Apple Iphone: ತೊಡಕು ನಿವಾರಣೆ, ಬೆಂಗಳೂರಿನಲ್ಲಿ ಫಾಕ್ಸ್‌ಕಾನ್‌ಗೆ 300 ಎಕರೆ ಜಾಗ

ಬೆಂಗಳೂರು, ಜುಲೈ 14: ಬೆಂಗಳೂರಿನಲ್ಲಿ ಐಫೋನ್ ತಯಾರಿಸುವ ಬಹುರಾಷ್ಟ್ರೀಯ ಫಾಕ್ಸ್ ಕಾನ್ (foxconn) ಕಂಪನಿಗೆ 300 ಎಕರೆ ಭೂಮಿ ಹಸ್ತಾಂತರಿಸುವ ಸಂಬಂಧ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಲಾಗಿದೆ. ಶೀಘ್ರವೇ ಕಂಪನಿಗೆ ಜಾಗ ಬಿಟ್ಟುಕೊಡಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಶುಕ್ರವಾರ ವಿಧಾನಸಭೆಗೆ ತಿಳಿಸಿದರು.

ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರು ಕೇಳಿದ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿ ಮಾತನಾಡಿದರು. ಫಾಕ್ಸ್ ಕಾನ್ ಕಂಪನಿಗೆ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಹೋಬಳಿಗೆ ಸೇರಿದ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ITIR) ದಲ್ಲಿ 300 ಎಕರೆ ಜಾಗ ಕೊಡಲಾಗುತ್ತದೆ. ಕಂಪನಿ ಸುಮಾರು 8,500 ಕೋಟಿ ರೂ. ಹೂಡಿಕೆ ಮಾಡುತ್ತಿದೆ.

Bangalore Iphone manufacturing unit

ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿ ಐಫೋನ್ ತಯಾರಿಕಾ ಘಟಕ ಸ್ಥಾಪಿಸಲಿದೆ. ಭೂಮಿ ಹಸ್ತಾಂತರವಾಗುತ್ತಿದ್ದಂತೆ ಕಂಪನಿಯು ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ನಿರೀಕ್ಷೆ ಪ್ರಕಾರ ಮುಂದಿನ ವರ್ಷ ಉತ್ಪಾದನೆ ಕೂಡ ಆರಂಭಿಸಲಿದೆ. 50 ಸಾವಿರ ಜನರಿಗೆ ಉದ್ಯೋಗ ದೊರಕಿಸುವ ಈ ಯೋಜನೆಯ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಿದೆ ಎಂದು ಸಚಿವರು ವಿವರಿಸಿದರು.

1,450ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ 3 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇವು ಸುಮಾರು 110 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, 1,450ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಹೇಳಿದರು.

Bangalore Iphone manufacturing unit

ಕೈಗಾರಿಕಾ ನೀತಿ (2020-25), ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ (2022-27) ಮತ್ತು ವಿದ್ಯುತ್‌ ಚಾಲಿತ ವಾಹನ ಹಾಗೂಇಂಧನ ಸಂಗ್ರಹಣೆ ನೀತಿ (2017)ಯಡಿ ನಿಗದಿಗೊಳಿಸಿರುವ ಉತ್ತೇಜಕ ಕ್ರಮಗಳು ಈ ವಲಯದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಲು ಪೂರಕವಾಗಿವೆ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

ದೇವನಹಳ್ಳಿಯ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಐಫೋನ್ ಉತ್ಪಾದನಾ ಘಟಕ ಸ್ಥಾಪನೆ ಕಾರ್ಯಯೋಜನೆಗಾಗಿ 300 ಎಕರೆ ಜಾಗವನ್ನು ಗುರುತಿಸಲಾಗಿತ್ತು. 2024ರ ಏಪ್ರಿಲ್ 1ರ ವೇಳೆಗೆ ಇಲ್ಲಿ ತಯಾರಿಕೆ ಶುರು ಮಾಡುವ ಗುರಿ ಫಾಕ್ಸ್‌ಕಾನ್ ಹೊಂದಿದೆ. ಇದೆಲ್ಲ ಪರಿಗಣಿಸಿ ಜುಲೈ 1ರೊಳಗೆ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು ಎಂದು ಈ ಹಿಂದೆ ಸಚಿವರು ತಿಳಿಸಿದ್ದರು. ಅದರಂತೆ ನಿರೀಕ್ಷೆಗಿಂತ ತುಸು ತಡವಾಗಿ ಜಾಗ ಬಿಟ್ಟುಕೊಡಲು ಸರ್ಕಾರ ಸಜ್ಜಾಗುತ್ತಿದೆ.

ಆ್ಯಪಲ್ ಕಂಪನಿಯು ವ್ಯವಹಾರ ಮತ್ತಷ್ಟು ವಿಸ್ತರಿಸುವ ಭಾಗವಾಗಿಯೇ ಬೆಂಗಳೂರಿನಲ್ಲಿ ಅದರ ಘಟಕ ಮುಂದಿನ ವರ್ಷದ ತಲೆ ಎತ್ತಲಿದೆ. ಸಾವಿರಾರು ಕೋಟಿ ಹಣವನ್ನು ಬಂಡವಾಳವಾಗಿ ಬೆಂಗಳೂರಿನಲ್ಲಿ ಹೂಡುವ ಮೂಲಕ ರಾಜಧಾನಿಯಲ್ಲಿ ಐಫೋನ್ ಸಾಮ್ರಾಜ್ಯ ವಿಸ್ತರಿಸುತ್ತಿದೆ.

ಟೈಗಾ ದೇಶದ ಇನ್ನೊಂದು ನಗರದಲ್ಲಿ ಐಫೋನ್ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸುತ್ತಿದೆ. ಆ್ಯಪಲ್ ಇಂಕ್ ಪಾಲುದಾರ ಫಾಕ್ಸ್​ಕಾನ್ ಟೆಕ್ನಾಲಜಿ ಗ್ರೂಪ್ ಬೆಂಗಳೂರು ವಿಮಾನ ನಿಲ್ದಾಣದ ಬಳಿ ದೇವನಹಳ್ಳಿಯಲ್ಲಿ 303 ಕೋಟಿ ರೂ.ಗೆ ಭೂಮಿ ಖರೀದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+