ಡೆಲ್ಲಿಯಿಂದ ಬೆಂಗ್ಳೂರಿಗೆ 8 ಗಂಟೆ ತಡವಾಗಿ ಬಂದ ವಿಮಾನ-ಮುಂದಾಗಿದ್ದೇನು?-ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್, 29: ಸಾಮಾನ್ಯವಾಗಿ ಹಲವು ಅಡೆತಡಗಳಿಂದ ವಿಮಾನಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ತಲುಪಿರುವ ಉದಾಹರಣೆಗಳಿ ಇವೆ. ಅಲ್ಲದೆ ಇದೇ ವಿಚಾರವಾಗಿ ಪ್ರಯಾಣಿಕರು ಆಕ್ರೋಶಗೊಂಡಿರುವ ಘಟನೆಗಳು ನಡೆದಿವೆ. ಹಾಗೆಯೇ ಇದೀಗ ನವದೆಹಲಿಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನವೊಂದು 8 ಗಂಟೆಗಳ ಕಾಲ ವಿಳಂಬವಾಗಿ ಆಗಮಿಸಿದ್ದು, ವಿಮಾನಕ್ಕಾಗಿ 200 ಮಂದಿ ಪ್ರಯಾಣಿಕರು ಕಾದು ಕೋಪಗೊಂಡ ಘಟನೆ ನಡೆದಿದೆ.
ವಿಮಾನ ತಡವಾಗಿ ಬಂದಿದ್ದಷ್ಟೇ ಅಲ್ಲದೆ, ವಿಮಾನ ಹತ್ತಿದ ಬಳಿಕವೂ ಪ್ರಯಾಣಿಕರು 90 ನಿಮಿಷಗಳ ಕಾದು ಕುಳಿತಿದ್ದಾರೆ. ಈ ಬೆಳವಣಿಗೆಗೆ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರಯಾಣಿಕರು ಕೆಂಡಕಾರಿದ್ದಾರೆ. 6E 6622 ವಿಮಾನ ಬುಧವಾರ ದೆಹಲಿಯಿಂದ ರಾತ್ರಿ 7:10 ಕ್ಕೆ ಟೇಕ್ ಆಫ್ ಆಗಿ ರಾತ್ರಿ 9:50ಕ್ಕೆ ಬೆಂಗಳೂರು ತಲುಪಬೇಕಿತ್ತು. ಆದರೆ ಗುರುವಾರ ಬೆಳಗಿನ ಜಾವ 2:57ಕ್ಕೆ ಟೇಕಾಫ್ ಆಗಿ 5:45ಕ್ಕೆ ಬೆಂಗಳೂರಿಗೆ ಆಗಮಿಸಿರುವ ಘಟನೆ ನಡೆದಿದೆ.

ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹೆಬ್ಬಾಳ ನಿವಾಸಿ ವಂದನಾ ಮಾಥರೂ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದರು.ವಿ ಮಾನದಲ್ಲಿ ತಾವು ಎದುರಿಸಿದ ಪರಿಸ್ಥಿತಿಯನ್ನು ವಂದನಾ ಅವರು ವಿವರಿಸಿದ್ದು, ವಿಮಾನವು ರಾತ್ರಿ 8:15ಕ್ಕೆ ಹೊರಡುವ ಕೆಲವು ಗಂಟೆಗಳ ಮೊದಲು ನಮಗೆ ಸಂದೇಶ ಬಂದಿತ್ತು. ಆದರೆ 8 ಗಂಟೆಯಾದರೂ ವಿಮಾನದೊಳಗೆ ಹೋಗಿರಲಿಲ್ಲ ಎಂದರು.
ನಂತರ ಕೌಂಟರ್‌ನಲ್ಲಿ ಕೇಳಿದಾಗ ಅವರು ಇನ್ನು ಕೆಲವೇ ಸಮಯಗಲ್ಲಿ ವಿಮಾನ ಬರಲಿದೆ ಎಂದು ಹೇಳಿದ್ದರು. ರಾತ್ರಿ 9:30ಕ್ಕೆ ಮತ್ತೆ ಕೇಳಿದಾಗ ವಿಮಾನ ಜೈಪುರಕ್ಕೆ ಹೊರಟಿರುವುದಾಗಿ ತಿಳಿಸಲಾಯಿತು. 100 ಮಂದಿಯನ್ನು ನಿರ್ವಹಿಸಲು ಕೌಂಟರ್‌ನಲ್ಲಿ ಕೇವಲ ಒಬ್ಬ ಮಹಿಳಾ ಸಿಬ್ಬಂದಿ ಮಾತ್ರ ಇದ್ದರು. ಪದೇ ಪದೇ ಇನ್ನು ಕೆಲವೇ ನಿಮಿಷಗಳಲ್ಲಿ ಎಂದು ಹೇಳುತ್ತಲೇ ಇದ್ದರು. ಆದರೆ ಮಧ್ಯರಾತ್ರಿ 2:57ಕ್ಕೆ ವಿಮಾನ ಟೇಕ್ ಆಫ್ ಆಗಿದೆ.
ಕೆಲ ಕಾರ್ಯಾಚರಣೆಯ ಕಾರಣಗಳಿಂದಾಗಿ ಡಿಸೆಂಬರ್ 27ರಂದು ನವದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಈ ಇಂಡಿಗೋ ವಿಮಾನ ವಿಳಂಬವಾಗಿತ್ತು. ವಿಮಾನ ವಿಳಂಬವಾಗಿ ಆಗಮಿಸುವುದನ್ನು ಪ್ರಯಾಣಿಕರಿಗೆ ತಿಳಿಸಲಾಗಿತ್ತು. ಉಪಾಹಾರಗಳನ್ನು ನೀಡಲಾಗಿತ್ತು. ಇನ್ನು ಪ್ರಯಾಣಿಕರಿಗಾದ ಅನಾನುಕೂಲತೆ ಬಗ್ಗೆ ವಿಷಾದಿಸುತ್ತೇವೆ ಎಂದು ಇಂಡಿಗೋ ವಿಮಾನದ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications