Get Updates
Get notified of breaking news, exclusive insights, and must-see stories!

Indira Canteen: ಜ.26 ಗಣರಾಜ್ಯೋತ್ಸವದಿಂದ ಹೊಸ ರೂಪದಲ್ಲಿ 'ಕ್ಯಾಂಟೀನ್' ಆರಂಭ, 'ಮೆನು' ಬದಲಾವಣೆ

ಬೆಂಗಳೂರು, ಡಿಸೆಂಬರ್ 19: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ (Indira Canteen) ಗಳು ಅನುದಾನ ಸಿಗದೆ ಸೊರಗಿದ್ದವು. ಇದೀಗ ಅವೆಲ್ಲವುಗಳನ್ನು ದುರಸ್ತಿಗೊಳಿಸಿ ಮತ್ತೆ ಹೊಸ ರೂಪದಲ್ಲಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಹೊಸ ರೂಪ ಕೊಡುವ ಕೆಲಗಳೂ ಭರದಿಂದ ಸಾಗಿವೆ.

ಬೆಂಗಳೂರಿನಲ್ಲಿನ ಹಾಲಿ ಇಂದಿರಾ ಕ್ಯಾಂಟೀನ್ ಹಾಗೂ ಮೊಬೈಲ್ ಕ್ಯಾಂಟೀನ್ ಗಳು ಸಂಕಷ್ಟ ಅನುಭವಿಸುತ್ತಿದ್ದವು. ಒಟ್ಟು ಸುಮಾರು 200 ಕ್ಯಾಂಟಿನ್ ಗಳನ್ನು ಮುಂದಿನ ಜನವರಿ 26ರ ಗಣರಾಜ್ಯೋತ್ಸವದ ಒಳಗಾಗಿ ದುರಸ್ತಿಗೊಳಿಸಿ ಹೊಸ ರೂಪದಲ್ಲಿ ಮತ್ತು ಮೆನುವಿನಲ್ಲಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

Indira Canteen Start in New Form From Jan 26th Republic Day, With Menu Change, Details

ನಗರದಲ್ಲಿ 175 ಇಂದಿರಾ ಕ್ಯಾಂಟೀನ್ ಮತ್ತು 24 ಮೊಬೈಲ್ ಕ್ಯಾಂಟೀನ್ ಗಳನ್ನು ಸರ್ಕಾರದಿಂದ ದುರಸ್ತಿ ಕಾಣುತ್ತಿವೆ. ಈಗಿರುವ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಮುಂದಿನ ಸಂಕ್ರಾಂತಿಯಿಂದ (ಜನವರಿ 14) ಕ್ಯಾಂಟೀನ್‌ ನಲ್ಲಿ ಮುದ್ದೆ ನೀಡುವುದಾಗಿ ಈ ಹಿಂದೆ ಪಾಲಿಕೆ ತಿಳಿಸಿತ್ತು.

ಹೋಟೆಲ್‌ನಲ್ಲಿ ಸಿಗುವಂತೆ ಕ್ಯಾಂಟೀನ್‌ನಲ್ಲಿ ಆಹಾರ

ಇದೀಗ ಗಣರಾಜ್ಯೋತ್ಸವದಿಂದ ಹೊಸ ರೂಪದಲ್ಲಿ ಆರಂಭವಾಗಲಿರುವ ಇಂದಿರಾ ಕ್ಯಾಂಟೀನ್‌ನ ಮೆನುವಿನಲ್ಲಿ ತುಸು ಬದಲಾವಣೆ ಆಗಲಿದೆ. ಮುದ್ದೆ, ಚಪಾತಿ ಸೇರಿದಂತೆ ಸಾಮಾನ್ಯ ಹೋಟೆಲ್‌ಗಳಲ್ಲಿ ಸಿಗುವ ಆಹಾರ ಪದಾರ್ಥಗಳಂತೆ ವಿವಿಧ ಆಹಾರಗಳನ್ನು ನೀಡುವಂತೆ ತಿಳಿಸಲಾಗಿದೆ.

Indira Canteen Start in New Form From Jan 26th Republic Day, With Menu Change, Details

ಮುಂದಿನ ಜನವರಿ 26ರೊಳಗೆ ಎಲ್ಲವು ಸಿದ್ಧವಾಗುವಂತೆ ಬಿಬಿಎಂಪಿ ನೋಡಿಕೊಳ್ಳುತ್ತಿದೆ. ಹೀಗಾಗಿ ದುರಸ್ತಿ ಕಾರ್ಯವನ್ನು ಚುರುಕುಗೊಳಿಸಿದೆ. ಈವರೆಗೆ ಇದ್ದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುತ್ತಿದ್ದ ಗುತ್ತಿಗೆದಾರರ ಅವಧಿ ಮುಗಿದ ಹಿನ್ನೆಲೆಯಲ್ಲಿ ಹೊಸ ಗುತ್ತಿಗೆದಾರರ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲ ಎಂಟು ವಲಯಗಳ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಸಮರ್ಪಕವಾಗಿ ಹೊಸ ಮೆನುವಿನಂತೆ ಆಹಾರ ಪೂರೈಕೆಗೆ ಒಟ್ಟು ನಾಲ್ಕು ಪ್ಯಾಕೇಜ್ ರೀತಿಯಲ್ಲಿ ಟೆಂಡರ್ ಕರೆಯಲಾಗಿದೆ. ಒಬ್ಬರು ಗುತ್ತಿಗೆದಾರನಿಗೆ ತಲಾ ಎರಡು ವಲಯಗಳ ಕ್ಯಾಂಟೀನ್‌ ಗಳಿಗೆ ಆಹಾರ ಪೂರೈಕೆಯ ಜವಾಬ್ದಾರಿ ವಹಿಸಲಾಗುತ್ತದೆ.

KIA ನಲ್ಲಿ ಶೀಘ್ರ ಇಂದಿರಾ ಕ್ಯಾಂಟೀನ್ ಸ್ಥಾಪನೆ

ಮುಂದಿನ ದಿನಗಳಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಎರಡು ಇಂದಿರಾ ಕ್ಯಾಂಟೀನ್‌ಗಳು ಸ್ಥಾಪನೆಯಾಗುವ ಬಗ್ಗೆ ಸರ್ಕಾರ ಈಗಾಗಲೇ ಮುನ್ಸೂಚನೆ ನೀಡಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಹಾರ ಪದಾರ್ಥಗಳು ಸಿಗುತ್ತದೆಯಾದರೂ ಅಲ್ಲಿ ಬಹಳ ದುಬಾರಿ ಇರುತ್ತದೆ.

ಕಾರು, ಟ್ಯಾಕ್ಸಿ ಚಾಲಕರು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೆ ಒಂದೊತ್ತಿನ ಊಟಕ್ಕೆ ನೂರಾರು ರೂಪಾಯಿ ಖರ್ಚು ಮಾಡಲು ಆಗುವುದಿಲ್ಲ. ಈ ಕಾರಣದಿಂದ ಟ್ಯಾಕ್ಸಿ ಚಾಲಕರು ಸಂಘವು ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಮನವಿ ಮಾಡಿತ್ತು. ಇದಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ನಗರದಲ್ಲಿ ಹೊಸ ಕ್ಯಾಂಟೀನ್ ನಿರ್ಮಾಣ

ವಿಮಾನ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯಲು ಇರುವ ಅವಕಾಶ, ಸ್ಥಳ ಇನ್ನಿತರ ಅಂಶಗಳು ಕುರಿತು ಪರಿಶೀಲಿಸುತ್ತೇವೆ. ಈ ಕುರಿತು ಬಿಬಿಎಂಪಿಗೆ ಸೂಚನೆ ನೀಡುವುದಾಗಿ ಅವರು ತಿಳಿಸಿದ್ದಾರೆ. ಇದು ಸೇರಿದಂತೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಹೊಸ 50 ಇಂದಿರಾ ಕ್ಯಾಂಟೀನ್ ನಿರ್ಮಿಸಲು ಯೋಜನೆ ರೂಪಿಸಿದೆ. ಈಗಾಗಲೇ ಮಂಡಿಸಿರುವ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ನೂರು ಕೋಟಿ ರೂಪಾಯಿ ಅನುದಾನ ಹಂಚಿಕೆ ಮಾಡಿದೆ. ಅಲ್ಲದೇ ವಾರ್ಡಿಗೊಂದು ಇಂದಿರಾ ಕ್ಯಾಂಟೀನ್ ತೆರೆಯಬೇಕು ಎಂಬ ಚಿಂತನೆಯು ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+