• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈಸ್ಕೂಲ್ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ತರಬೇತಿ ಕೊಟ್ಟ ಇನ್ಫೋಸಿಸ್

|

ಬೆಂಗಳೂರು, ಮೇ 08: ಇನ್ಫೋಸಿಸ್ ಬೆಂಗಳೂರು ಡೆವಲಪ್‍ಮೆಂಟ್ ಸೆಂಟರ್, ಹೈಸ್ಕೂಲ್ ಮಕ್ಕಳಿಗಾಗಿ ಆಯೋಜಿಸುವ ವಾರ್ಷಿಕ ಮಾಹಿತಿ ತಂತ್ರಜ್ಞಾನ ತರಬೇತಿ ಕಾರ್ಯಕ್ರಮ "ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್'ನ 22ನೇ ಆವೃತ್ತಿಯು ಇತ್ತೀಚೆಗೆ ಸಮಾಪ್ತಿಗೊಂಡಿದೆ.

ಬೆಂಗಳೂರಿನ ಸರಕಾರಿ ಹಾಗೂ ಖಾಸಗಿ ಶಾಲೆಗಳ 8 ಹಾಗೂ 9ನೇ ತರಗತಿಯ ಸುಮಾರು 60 ಮಕ್ಕಳು ಈ ಎರಡು ವಾರದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ಲೌಡ್, ಎಐ, ಬಿಗ್ ಡೇಟಾ, ಐಒಟಿ(IoT) ಬ್ಲಾಕ್‍ಚೈನ್‍ನಂಥ ಡಿಜಿಟಲ್ ತಂತ್ರಜ್ಞಾನದ ಕುರಿತು ಮಕ್ಕಳಿಗೆ ತರಬೇತಿ ನೀಡಲಾಯಿತು. ಬೆಂಗಳೂರು ಡಿಸಿಯಲ್ಲಿ ಈ ಬಾರಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಶಾಲೆಯ ಸಹಾಯಕ ಸಿಬ್ಬಂದಿಗೂ ಕಲಿಕೆಯ ಅವಕಾಶವನ್ನು ವಿಸ್ತರಿಸಲಾಗಿತ್ತು.

ತರಬೇತಿಗಾಗಿ ಸುಮಾರು 200ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಅವರಿಗೆ ಸಾಮಾನ್ಯ ವಿಜ್ಞಾನ ಹಾಗೂ ಗಣಿತ ಪರೀಕ್ಷೆಗಳನ್ನು ನಡೆಸುವ ಮೂಲಕ ಅಂತಿಮವಾಗಿ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ತಲಾ 10 ಮಕ್ಕಳ ಆರು ತಂಡವನ್ನು ರಚಿಸಿ ಅದಕ್ಕೊಬ್ಬ ಮಾರ್ಗದರ್ಶಕರನ್ನು ನೇಮಿಸಲಾಯಿತು.

ಇನ್ಫೋಸಿಸ್‍ನಲ್ಲಿ ತರಬೇತಿ ಪಡೆದು ಅನುಭವ ಹೊಂದಿರುವ ಹಾಗೂ ಇನ್ಫೋಸಿಸ್ ಉದ್ಯೋಗಿಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲು ಮಾರ್ಗದರ್ಶನ ನೀಡಿದರು. ಮೊದಲ ವಾರದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳನ್ನು ಅವಲೋಕಿಸಲಾಯಿತು. ಅದರ ಜತೆಗೆ ಸಂವಹನ ಹಾಗೂ ಕೌಶಲ ಅಭಿವೃದ್ಧಿ ಕುರಿತು ತಿಳಿಸಿಕೊಡಲಾಯಿತು.

ಎರಡನೇ ವಾರದಲ್ಲಿ ಮಾರ್ಗದರ್ಶಕರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಮಾಡಿಸಲಾಯಿತು. ಘಟಕದ ಪ್ರಕಾರ, ತರಬೇತಿಯನ್ನು ಹೆಚ್ಚು ಪ್ರಸಕ್ತವಾಗಿ ಮಾಡುವ ಉದ್ದೇಶದಿಂದ ಪ್ರತಿವರ್ಷವೂ ಪ್ರಾಜೆಕ್ಟ್ ನ ವಿಷಯವಸ್ತುವನ್ನು ಬದಲಾಯಿಸಲಾಗುತ್ತದೆ. ಈ ವರ್ಷದ ವಿಷಯ ವಸ್ತುಗಳ ಈ ರೀತಿ ಇವೆ.

ಕ್ರಿಯೇಟಿವ್ ಕಂಪ್ಯೂಟಿಂಗ್, ಐಒಟಿ, ಬ್ಲಾಕ್ ಚೈನ್, ಚಾಟ್‍ಬೊಟ್ಸ್. ಈ ಪಾಜೆಕ್ಟ್‍ಗಳನ್ನು ವಿದ್ಯಾರ್ಥಿಗಳಿಗೆ ನೀಡಿ ನೈಜ ಜೀವನದ ಸವಾಲುಗಳನ್ನು ತಮ್ಮ ಕಲಿಕೆಯನ್ನು ಅನ್ವಯಿಸುವ ಮೂಲಕ ಗುರುತಿಸುವಂತೆ ಮಾಡಲಾಯಿತು.

ಎರಡು ದಶಕಗಳಿಂದ ನಡೆಯುತ್ತಿರುವ ಸ್ಪಾರ್ಕ್ ಕ್ಯಾಚ್ ದೆಮ್ ಯಂಗ್, ಯುವ ಮನಸ್ಸುಗಳು ಹೊಸ ತಂತ್ರಜ್ಞಾನವನ್ನು ಹಾಗೂ ದೈನಂದಿನ ಬದುಕಿನಲ್ಲಿ ಹಾಗೂ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವ ಉದ್ದೇಶ ಹೊಂದಿದೆ.

ಅದೇ ರೀತಿ ಯುವ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ಹಾಗೂ ಮಾಹಿತಿ ತಂತ್ರಜ್ಞಾನದಲ್ಲಿ ಹೆಚ್ಚು ಕೌತುಕ ಹೊಂದುವಂತೆ ಮಾಡುವುದರ ಜತೆಗೆ ಅವರ ವೃತ್ತಿ ಬದುಕಿನ ದೃಢ ನಿರ್ಧಾರವಾಗಿ ಮಾಡುವುದನ್ನು ಬಯಸುತ್ತದೆ.

ಈ ತರಬೇತಿ ಕಾರ್ಯಕ್ರಮವನ್ನು ಮುಗಿಸುವ ವಿದ್ಯಾರ್ಥಿಗಳು ಇಂಟರ್ನೆಟ್, ಸಾಫ್ಟ್ ವೇರ್ ಅಭಿವೃದ್ಧಿ ಹಾಗೂ ವ್ಯವಹಾರದಲ್ಲಿ ಕಂಪ್ಯೂಟರ್ ನ ಬಳಕೆಯ ಕುರಿತು ಜ್ಞಾನವನ್ನು ಪಡೆದಿರುತ್ತಾರೆ.

English summary
Infosys Bangalore Development Center (DC) concluded the 22nd edition of ‘Spark Catch Them Young’, the annual training program in Information Technology for high school students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more