ಪ್ರಾಮಾಣಿಕತೆ ತೋರಿದ ದೇವನಹಳ್ಳಿ ಏರ್‌ಪೋರ್ಟ್ ಸಿಐಎಸ್ಎಫ್ ಸಿಬ್ಬಂದಿ!
ಬೆಂಗಳೂರು, ಫೆ. 14: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಗ್ ಆತಂಕ ಸೃಷ್ಟಿಸಿತ್ತು. ವ್ಯಕ್ತಿಯೊಬ್ಬರು ಬಿಟ್ಟು ಹೋಗಿದ್ದ ಹಣವಿದ್ದ ಬ್ಯಾಗ್ ಅನ್ನು ಪರಿಶೀಲಿಸಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅದನ್ನು ಸಂಬಂಧಪಟ್ಟ ವ್ಯಕ್ತಿಗೆ ತಲುಪಿಸಿ ತೋರಿದ ಪ್ರಾಮಾಣಿಕತೆ ತೋರಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಘಟನೆ: ಎಚ್‌ಎಎಲ್ ಉದ್ಯೋಗಿ ವೇಣುಗೋಪಾಲ್ ಎಂಬಾತ ತಿರುವನಂತಪುರದಿಂದ ಬೆಂಗಳೂರಿಗೆ ಬಂದಿದ್ದರು. ಶೌಚಾಲಯಕ್ಕೆ ಹೋಗಿ ಬರುವ ಬರದಲ್ಲಿ ಒಂದೂವರೆ ಲಕ್ಷ ರೂ. ಹಣವಿದ್ದ ಬ್ಯಾಗ್ ಅನ್ನು ಬಿಟ್ಟು ತೆರಳಿದ್ದಾರೆ. ಬ್ಯಾಗ್ ನೋಡಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಆತಂಕ ವ್ಯಕ್ತ ಪಡಿಸಿತ್ತು. ಬಾಂಬ್ ನಿಷ್ಕ್ರಿಯ ದಳದೊಂದಿಗೆ ಬ್ಯಾಗ್ ತಪಾಸಣೆ ನಡೆಸಿದ ವೇಳೆ, 1.40 ಲಕ್ಷ ರೂ. ನಗದು ಹಣ, ಎಟಿಎಂ ಕಾರ್ಡ್ ಇರುವುದು ಬೆಳಕಿಗೆ ಬಂದಿತ್ತು. ಬ್ಯಾಗಿನಲ್ಲಿ ಸಿಕ್ಕಿದ ವಿಸಿಟಿಂಗ್ ಕಾರ್ಡ್ ಮಾಹಿತಿ ಆಧರಿಸಿ ವ್ಯಕ್ತಿಗೆ ಕರೆ ಮಾಡಿ ಬ್ಯಾಗ್ ಅನ್ನು ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಎಫ್ ಕಾರ್ಯ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಆರಂಭದಲ್ಲಿ ಈ ಬ್ಯಾಗ್ ಭಾರೀ ಅಂತಕ ಹುಟ್ಟಿಸಿತ್ತು. ಬಾಂಬ್ ಇಟ್ಟಿರುವ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಮೊದಲು ತಪಾಸಣೆ ನಡೆಸಿದ್ದರು. ಆ ಬಳಿಕ ನಿಟ್ಟುಸಿರು ಬಿಟ್ಟರು. ಹೀಗಾಗಿ ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹಣವಿದ್ದ ಬ್ಯಾಗ್ ನ್ನು ಪ್ರಾಮಾಣಿಕವಾಗಿ ವ್ಯಕ್ತಿಗೆ ಹಿಂತಿರುಗಿಸಿದ ಸಿಐಎಸ್ಎಫ್ ಸಿಬ್ಬಂದಿಯಗೆ ಎಚ್‌ಎಎಲ್ ಉದ್ಯೋಗಿ ಕೊಂಡಾಡಿದ್ದಾರೆ.
ಬಾಣಸವಾಡಿ ಪೊಲೀಸರ ಕಾರ್ಯಾಚರಣೆ:
ತ್ರಿಪುರಾದಿಂದ ಬೆಂಗಳೂರಿಗೆ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ತ್ರಿಪುರ ಮೂಲದ ಕಮರುಲ್ ಇಸ್ಲಾಂ, ಶೋಹಿದ್ ಮಿಯಾ, ಖುರ್ಷಿದ್ ಮಿಯಾ ಬಂಧಿತರು. ತ್ರಿಪುರಾದಿಂದ ಬೆಂಗಳೂರಿಗೆ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ಆರು ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ನೆಲಮಂಗಲದಲ್ಲಿಅಪಘಾತ, ಬೈಕ್ ಸವಾರ ಸಾವು:
ನೆಲಮಂಗಲದಲ್ಲಿ ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಾವಾರ ಸಾವನ್ನಪ್ಪಿದ್ದಾರೆ. ತರಬನಹಳ್ಳಿ ನಿವಾಸಿ ನಾಗೇಂದ್ರ ಪ್ರಸಾದ್ (26) ಮೃತಪಟ್ಟವರು. ನೆಲಮಂಗಲ ತಾಲೂಕಿನ ಆದ ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಾಬಸ್ ಪೇಟೆಯ ಬಾಲಾಂಬಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ತ್ಯಾಮಗುಂಡ್ಲು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.












Click it and Unblock the Notifications