ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆರ್‌ಸಿಬಿ ಮ್ಯಾಚ್ ನೋಡಲು ಹೊರಟಿದ್ದೀರಾ?, ಹಾಗಿದ್ದರೇ ಈ ಅಂಶಗಳನ್ನು ತಿಳಿದುಕೊಳ್ಳಲೇಬೇಕು
ಬೆಂಗಳೂರು, ಏಪ್ರಿಲ್. 02: ಚಿನ್ನಸ್ವಾಮಿ ಕ್ರೀಡಾಂಗಣ ಭಾನುವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡು ಜನಪ್ರಿಯ ತಂಡಗಳ ಮುಖಾಮುಖಿಗೆ ಸಾಕ್ಷಿಯಾಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರಲಿದ್ದಾರೆ. ನೀವು ಕೂಡ ಹೊರಟಿದ್ದರೇ ಈ ಪ್ರಮುಖ ಅಂಶಗಳನ್ನು ಒಮ್ಮೆ ಗಮನಿಸಿ.
ಏಪ್ರಿಲ್. 02ರ ಭಾನುವಾರ ಸಂಜೆ 7.30 ಗಂಟೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣೆಸಲಿವೆ. ಎರಡೂ ತಂಡಗಳಿಗೂ ಇದು ಐಪಿಎಲ್ 2023ರ ಮೊದಲ ಪಂದ್ಯವಾಗಿರುವುದರಿಂದ ಗೆಲುವಿನ ಮೂಲಕ ಪ್ರಾರಂಭಿಸುವ ಯೋಜನೆಯಲ್ಲಿವೆ. ತವರು ನೆಲದಲ್ಲಿ ನಡೆಯುತ್ತಿರುವ ಪಂದ್ಯವನ್ನು ಗೆಲ್ಲುವ ಉತ್ಸಾಹದಲ್ಲಿ ಆರ್‌ಸಿಬಿಯಿದೆ.

ಒಂದು ವಾರದಿಂದ ಚಿನ್ನಸ್ವಾಮಿ ಅಂಗಳದಲ್ಲಿ ಆರ್‌ಸಿಬಿ ಅಭ್ಯಾಸ ಮಾಡಿದ್ದು, ಮೊದಲನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಪೈಪೋಟಿಯನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದು, ಆರ್‌ಸಿಬಿ ತಂಡವನ್ನು ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದಾರೆ. ಈ ಆಟವನ್ನು ಕಣ್ತುಂಬಿಕೊಳ್ಳಲು ಹೊರಡುವವರಿಗೆ ಕೆಲವು ಪ್ರಮುಖ ಅಂಶಗಳನ್ನು ಗಮನಸಲದಲಿ ಇಟ್ಟುಕೊಳ್ಳಬೇಕು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಟ್ರಾಫಿಕ್ ಸಮಸ್ಯೆಯಾಗದಂತೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಘೋಷಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ಐಪಿಎಲ್ 2023ರ ಮೊದಲ ಪಂದ್ಯವಾಗಿದ್ದು, ಕರ್ನಾಟಕದ ರಾಜಧಾನಿಯ ಹೃದಯಭಾಗದಲ್ಲಿರುವ ಕ್ರೀಡಾಂಗಣಕ್ಕೆ ಭಾರಿ ಪ್ರೇಕ್ಷಕರು ಆಗಮಿಸುವ ನಿರೀಕ್ಷೆಯಿದೆ.
*ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳುವ ಮೊದಲು ತಿಳಿದುಕೊಳ್ಳಬೇಕಾದ ಐದು ಅಂಶಗಳು*
1. ಬೆಂಗಳೂರು ಸಂಚಾರ ಪೊಲೀಸರು ಈಗಾಗಲೇ ಕ್ರೀಡಾಂಗಣಕ್ಕೆ ತೆರಳಲು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವಂತೆ ಕ್ರಿಕೆಟ್ ಪ್ರೇಮಿಗಳಲ್ಲಿ ಮನವಿ ಮಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸುವಲ್ಲಿ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಲಭ್ಯತೆಗೆ ಅನುಗುಣವಾಗಿ ಕೆಲವು ಪ್ರದೇಶಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

2. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪ್ರೇಕ್ಷಕರಿಗೆ ಪಾರ್ಕಿಂಗ್ ಲಭ್ಯವಿರುತ್ತದೆ. ಇದರ ಜೊತೆಗೆ ಐಪಿಎಲ್ ವೀಕ್ಷಕರು ತಮ್ಮ ವಾಹನಗಳನ್ನು ಕಿಂಗ್ಸ್ ರಸ್ತೆ, ಯುಬಿ ಸಿಟಿ ಪಾರ್ಕಿಂಗ್, ಬಿಎಂಟಿಸಿ ಟಿಟಿಎಂಸಿ ಶಿವಾಜಿನಗರ 1 ನೇ ಮಹಡಿ ಮತ್ತು ಹಳೆಯ ಕೆಜಿಐಡಿ ಕಟ್ಟಡ, ಕಂಠೀರವ ಸ್ಟೇಡಿಯಂ ಮತ್ತು ಬಿಆರ್‌ವಿ ಮೈದಾನದಲ್ಲಿ ನಿಲ್ಲಿಸಬಹುದು.
3. ಪಂದ್ಯದ ದಿನಗಳಲ್ಲಿ ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿಬಾ ರಸ್ತೆ, ಅಂಬೇಡ್ಕರ್ ಬೀದಿ ರಸ್ತೆ, ಟ್ರಿನಿಟಿ ಜಂಕ್ಷನ್ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಟ್ಲ ಮಲ್ಯ ರಸ್ತೆ, ನೃಪತುಂಗ ರಸ್ತೆ ಹಾಗೂ ವಾಹನ ನಿಲುಗಡೆಗೆ ಸಂಚಾರ ಇಲಾಖೆ ನಿಷೇಧ ಹೇರಿದೆ.
4. ಸ್ಟೇಡಿಯಂನಲ್ಲಿ ಆಟವನ್ನು ಆನಂದಿಸುವ ಐಪಿಎಲ್ ಅಭಿಮಾನಿಗಳಿಗೆ ಅನುಕೂಲವಾಗುವಂತೆ ನಮ್ಮ ಮೆಟ್ರೋ ಸೇವೆಗಳನ್ನು ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮೆಟ್ರೋ ಬಳಕೆದಾರರು ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಲುಪಲು ಎಂಜಿ ರೋಡ್ ನಿಲ್ದಾಣ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಇಳಿಯಬಹುದು. ನೂತನವಾಗಿ ಆರಂಭವಾಗಿರುವ ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಮಾರ್ಗದ ಸೇವೆಗಳನ್ನು ವಿಸ್ತರಿಸಲಾಗಿಲ್ಲ.
5. ಪಂದ್ಯದ ದಿನಗಳಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಸ್ ನಿಲ್ದಾಣದಿಂದ ಬೆಂಗಳೂರಿನ ಎಲ್ಲಾ ಪ್ರಮುಖ ಸ್ಥಳಗಳಿಗೆ ಪಂದ್ಯದ ನಂತರದ ವಿಶೇಷ ಬಸ್‌ಗಳನ್ನು ಓಡಿಸುವುದಾಗಿ ಬಿಎಂಟಿಸಿ ಪ್ರಕಟಿಸಿದೆ. ಏಪ್ರಿಲ್ 2 ರಿಂದ ಮೇ 21 ರ ನಡುವೆ ನಗರದಲ್ಲಿ ಆರ್‌ಸಿಬಿ ತಂಡದ ಪಂದ್ಯಗಳಿರುವ ದಿನಗಳಲ್ಲಿ ವಿಶೇಷವಾಗಿ ರಾತ್ರಿಯಲ್ಲಿ ಸುಮಾರು 25 ಹೆಚ್ಚುವರಿ ಬಸ್‌ಗಳು ಕ್ರೀಡಾಂಗಣಕ್ಕೆ ಮತ್ತು ಹೊರಗೆ ಸಂಚರಿಸಲಿವೆ.
ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಬಿಎಂಟಿಸಿ ಬಸ್‌ಗಳನ್ನು ನಿಯೋಜಿಸಲಾಗುತ್ತದೆ. ರಾತ್ರಿ 11 ಗಂಟೆಯ ನಂತರ ನಿಗದಿಪಡಿಸಲಾದ ಬಸ್ ಟ್ರಿಪ್‌ಗಳಿಗೆ, ರಾತ್ರಿಯ ಸೇವಾ ದರಗಳ ಆಧಾರದ ಮೇಲೆ ಟಿಕೆಟ್‌ಗಳಿಗೆ ಸಾಮಾನ್ಯ ದರಕ್ಕಿಂತ ಒಂದೂವರೆ ಪಟ್ಟು ದರವನ್ನು ನಿಗದಿಪಡಿಸಲಾಗುವುದು ಎಂದು ಹಿರಿಯ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
RCB Yash Dayal: ಐಪಿಎಲ್ 2026ರ ಸೀಸನ್ನಿಂದ ಸ್ಟಾರ್ ವೇಗಿ ಯಶ್ ದಯಾಳ್ ಔಟ್; ಆರ್‌ಸಿಬಿ ಅಧಿಕೃತ ಮಾಹಿತಿ -
IPL 2026: ಆರ್‌ಸಿಬಿ-ಎಸ್ಆರ್ಎಚ್ ಪಂದ್ಯದ ಟಿಕೆಟ್ ಮಾರಾಟ ಶುರು; ಇಲ್ಲಿವೆ ಬುಕಿಂಗ್ ಮಾಡುವ ವಿಧಾನಗಳು -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್‌ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ಐಪಿಎಲ್ನಲ್ಲಿ ಯಾರೂ ಕೊಳ್ಳದಿದ್ದರೂ ಅಯೋಧ್ಯೆಯಲ್ಲಿ ಅಬ್ಬರಿಸಿದ ಆರ್‌ಸಿಬಿ ಮಾಜಿ ಆಟಗಾರ; 195 ರನ್ ಚಚ್ಚಿದ ಸ್ವಸ್ತಿಕ್ ಚಿಕಾರ -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ











Click it and Unblock the Notifications