2017ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಒಂದು ಸಂಜೆ
ಬೆಂಗಳೂರು, ನವೆಂಬರ್ 27 : ಸಮುದಾಯ-ಕಲಾಗಂಗೋತ್ರಿ ಸಂಸ್ಥೆಯು 2017 ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗ ಸಂಗಾತಿಗಳೊಂದಿಗೆ ಒಂದು ಸಂಜೆ ಎನ್ನುವ ಕಾರ್ಯಕ್ರಮವನ್ನು ನ.29ರಂದು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮುಖ್ಯಮಂತ್ರಿ ಚಂದ್ರು, ಸಿ.ಕೆ. ಗುಂಡಣ್ಣ, ಪ್ರೊ. ಸಿ. ಯತಿರಾತ್, ಪ್ರೊ. ಬಿ. ಗಂಗಾಧರಮೂರ್ತಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ. ಎಸ್.ಜಿ. ಸಿದ್ಧಲಿಂಗಯ್ಯ, ಡಾ. ವಸುಂಧರಾ ಭೂಪತಿ, ಜೆ. ಲೋಕೇಶ್, ಡಾ. ಬಿ.ವಿ. ರಾಜಾರಾಮ್, ಅಗ್ರಹಾರ ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ.

ಏನು- 2017ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಒಂದು ಸಂಜೆ
ಯಾವಾಗ-ನವೆಂಬರ್ 29ರ ಬುಧವಾರ
ಎಲ್ಲಿ- ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತು ಸಂಜೆ.6.30












Click it and Unblock the Notifications