ರೈತ ನಾಯಕ ರಾಕೇಶ್ ಟಿಕಾಯಿತ್‌ಗೆ ಮಸಿ - ಪೊಲೀಸರ ವೈಫಲ್ಯ..!
ಬೆಂಗಳೂರು, ಮೇ30: ಭಾರತೀಯ ಕಿಸಾನ್ ಯುನಿಯನ್ ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಗಾಂಧಿ ಭವನದಲ್ಲಿ ಕಪ್ಪು ಮಸಿಯನ್ನು ಬಳಿಯಲಾಗಿದೆ. ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಜೊತೆ ಪಾಲುನ್ನು ಹಂಚಿಕೊಂಡಿದ್ದಾರೆ ಅನ್ನೋ ಆರೋಪಕ್ಕೆ ಉತ್ತರಿಸಲು ರಾಕೇಶ್ ಟಿಕಾಯತ್ ಬಂದಿದ್ದರು. ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಜೆಡಿಎಸ್ ಕಾರ್ಯಕರ್ತರು ಮಸಿಯನ್ನು ಬಳಿದ ಪ್ರಕರಣದ ಬಿಸಿ ಹಾರಿರಲಿಲ್ಲ. ಇದರಿಂದಾಗಿ ರಾಕೇಶ್ ಟಿಕಾಯತ್ ಮಸಿ ಬಳಿಯುವ ವೇಳೆ ಸೂಕ್ತ ಭದ್ರತೆಯನ್ನು ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಭ್ರಷ್ಟಾಚಾರದ ಪಾಲುದಾರಿಕೆಯ ವಿಚಾರದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಮೇಲೂ ಆರೋಪ ಕೇಳಿ ಬರ್ತಿತ್ತು. ಇದಕ್ಕಾಗಿ ಸ್ಪಷ್ಟನೆಯನ್ನು ಕೊಡಲು ರಾಕೇಶ್ ಟಿಕಾಯಿತ್ ಮತ್ತು ಯದ್ಧವೀರ್ ಸಿಂಗ್ ಸೇರಿದಂತೆ ರೈತ ಮುಖಂಡರು ಸುದ್ದಿಗೋಷ್ಠಿಯನ್ನು ಪ್ರಾರಂಭಿಸಿದರು.
ಈ ವೇಳೆ ಏಕಾಏಕಿ ಮುನ್ನುಗ್ಗಿವರು ದೃಶ್ಯ ಮಾಧ್ಯಮದ ಬೈಕ್‌ನಿಂದ ಹಲ್ಲೆ ಮಾಡಿದರೇ ಮತ್ತೊಬ್ಬ ದುಷ್ಕರ್ಮಿ ಕಪ್ಪು ಇಂಕ್ ಅನ್ನು ಟಿಕಾತ್ ಮತ್ತು ಸಂಗಡಿಗರ ಮೇಲೆ ಎಸೆದಿದ್ದಾನೆ. ಇದನ್ನೇಲ್ಲಾ ಕಂಟ್ರೋಲ್ ಮಾಡಲು ಇದ್ದದ್ದು ಕೇವಲ ಇಬ್ಬರು ಪೊಲೀಸರು ಅಷ್ಟೇ.

ಸ್ಟೇಟ್ ಇಂಟಲಿಜೆನ್ಸ್ ವೈಫಲ್ಯ
ಇನ್ನು ರೈತ ನಾಯಕರು ಮಹಾನ್ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬ ಆರೋದ ಕೂಗು ಜೋರಾಗಿರುವಾಗ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸಿರಬೇಕಿತ್ತು. ರಾಷ್ಟ್ರ ಮಟ್ಟದ ರೈತನಾಯಕನೊಬ್ಬ ರಾಜ್ಯಕ್ಕೆ ಬರುವಾಗ ಇಂಟೆಲಿಜ್ಸ್ ಸೈಲೆಂಟಾಗಿ ಕೆಲಸವನ್ನು ಮಾಡಿ ಆಂತರಿಕ ವಿಚಾರದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕಿತ್ತು. ಆದರೆ ರಾಕೇಶ್ ಟಿಕಾಯತ್‌ಗೆ ಮಸಿ ಬಳಿಯುವ ವಿಚಾರ ಕಲೆಹಾಕುವಲ್ಲಿ ಸ್ಟೇಟ್ ಇಂಟಲಿಜೆನ್ಸ್ ಕೂಡ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.

16 ದಿನದಿಂದ ಖಾಲಿಯಿರುವ ಹುದ್ದೆ..
ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಎಂ. ಎನ್. ಅನುಚೇತ್‌ರನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಅವರ ಸ್ಥಾನಕ್ಕೆ ಈವೆರೆಗೂ ಯಾರನ್ನು ನೇಮಿಸಿಲ್ಲ. ರಾಜ್ಯದಲ್ಲಿ ಸಾಕಷ್ಟು ಅನುಭವವಿರುವ ಐಪಿಎಸ್ ಅಧಿಕಾರಿಗಳು ರಾಜ್ಯದಲ್ಲಿದ್ದರು ಕೇಂದ್ರ ವಿಭಾದವನ್ನು ಖಾಲಿ ಇಡಲಾಗಿದೆ. ಮೇ 16ಕ್ಕೆ ಅನುಚೇತ್‌ರನ್ನು ವರ್ಗಾಯಿಸಲಾಗಿತ್ತು. ವರ್ಗಾವಣೆ ನಡೆದ 15 ದಿನವಾದರು ಡಿಸಿಪಿಯನ್ನು ನೇಮಿಸದೇ ಅಪರಾಧ ವಿಭಾಗ ಡಿಸಿಪಿ ಶರಣಪ್ಪ ಅವರನ್ನು ಪ್ರಭಾರರನ್ನಾಗಿ ಸುಮ್ಮನಿರೋದು ರಾಜ್ಯ ಸರ್ಕಾರದ ಮೇಲೆ ಅನುಮಾನ ಮೂಡುವಂತೆ ಮಾಡ್ತಿದೆ. ಐಪಿಎಸ್ ವರ್ಗಾವಣೆಯಲ್ಲಿ ಸರ್ಕಾರ ದಂಧೆ ನಡೆಸಲು ಖಾಲಿ ಬಿಟ್ಟಿದ್ಯಾ ಎಂಬ ಅನುಮಾನ ಮೂಡಿದೆ. ಇನ್ನು ಕೇಂದ್ರ ವಿಭಾಗದ ಡಿಸಿಪಿ ಇದ್ದಿದ್ದರೇ ಸೂಕ್ತ ಭದ್ರತಾ ವ್ಯವಸ್ಥೆ ಮಾಡುತ್ತಿದ್ದರು ಎಂಬ ಮಾತಿದೆ.

ಸಿಸಿಟಿವಿ ಹಾಗೂ ಮೊಬೈಲ್ ವಿಶ್ಯೂವಲ್ಸ್‌ಗಳನ್ನು ವಶಕ್ಕೆ
ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದ ಪ್ರಕರಣದಲ್ಲಿ ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಹೇಳಿಕೆ ನೀಡಿದ್ದಾರೆ. "ರೈತರ ಆತ್ಮಾವಲೋಕನ ಹಾಗೂ ಸ್ಪಷ್ಟಿಕರಣ ಸಭೆ ಗಾಂಧಿಭವನದಲ್ಲಿ ಇತ್ತು. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುತ್ತಿದ್ದಾಗ, ಹಲ್ಲೆ ಮಾಡಿ ಮಸಿ ಬಳಿಯಲಾಗಿದೆ ಎಂದು ದೂರು ನೀಡಿದ್ದಾರೆ. ಈಗಾಗಲೇ ಮೂವರನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಲಾಗುತ್ತಿದೆ. ಪ್ರಾಥಮಿಕವಾಗಿ ಪತ್ರಿಕಾಗೋಷ್ಠಿ ಅಡ್ಡಪಡಿಸಲು ಮುಂದಾಗಿದ್ದಾರೆ. ಆದರೆ ಕಾರಣವೇನೆಂದು ವಿಚಾರಣೆ ಬಳಿಕ ತಿಳಿಯಲಿದೆ. ಅಲ್ಲಿ ಸೇರಿದ್ದವರು ಮತ್ತು ಮಸಿ ಬಳಿದವರ ಮಧ್ಯೆ ಗಲಾಟೆ ಆಗಿದೆ. Ipc 355, 354, 324 ,504 , 506,323,134 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸಿಸಿಟಿವಿ ಹಾಗೂ ಮೊಬೈಲ್ ವಿಶ್ಯೂವಲ್ಸ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುತ್ತಿದೆ,' ಎಂದು ತಿಳಿಸಿದರು.

ಮೋದಿ ಎಂದು ಕೂಗಿದ್ದರ ಹಿಂದೆ ಪಿತೂರಿ
ಮಸಿ ಬಳಿದ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಸಿ ಬಳಿಯುವದು ಹಲ್ಲೆ ಮಾಡುವುದನ್ನು ಖಂಡಿಸುತ್ತೇನೆ. ಭಾರತದ ಸಂವಿಧಾನದಲ್ಲಿ ಮಾತನಾಡಲು ಹಕ್ಕಿದೆ. ಮಸಿ ಬಳಿದವರು ಬಿಜೆಪಿ ಕಾರ್ಯಕತ್ತರಲ್ಲ. ಮೋದಿ ಎಂದು ಕೂಗಿದ ಹಿನ್ನೆಲೆಯಲ್ಲಿ ಯಾರದ್ದೋ ಪಿತೂರಿ ಇದೆ. ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.












Click it and Unblock the Notifications