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಆಗ ನಟ ದರ್ಶನ್ ಆತನ ಎದೆಗೆ ಕಾಲಿನಲ್ಲಿ ಒದ್ದು ಬಲವಂತವಾಗಿ ಮಾಂಸದ ಮೂಳೆಯನ್ನು ಬಾಯಲ್ಲಿ ಇಟ್ಟಿದ್ದಾನೆ. ಅಷ್ಟೇ ಅಲ್ಲದೆ, ಕರೆಂಟ್ ಶಾಕ್ ಕೊಟ್ಟಿದ್ದಾರೆ. ನಂತರ ಅಲ್ಲಿದ್ದ ಲಾರಿಗಳಿಗೆ ಆತನನ್ನು ಪುಟ್‌ಬಾಲ್ ರೀತಿ ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆಗೆ ಬಿಸಾಡಿ ತಲೆಗೆ ಒಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ ಅಂತಲೂ ತಿಳಿದುಬಂದಿತ್ತು.
ಹಾಗೆಯೇ ನಟ ದರ್ಶನ್ & ಪವಿತ್ರಾ ಗೌಡ ಮಾಡಿದ ತಪ್ಪಿಗೆ ಬೇರೆಯವರ ಮಕ್ಕಳು ಇದೀಗ ಜೈಲು ಸೇರಿದ್ದು, ಅವರ ಕುಟುಂಬಗಳು ಬೀದಿದೆ ಬಿದ್ದು ಕಣ್ಣೀರಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದರ್ಶನ್ ಒಬ್ಬ ಉತ್ತಮ ನಟ ಅಂತಲೂ ಹೆಸರು ಮಾಡಿದ್ದು, ಈತ ಸಮಾಜಕ್ಕೆ ಮಾದರಿಯಾಗಬಹುದಿತ್ತು. ಆದರೆ ಇದೀಗ ಈತನಿಂದ ನಮ್ಮ ಕಟುಂಬಗಳು ಬೀದಿಗೆ ಬರುವಂತಾಗಿವೆ ಎಂದು ಜೈಲು ಸೇರಿರುವ ಆರೋಪಿಗಳ ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇಷ್ಟೆಲ್ಲಾ ಆದರೂ ಕೂಡ ಅಂಧಾಭಿಮಾನಿಗಳು ನಮ್ಮ ಬಸ್.. ಡಿ ಬಾಸ್ ಅಂತಾ ಹುಚ್ಚರಂತೆ ಮೆರೆಯುತ್ತಿದ್ದಾರೆ. ಇವರಿಗೆಲ್ಲ ಹೇಳೋದು ಒಂದೇ ಮಾತು ಮೊದಲು ನಿಮ್ಮ ತಂದೆ, ತಾಯಿಗೆ ನೀವು ಹಿರೋಗಳಾಗಿ. ಸಮಾಜಕ್ಕೆ ಉತ್ತಮ ಕೊಡುಗೆ ಕೊಟ್ಟಿರುವ ತುಂಬಾ ಜನ ಮಹಾನುಭಾವರಿದ್ದಾರೆ. ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವ ಮೂಲಕ ನಿಮ್ಮ ಜೀವನವನ್ನು ರೂಪಿಸಿಕೊಳ್ಳಿ. ಸಾಮಾನ್ಯವಾಗಿ ದೊಡ್ಡ ಸಾಧನೆ ಮಾಡಿದಂತಹ ನಾಯಕ, ನಟರು ತಪ್ಪುಗಳನ್ನು ಮಾಡಿರುತ್ತಾರೆ ಇಲ್ಲ ಅಂತಲ್ಲ. ಮತ್ತೆ ಆ ತಪ್ಪುಗಳನ್ನು ತಿದ್ದಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಮಾದರಿಯಾಗಿದ್ದನ್ನು ನಾವು ನೋಡಿರುತ್ತೇವೆ.
ಆದರೆ ಮಾಡಿದ ತಪ್ಪನ್ನೇ ಮತ್ತೆ ಮಾಡಿಕೊಂಡು, ಎಷ್ಟು ಬಾರಿ ಯಾರೇ ಬುದ್ಧಿವಾದ ಹೇಳಿದರೂ ಕೂಡ ತಿದ್ದಿಕೊಳ್ಳದೇ, ನಡೆದಿದ್ದೇ ದಾರಿ ಎನ್ನುವವರು ಮಾತ್ರ ಯಾವತ್ತಿಗೂ ಸಮಾಜಕ್ಕೆ ಕಂಟಕನೇ ಅನ್ನುವುದನ್ನು ಮರೆಯಬೇಡಿ. ಹಾಗಂತ ರೇಣುಕಾಸ್ವಾಮಿ ಮಾಡಿದ್ದು ಸರಿಯಂತಲ್ಲ, ಆತ ಒಂದು ಹೆಣ್ಣಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದು ದೊಡ್ಡ ತಪ್ಪೇ. ಹಲವು ಮಾರ್ಗಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಇಲ್ಲದಿದ್ದರೆ, ಆ ಜಿಲ್ಲೆಯ ಎಸ್ಪಿ ಅವರಿಗೆ ಹೇಳಿ ಆತನಿಗೆ ವಾರ್ನ್ ಮಾಡಿಸಬಹುದಿತ್ತು. ಅದನ್ನು ಬಿಟ್ಟು ಕೊಲ್ಲುವ ಹಂತಕ್ಕೆ ಹೋಗಿರುವುದು ಕೂಡ ದೊಡ್ಡ ಅಪರಾಧವೆ.












Click it and Unblock the Notifications