ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಬ್ಬಂದಿ, ಕುಟುಂಬ ಸದಸ್ಯರಿಗೆ ಕೋವಿಡ್ ಕೇಂದ್ರ ತೆರೆದ ಇನ್ಫೋಸಿಸ್

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ತಮ್ಮ ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೋವಿಡ್ ಕೇರ್ ಕೇಂದ್ರ ತೆರೆದಿರುವುದಾಗಿ ಐಟಿ ಸಂಸ್ಥೆ ಇನ್ಫೋಸಿಸ್ ಶನಿವಾರ ಘೋಷಿಸಿದೆ.

ಮಣಿಪಾಲ್ ಆಸ್ಪತ್ರೆಯ ಸಹಯೋಗದೊಂದಿಗೆ ಕೋವಿಡ್ ಕೇಂದ್ರ ತೆರೆದಿದ್ದು, ಶನಿವಾರದಿಂದ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಕೊರೊನಾ ಸೋಂಕಿತ ಸಿಬ್ಬಂದಿಗೆ ಹಾಗೂ ಕೊರೊನಾ ಲಕ್ಷಣಗಳಿದ್ದು, ಮನೆಯಲ್ಲಿ ಐಸೊಲೇಷನ್‌ನಲ್ಲಿರಲು ವ್ಯವಸ್ಥೆ ಇಲ್ಲದಿರುವ ಸಿಬ್ಬಂದಿಗೆ ಹಾಗೂ ಅವರ ಕುಟುಂಬ ಸದಸ್ಯದವರಿಗೆ ನೆರವಾಗುವ ದೃಷ್ಟಿಯಿಂದ ಈ ಕಾರ್ಯ ಕೈಗೊಂಡಿರುವುದಾಗಿ ಸಂಸ್ಥೆ ಹೇಳಿಕೆ ನೀಡಿದೆ.

 2021ರಲ್ಲೂ ಇನ್ಫೋಸಿಸ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ! 2021ರಲ್ಲೂ ಇನ್ಫೋಸಿಸ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ!

ಇತರೆ ಆರೋಗ್ಯ ಸಮಸ್ಯೆಗಳಿಲ್ಲದ, 18 ರಿಂದ 60 ವರ್ಷದವರಿಗೆ ಈ ಕೋವಿಡ್ ಕೇರ್ ಕೇಂದ್ರ ಲಭ್ಯವಿರುವುದಾಗಿ ಸಂಸ್ಥೆ ತಿಳಿಸಿದೆ. ಮಣಿಪಾಲ್ ಆಸ್ಪತ್ರೆ ಸಹಯೋಗದೊಂದಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.

Infosys Opens COVID Care Centre For Employees And Family Members

ವಸತಿ, ಆಹಾರ, ವೈದ್ಯರ ಸಲಹೆಗೆ ಕಂಪನಿಯೇ ಹಣ ನೀಡಲಿದೆ. ಆದರೆ ವೈದ್ಯಕೀಯ ಪರೀಕ್ಷೆ, ಔಷಧಿ ಹಣವನ್ನು ಸಿಬ್ಬಂದಿಯೇ ಭರಿಸಬೇಕಿದೆ. ತುರ್ತು ಪರಿಸ್ಥಿತಿಯಲ್ಲಿ ಆಮ್ಲಜನಕ ಒದಗಿಸಲಾಗುತ್ತದೆ. ಅವರ ಸ್ಥಿತಿಗತಿ ಆಧರಿಸಿ ಅವಶ್ಯಕತೆ ಇದ್ದರೆ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ದೊಮ್ಮಲೂರಿನ ಓಲ್ಡ್‌ ಏರ್‌ಪೋರ್ಟ್ ರಸ್ತೆಯ ಹೋಟೆಲ್ ರಾಯಲ್ ಆರ್ಕಿಡ್ ನಲ್ಲಿ ಕೇಂದ್ರ ತೆರೆದಿದೆ. ತಮ್ಮ ಸಂಸ್ಥೆಯ ಕ್ಯಾಂಪಸ್‌ನಲ್ಲಿ ನೌಕರರು ಹಾಗೂ ಅವರ ಕುಟುಂಬದವರಿಗಾಗಿ ಲಸಿಕಾ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ.

ಮನೆಯಿಂದಲೇ ಕೆಲಸ ಮಾಡಿ. ಮನೆಯೊಳಗೇ ಇದ್ದು, ಸುರಕ್ಷಿತವಾಗಿರಿ ಎಂದು ತಮ್ಮ ಸಿಬ್ಬಂದಿಗೆ ಸೂಚಿಸಿದೆ.

Recommended Video

ಕೊರೋನ ತಡಿಯೋಕೆ 14 ದಿನಗಳ ಕಾಲ Lock Down! | Oneindia Kannada

English summary
Infosys has opened covid care centre in bengaluru for its employees and their family members,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X