ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ಮೈಸೂರು ಸ್ಪರ್ಧಿ ನಿಖಿಲ್ ದಾರುಣ ಸಾವು

|
Google Oneindia Kannada News

ಮೈಸೂರು,ಜು.14: ಬೆಂಗಳೂರಿನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಮೈಸೂರು ಬಾಕ್ಸರ್ ಸಾವಿಗೀಡಾಗಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಕಿಕ್ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ಯುವಕ‌ ನಿಖಿಲ್ (24) ನಿಧನ ಹೊಂದಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿ K1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಸ್ಪರ್ಧೆ ನಡೆದಿತ್ತು.

Indian MMA fighter Nikhil Suresh passed away after he sustained injuries during the fight at the K1 Kickboxing championship

K1 ಕಿಕ್ ಬಾಕ್ಸರ್ ಆರ್ಗನೈಸೇಷನ್ ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜಿಸಿತ್ತು. ರಿಂಗ್‌ನಲ್ಲಿ ಸೆಣೆಸಾಡುತ್ತಿದ್ದ ವೇಳೆ ಎದುರಾಳಿ ಏಟಿಗೆ ನಿಖಿಲ್ ಕುಸಿದು ಬಿದಿದ್ದರು .

Indian MMA fighter Nikhil Suresh passed away after he sustained injuries during the fight at the K1 Kickboxing championship


ಎದುರಾಳಿಯಿಂದ ತಲೆಗೆ ಹೊಡೆದ ಒಂದೇ ಏಟಿಗೆ ಬಾಕ್ಸಿಂಗ್ ರಿಂಗ್‌ನಲ್ಲಿ ಕೆಳಗೆ ಬಿದ್ದಿದ್ದ ಬಾಕ್ಸರ್‌ ನಿಖಿಲ್ ಅಸ್ವಸ್ತರಾಗಿದ್ದರು. ತಕ್ಷಣ ನಿಖಿಲ್ ಅವರನ್ನ ಬೆಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎರಡು ದಿನಗಳ ಕಾಲ‌ ಕೋಮಾದಲ್ಲಿದ್ದ ನಿಖಿಲ್ ಸಾವನ್ನಪ್ಪಿದ್ದಾರೆ. ನಿಖಿಲ್ ಕೆಳಗೆ ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು.

ಪೋಷಕರಿಂದ ದೂರು ದಾಖಲು:

ಬಾಕ್ಸರ್‌ ನಿಖಿಲ್‌ ಸಾವಿನ ಬಗ್ಗೆ ಅವರ ಪೋಷಕರು ಆಯೋಜಕರ ವಿರುದ್ಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಬೆಂಗಳೂರಿನ ಜ್ಞಾನಜ್ಯೋತಿ ನಗರದ ಪೈ ಇಂಟರ್‌ನ್ಯಾಷನಲ್‌ ಕಟ್ಟಡದಲ್ಲಿ ನಡೆದ ಸ್ಪರ್ಧೆಯಲ್ಲಿ ಗಾಯಗೊಂಡು ಪ್ರಜ್ಞಾಹೀನರಾಗಿರುತ್ತಾರೆ. ಆಯೋಜಕರು ಹಾಗೂ ಕೋಚ್‌ ಅವರ ನಿರ್ಲಕ್ಷದಿಂದಲೇ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಈ ಬಗ್ಗೆ ಆಯೋಜಕರನ್ನು ವಿಚಾರಿಸಿದಾಗ ಸ್ಪರ್ಧೆ ನಡೆಯುವ ರಿಂಗ್‌ನಲ್ಲಿ ನೆಲಕ್ಕೆ ಹಾಸಿದ್ದ ಸ್ಪಂಜ್‌ ತೆಳುವಾಗಿತ್ತು. ಈ ವೇಳೆ ನೆಲಕ್ಕೆ ಬಿದ್ದ ನಿಖಿಲ್‌ ತಲೆಗೆ ಪೆಟ್ಟಾಗಿತ್ತು. ಈ ವೇಳೆ ಪ್ಯಾರಮೆಡಿಕಲ್‌ ಸಿಬ್ಬಂದಿಯೂ ಅಲ್ಲಿ ಇರಲಿಲ್ಲ. ಐದನೇ ಮಹಡಿಯಲ್ಲಿ ಸ್ಪರ್ಧೆ ಇದ್ದು, ಪೆಟ್ಟಾದಾಗ ಸೆಕ್ಚರ್‌ ಇರಲಿಲ್ಲ, ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿರಲಿಲ್ಲ. ಆಯೋಜಕರು ನಿರ್ಲಕ್ಷ್ಯ ವಹಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆಯೋಜಕರು ಮಾಹಿತಿ ನೀಡದೆ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು ತಲೆ ಮರೆಸಿಕೊಂಡಿರುತ್ತಾರೆ. ಹಾಗಾಗಿ ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿಖಿಲ್ ತಂದೆ ಸುರೇಶ್ ಪೋಷಕರು ದೂರಿನಲ್ಲಿ ಮನವಿ ಮಾಡಿದ್ದಾರೆ.

English summary
Nikhil Suresh, a kickboxer from Mysuru allegedly sustained injury & collapsed while performing in the ring on July 10 has succumbed to injuries on Wednesday. State level championship was organised by K1 Kickboxing Association Karnataka in Kengeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X