ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಪಿಎಸ್ ರೂಪಾ ಭಾವಚಿತ್ರ ಬಳಸಿ ಅಸ್ಸಾಂನಲ್ಲಿ ಚಂದಾ ವಸೂಲಿ !

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಗೃಹ ಇಲಾಖೆ ಕಾರ್ಯದರ್ಶಿ ರೂಪಾ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚನೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಐಜಿಪಿ ಮುದ್ಗಿಲ್ ಪೋಟೋ ಬಳಿಸಿ ವಂಚಕರು ಹಣ ವಸೂಲಿಗೆ ಇಳಿದಿದ್ದಾರೆ.

ಸಕೋಲಿನ್ ಚೌಧರಿ ಶರ್ಮಾ ಎಂಬ ಹೆಸರಿನ ಫೇಸ್ ಬುಕ್ ಅಕೌಂಟ್ ಗೆ ರೂಪಾ ಅವರ ಪೋಟೋ ಬಳಕೆ ಮಾಡಲಾಗಿದೆ. ಅಸ್ಸಾಂ ಮೂಲದ ಜನರಿಗೆ ಫ್ರೆಂಡ್ಸ್ ರಿಕ್ವೆಸ್ಟ್ ಕಳಿಸಿ, ನಾನು ಅಸ್ಸಾಂನ ಸಿವಿಲ್ ಸರ್ವೆಂಟ್ ಎಂದು ಹೇಳಿಕೊಂಡು ಜನರ ಸಂಪರ್ಕ ಸಾಧಿಸಿ ಬಳಿಕ ವಾಟ್ಸಪ್ ಗುಂಪು ರಚಿಸಿದ್ದಾರೆ. ಬಳಿಕ ಅಸ್ಸಾಂನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡಲು ಹಣ ನೀಡುವಂತೆ ಮನವಿ ಮಾಡಲಾಗಿದೆ. ಜತೆಗೆ ಅಡಿಯೋ ಸಂದೇಶ ಕೂಡ ರವಾನಿಸಲಾಗಿದೆ.

ಬೆಚ್ಚಿ ಬೀಳಿಸುವಂತಿವೆ ಗೃಹ ಇಲಾಖೆ ಸರ್ಕಾರಕ್ಕೆ ಸಲ್ಲಿಸಿರುವ ವರದಿ!ಬೆಚ್ಚಿ ಬೀಳಿಸುವಂತಿವೆ ಗೃಹ ಇಲಾಖೆ ಸರ್ಕಾರಕ್ಕೆ ಸಲ್ಲಿಸಿರುವ ವರದಿ!

ಐಪಿಎಸ್ ರೂಪಾ ಅವರ ಮುಖ ನೋಡುತ್ತಿದ್ದಂತೆ ಹಲವರು ಹಣ ಕಳಿಸಿದ್ದಾರೆ. ದೇಶಾದ್ಯಂತ ತನ್ನ ಅಭಿಮಾನಿಗಳನ್ನು ಹೊಂದಿರುವ ರೂಪಾ ಅವರಿಗೆ ಕರೆ ಮಾಡಿ, ನಿಮ್ಮ ಭಾವಚಿತ್ರ ಬಳಿಸಿಕೊಂಡು ಹಣ ಕೇಳಲಾಗುತ್ತಿದೆ ಎಂಬ ಸಂಗತಿ ತಿಳಿಸಿದ್ದಾರೆ. ಈ ಬಗ್ಗೆ ವಾಟ್ಸಪ್ ನಲ್ಲಿ ಹರಿದಾಡಿದ್ದ ಸಂದೇಶಗಳನ್ನು ಸಂಗ್ರಹಿಸಿ ಸೈಬರ್ ಪೊಲೀಸರಿಗೆ ನೀಡಿದ್ದಾರೆ. ಈ ಕುರಿತ ಸಂದೇಶಗಳು ವೈರಲ್ ಆಗಿವೆ.

IPS Roopa photo misused by cyber criminals for collecting funds in Assam

ದುರುರ್ಬಯ್ ಎಂಬ ಯುವಕ ನಿಮ್ಮ ಭಾವಚಿತ್ರವನ್ನು ಫೇಸ್ ಬುಕ್ ನಲ್ಲಿ ಹಲವಾರು ದಿನದಿಂದ ಬಳಸುತ್ತಿದ್ದಾರೆ. ಸಕೋಲಿನಾ ಶರ್ಮಾ ಹೆಸರಿನಲ್ಲಿ ಖಾತೆ ತೆರೆದು ಸ್ಥಳೀಯರಿಂದ ಹಣ ವಸೂಲಿ ಮಾಡಿದ್ದಾರೆ. ಇದಾದ ಬಳಿಕ ಪ್ರಣಾಮಿಕ ಮಹಾಂತಾಸ್ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆಗೆದು ಅದಕ್ಕೈ ಐಪಿಎಸ್ ರೂಪಾ ಅವರ ಪೋಟೋ ಬಳಿಸಲಾಗಿದೆ. ಸೈಬರ್ ಕ್ರಿಮಿನಲ್ ಗಳು ರೂಪಾ ಅವರ ಹೆಸರು ಬಳಿಸಿ ಹೆಣ್ಣು ಧ್ವನಿಯಲ್ಲಿಯೇ ಮಾತನಾಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ್ದಾರೆ.

ಟ್ರೂ ಇಂಡಾಲಜಿ ಜತೆ ವಿವಾದ: ಪಟಾಕಿ ಸಿಡಿಸುವುದು ಹಿಂದೂಗಳ ಸಂಪ್ರದಾಯವಲ್ಲ ಎಂದು ಹೇಳಿಕೆ ನೀಡಿ ಐಪಿಎಸ್ ರೂಪಾ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ರೂಪಾ ಅವರು ಸುಳ್ಳು ಹೇಳಿದ್ದಾರೆ ಎಂದು ಸಾಕ್ಷಿ ಸಮೇತ ಟ್ರೂ ಇಂಟಾಲಜಿ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ವಾದ ವಿವಾದ ತಾರಕ್ಕೇರಿತ್ತು. ಬಳಿಕ ರೂಪಾ ಅವರು ನೀಡಿದ ದೂರಿನ ಮೇರೆಗೆ ಟ್ರೂ ಇಂಡಾಲಜಿ ಟ್ವಿಟ್ಟರ್ ಖಾತೆಯನ್ನು ರದ್ದಾಗಿತ್ತು. ಡಿಐಜಿ ರೂಪಾ ಅವರ ಈ ಕ್ರಮದ ವಿರುದ್ಧ ರಾಷ್ಟ್ರವ್ಯಾಪ್ತಿ ಆಕ್ರೋಶ ವ್ಯಕ್ತವಾಗಿತ್ತು. ರೂಪಾ ಅವರನ್ನು ಟ್ರೋಲ್ ಮಾಡಿ ಟಿಟ್ವರ್ ರಲ್ಲಿ ಟ್ರೆಂಡ್ ಆಗಿದ್ದರು. ಈ ಮೂಲಕ ರೂಪಾ ಅವರು ದೇಶದೆಲ್ಲೆಡೆ ಚಿರಪರಿಚಿತರಾಗಿದ್ದರು. ಇದೀಗ ರೂಪಾ ಅವರೇ ಪೋಟೋಗಳನ್ನೇ ಬಳಸಿಕೊಂಡು ಸೈಬರ್ ಕ್ರಿಮಿನಲ್ ಗಳು ಅಸ್ಸಾಂನಲ್ಲಿ ಚಂದಾ ವಸೂಲಿ ಮಾಡಲಾಗಿದೆ.

English summary
Cyber criminals have collected money from innocents using photos of senior IPS officer Roopa on a social networking site in Assam. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X