ಜೂನ್ 10ಕ್ಕೆ ಬೆಂಗಳೂರಲ್ಲಿ 'ಉತ್ಪಾದನಾ ಮಂಥನ': 58 ಕೈಗಾರಿಕಾ ದಿಗ್ಗಜರು, 10 ನವೋದ್ಯಮ ಭಾಗಿ..
ಬೆಂಗಳೂರು, ಜೂನ್ 07: ಕರ್ನಾಟಕವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಸ್ಪಷ್ಟ ಹಾಗೂ ಕಾರ್ಯಸಾಧ್ಯವಾದ ನೀಲನಕ್ಷೆ ರೂಪಿಸಬೇಕಿದೆ. ಈ ಉದ್ದೇಶದಿಂದ ನವೋದ್ಯಮಗಳು, ಉದ್ಯಮ ದಿಗ್ಗಜರು ಪಾಲ್ಗೊಂಡು ಚಿಂತನ ಮಂಥನ ನಡೆಸಲು ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಇದೇ ಜೂನ್ 10 ರಂದು ಮಂಗಳವಾರ 'ಉತ್ಪಾದನಾ ಮಂಥನ' ಆಯೋಜಿಸಲಾಗಿದೆ. ಕೈಗಾರಿಕೆ ವಯಲಕ್ಕೆ ಈ ಸಮಾವೇಶ ಮಹತ್ವದ್ದಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಶುಕ್ರವಾರ ಇಲ್ಲಿ ತಿಳಿಸಿದರು.
ಶುಕ್ರವಾರ ಉತ್ಪಾದನಾ ಮಂಥನ ಸಮಾವೇಶದ ಪೂರ್ವ ತಯಾರಿ ಸಭೆ ಬಳಿಕ ಅವರು ಮಾತನಾಡಿದರು. ನಗರದ ತಾಜ್ ವೆಸ್ಟ್‌ಎಂಡ್ ಹೊಟೇಲ್‌ನಲ್ಲಿ ದಿನಪೂರ್ತಿ ಈ ಸಮಾವೇಶ ನಡೆಯಲಿದೆ. ಇದರಲ್ಲಿ ಪ್ರಮುಖ ತಯಾರಿಕಾ ವಲಯಗಳು ಮತ್ತು ನವೋದ್ಯಮಗಳ ಸಿಇಒ ಹಾಗೂ ಇತರ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದೊಂದು ಕೇವಲ ಸಮಾವೇಶವಷ್ಟೇ ಆಗಿರದೇ ರಾಜ್ಯವನ್ನು ವಿಶ್ವಮಟ್ಟದಲ್ಲಿ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿರ್ಣಾಯಕ ಹೆಜ್ಜೆಯಾಗಿರಲಿದೆ ಎಂದು ಅವರು ಅಭಿಪ್ರಾಯ ಹೊರ ಹಾಕಿದರು.

ಕೈಗಾರಿಕೆ ಹಾಗೂ ನವೋದ್ಯಮಗಳ ಪರಿಣಿತರ ಸಲಹೆ ಪಡೆದು ಭವಿಷ್ಯಕ್ಕೆ ಆದ್ಯತೆ ನೀಡುವ, ನಾವೀನ್ಯತೆ ಆಧಾರಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವ ಪರಿಹಾರಗಳನ್ನು ಎಲ್ಲರ ಸಹಯೋಗದಲ್ಲಿ ಅಭಿವೃದ್ಧಿಪಡಿಸುವುದು ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಪ್ರತಿ ಕ್ಷೇತ್ರಗಳ ಅಭಿವೃದ್ಧೀಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಬಂಡವಾಳ ಹೂಡಿಕೆ ಅವಕಾಶಗಳ ಅನಾವರಣ, ಕೈಗಾರಿಕೆಗಳಿಗೆ ಹೆಚ್ಚು ಸೂಕ್ತವಾಗಿರುವ ನೀತಿಗಳನ್ನು ರೂಪಿಸಲು ಈ ಸಮಾವೇಶವು ರಾಜ್ಯ ಸರ್ಕಾರಕ್ಕೆ ನೆರವಾಗಲಿದೆ.
ರಫ್ತು ಹೆಚ್ಚಳ, ಉದ್ಯೋಗ ಅವಕಾಶ ಸೃಷ್ಟಿ ಗುರಿ:
ಇನ್ನೂ ತಯಾರಿಕೆ ಹಾಗೂ ರಫ್ತು ವಹಿವಾಟು ಹೆಚ್ಚಿಸುವುದು ಹಾಗೂ ರಾಜ್ಯದಾದ್ಯಂತ ಸುಸ್ಥಿರ ರೀತಿಯಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ರೋಬೊಟಿಕ್ಸ್,ವೈಮಾಂತರಿಕ್ಷ ಹಾಗೂ ರಕ್ಷಣೆ, ಎಲೆಕ್ಟ್ರಾನಿಕ್ಸ್ (ಬಿಡಿಭಾಗಗಳು) ಸೆಮಿಕಂಡಕ್ಟರ್ಸ್, ವಾಹನ ತಯಾರಿಕೆ ಅಥವಾ ಬಿಡಿಭಾಗಗಳು ಮತ್ತು ವಿದ್ಯುತ್‌ಚಾಲಿತ ವಾಹನಗಳು (ಇವಿ), ಭಾರಿ ಯಂತ್ರೋಪಕರಣ- ಮಷಿನ್‌ಟೂಲ್ಸ್, ಜವಳಿ, ಗ್ರಾಹಕ ಉತ್ಪನ್ನಗಳು (ಎಫ್‌ಎಂಸಿಜಿ, ಪಾದರಕ್ಷೆ ಹಾಗೂ ಆಟಿಕೆ) ಒಳಗೊಂಡಿರುವ ಆರು ಪ್ರಮುಖ ತಯಾರಿಕಾ ವಲಯಗಳಲ್ಲಿನ ರಾಜ್ಯದ ಸಾಧನೆ ಮುನ್ನಡೆಸಲು ಕೈಗಾರಿಕೋದ್ಯಮಿಗಳು ದಿಕ್ಸೂಚಿ ನೀಡಲಿದ್ದಾರೆ ಎಂದರು.
ಸಮಾವೇಶವು ಉದ್ಯಮ ದಿಗ್ಗಜರ ಜೊತೆಗಿನ ವಿಚಾರ ಮಂಥನಕ್ಕೆ ಸಾಕ್ಷಿಯಾಗಲಿದೆ. ಕರ್ನಾಟಕಕ್ಕೆ ಹೂಡಿಕೆ ಆಕರ್ಷಣೆ ಹಾಗೂ ಆರು ಪ್ರಮುಖ ತಯಾರಿಕಾ ವಲಯಗಳಲ್ಲಿ ರಾಜ್ಯವು ಕ್ರಮಿಸಬೇಕಾದ ಅಭಿವೃದ್ಧಿ ಪಥಕ್ಕೆ ಮಾರ್ಗಸೂಚಿ ಇಲ್ಲಿ ಸಿಗಲಿದೆ. ಇಲ್ಲಿ ಬಂಡವಾಳ ಹೂಡಿಕೆಯ ಆಕರ್ಷಣೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ವಲಯವಾರು ನೀಲನಕ್ಷೆ ರೂಪಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಪ್ರಮುಖ 6 ತಯಾರಿಕಾ ವಲಯಗಳಲ್ಲಿ ಬಂಡವಾಳ ಹರಿವು ನಿರೀಕ್ಷೆ ಇದೆ.
58 ಕೈಗಾರಿಕೆಗಳು, 10 ನವೋದ್ಯಮ ಭಾಗಿ
ಪ್ರಮುಖ ಕಂಪನಿಗಳಾದ ಕಾಲಿನ್ಸ್ ಏರೊಸ್ಪೇಸ್, ಮಹೀಂದ್ರಾ ಏರೊಸ್ಪೇಸ್, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ಅಪ್ಲೈಡ್ ಮಟೇರಿಯಲ್ಸ್, ಏರ್ ಇಂಡಿಯಾ, ಬಿಐಎಲ್ ಸೇರಿದಂತೆ 58 ಕೈಗಾರಿಕೆಗಳು ಹಾಗೂ 10 ನವೋದ್ಯಮಗಳು ಸಮಾವೇಶದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ.
ಸಮಾವೇಶದ ಮುಖ್ಯ ಅತಿಥಿಗಳು ಯಾರು?
ಈ ಸಮಾವೇಶದಲ್ಲಿ ಏರ್ ಇಂಡಿಯಾದ ಪ್ರಾಜೆಕ್ಟ್ಸ್ ಮುಖ್ಯಸ್ಥ ಜಿತಿನ್ ಗುಲಾಟಿ, ಕಾಲಿನ್ಸ್ ಏರೋಸ್ಪೇಸ್-ನ ಆಪರೇಷನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿನು ಕೃಷ್ಣನ್‌ಕುಟ್ಟಿ, ಟಾಟಾ ಹಿಟಾಚಿ-ಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್, ಬೌನ್ಸ್-ನ ಸಹ-ಸಂಸ್ಥಾಪಕ ಅನಿಲ್ ಜಿ., ಮಹೀಂದ್ರಾ ಏರೋಸ್ಪೇಸ್ನ ಸಿಒಒ ಕಾರ್ತಿಕ್ ಕೃಷ್ಣಮೂರ್ತಿ, ಹಿಟಾಚಿ ಎನರ್ಜಿ-ಯ ಸಿಇಒ ವೇಣು ನುಗುರಿ, ಅಲ್ಫಾ ಡಿಸೈನ್ ಟೆಕ್ನಾಲಜೀಸ್ನ ಅಧ್ಯಕ್ಷ ಕರ್ನಲ್ ಎಚ್. ಎಸ್. ಶಂಕರ್, ಬಿಐಎಎಲ್-ನ ಸಿಇಒ ಹರಿ ಮಾರಾರ್, ಜಿಎಸ್‌ಎಸ್‌ಎಂ ಐಎಫ್‌ಬಿ-ಯ ಎಲೆಕ್ಟ್ರಾನಿಕ್ಸ್ ಮುಖ್ಯಸ್ಥ ಸುದಿಪ್ತೊ ಗುಪ್ತಾ.
ಟೊಯೋಟಾ-ದ ಹಿರಿಯ ಉಪಾಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ಬಿಇಎಲ್-ನ ಅಧ್ಯಕ್ಷ ಮನೋಜ್ ಜೈನ್, ಹೋಂಡಾ-ದ ಕಾರ್ಯಾಚರಣೆ ಮುಖ್ಯಸ್ಥ ಸುನಿಲ್ ಮಿತ್ತಲ್, ರಿವೇರ್-ನ ತಯಾರಿಕಾ ವಿಭಾಗದ ಮುಖ್ಯಸ್ಥೆ ಮಯೂರಿ ಮೊಹಿಡೇಕರ್, ವೋಲ್ವೊ-ದ ಸುಸ್ಥಿರತೆ ವ್ಯವಹಾರಗಳ ನಿರ್ದೇಶಕ ಸೋಹಂಜೀತ್ ರಾಂಧವಾ, ಗೋಕಲ್‌ದಾಸ್ ಎಕ್ಸ್‌ಪೋರ್ಟ್ಸ್‌ನ ಸಿಇಒ ಶಿವರಾಮಕೃಷ್ಣನ್ ಗಣಪತಿ ಮತ್ತು ಗೋದ್ರೇಜ್-ನ ತಯಾರಿಕಾ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಶುತೋಷ್ ಪರ್ಮಾರ್ ಅವರು ಒಳಗೊಂಡಂತೆ ಇತರ ಪ್ರಮುಖ ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications