20 ಕೋಟಿ ಕೊಟ್ಟು ನಾಯಿ ಖರೀದಿಸಿದ ಬೆಂಗಳೂರಿಗ, ಯಾಕಿಷ್ಟು ಬೆಲೆ ಗೊತ್ತಾ?

ಬೆಂಗಳೂರು, ಜನವರಿ 6: ನಾಯಿಗಳೆಂದರೆ ಬಹುತೇಕರಿಗೆ ಅಚ್ಚುಮೆಚ್ಚು. ಒಂದು ನಾಯಿ ಸಾಕಲು ಅದರ ಬೆಲೆ ಎಷ್ಟೆಂದು ಮೊದಲು ತಿಳಿಯಬೇಕು. ನಾವೆಲ್ಲಾ ಕೇಳಿರುವ ಹಾಗೆ ಒಂದು ನಾಯಿ ಬೆಲೆ ಎಷ್ಟಿರಬಹುದು. ಹೆಚ್ಚೆಂದರೆ 50,000. ಆದರೆ ಬೆಂಗಳೂರಿನ ವ್ಯಕ್ತಿಯೊಬ್ಬರು ಖರೀದಿಸಿರುವ ಈ ನಾಯಿ ಬೆಲೆ ಕೇಳಿದರೆ ನಿಮ್ಮ ತಲೆ ಒಮ್ಮೆ ಗಿರ್‌ ಎನ್ನದೆ ಇರದು.

ಹೌದು, ಕಡಬೊಮ್ ಕೆನ್ನೆಲ್ಸ್​ ಸಂಸ್ಥೆ ಮಾಲೀಕರಾದ ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಅಧ್ಯಕ್ಷ ಬೆಂಗಳೂರಿನ ಸತೀಶ್ ಅವರು ದುಬಾರಿ ನಾಯಿಗಳನ್ನು ಖರೀದಿಸುವ ಹವ್ಯಾಸ ಹೊಂದಿರುವವರು. ಈಗ ಅವರು ಖರೀದಿಸಿರುವ ನಾಯಿಯ ಬೆಲೆ ಬರೋಬ್ಬರಿ 20 ಕೋಟಿ ರೂಪಾಯಿ. ಹಾ ಹೌದು, ಇದು ಕಾಕೇಸಿಯನ್ ಷೆಪರ್ಡ್ ಜಾತಿಯ ನಾಯಿ. ಇವು ಬಹಳ ವಿಶ್ವಾಸ, ಧೈರ್ಯಶಾಲಿ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳು ಎಂದೇ ಹೆಸರುವಾಸಿ. ಅಲ್ಲದೆಸ ಇವು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿದ್ದು, 10-12 ವರ್ಷಗಳ ಕಾಲ ಬದುಕಬಲ್ಲವು.

ಸತೀಶ್ ಕಡಬೊಮ್ ಕೆನ್ನೆಲ್ಸ್​ ಸಂಸ್ಥೆಗೆ ಮಾಲೀಕರಾಗಿದ್ದಾರೆ. ಅವರು ಬರೋಬ್ಬರಿ ರೂ.20 ಕೋಟಿ ರೂಪಾಯಿ ಕೊಟ್ಟು ಕಾಕೇಸಿಯನ್ ಷೆಪರ್ಡ್ ಜಾತಿಯ ನಾಯಿಯೊಂದನ್ನು ಖರೀದಿಸಿದ್ದಾರೆ. ಅಮೇನಿಯಾ, ರಷ್ಯಾ, ಟರ್ಕಿ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಈ ಜಾತಿಯ ನಾಯಿಗಳು ಮಾತ್ರ ಲಭ್ಯವಿವೆ. ಆದರೆ ಭಾರತದಲ್ಲಿ ಈ ಜಾತಿಯ ನಾಯಿ ಕಾಣುವುದು ವಿರಳ.

Indian Dog Breeders Association President Satish Bought Caucasian Shepherd Dog Priced at Rs 20 cr

ಅಮೆರಿಕನ್ ಕೆನ್ನೆಲ್ ಕ್ಲಬ್‌ ನ ಪ್ರಕಾರ, ಈ ಕಾಕೇಸಿಯನ್ ಷೆಪರ್ಡ್ಸ್ ಹಸು ಹಾಗೂ ಇತರೆ ಸಾಕುಪ್ರಾಣಿಗಳಂತಹ ಜಾನುವಾರುಗಳನ್ನು ನರಿ, ಚಿರತೆಗಳಂತಹ ಇತರೆ ಪ್ರಾಣಿಗಳಿಂದ ರಕ್ಷಣೆ ಮಾಡಲು ಬಳಕೆ ಮಾಡುತ್ತಾರೆ ಎನ್ನತ್ತಾರೆ ಸತೀಶ್‌ ಅವರು. ಇತ್ತೀಚೆಗೆ ತಿರುವನಂತಪುರದಲ್ಲಿ ನಡೆದಂತಹ ಕೆನ್ನೆಲ್ ಕ್ಲಬ್‌ನ ಕಾರ್ಯಕ್ರಮ ಹಾಗೂ ಕ್ರೌನ್ ಕ್ಲಾಸ್ಸಿಕ್ ಡಾಗ್ ಶೋನಲ್ಲಿ ಭಾಗವಹಿಸಿದ್ದ ಅವರು, ಅತ್ಯುತ್ತಮ ತಳಿ ವರ್ಗದಡಿ 32 ಪದಕಗಳನ್ನು ಗೆದ್ದಿದ್ದಾರೆ.

ಈ ಹಿಂದೆ ಸತೀಶ್ ಅವರು 'ಕೋರಿಯನ್ ದೋಸ ಮಾಸ್ಟಿಫ್ಸ್' ಎಂಬ ಮತ್ತೊಂದು ಅಪರೂಪದ ತಳಿಯ ನಾಯಿಯನ್ನು ರೂ.1 ಕೋಟಿ ಕೊಟ್ಟು ಖರೀದಿಸಿದ್ದರು. ಈಗ 20 ಕೋಟಿ ಕೊಟ್ಟು ಕಾಕೇಸಿಯನ್ ಷೆಪರ್ಡ್ ಜಾತಿಯ ನಾಯಿ ಖರೀದಿಸಿದ್ದಾರೆ. ಕಕೇಶಿಯನ್ ಶೆಫರ್ಡ್ನ ಸರಾಸರಿ ಎತ್ತರವು 23-30 ಇಂಚುಗಳು ಮತ್ತು ಇದು 45 ರಿಂದ 77 ಕಿಲೋಗ್ರಾಂಗಳಷ್ಟು ತೂಗುತ್ತದೆ. ಅವರ ಜೀವಿತಾವಧಿ 10-12 ವರ್ಷಗಳ ನಡುವೆ ಇರುತ್ತದೆ.

Indian Dog Breeders Association President Satish Bought Caucasian Shepherd Dog Priced at Rs 20 cr

ಸತೀಶ್ ಅವರು 1 ಕೋಟಿ ರೂ.ಗೆ ಖರೀದಿಸಿದ ಕೊರಿಯನ್ ಡೋಸಾ ಮ್ಯಾಸ್ಟಿಫ್ಸ್, ರೂ. 10 ಕೋಟಿ ಮೌಲ್ಯದ ಟಿಬೆಟಿಯನ್ ಮಾಸ್ಟಿಫ್ ಮತ್ತು ರೂ. 8 ಕೋಟಿಗೆ ಅಲಾಸ್ಕನ್ ಮಲಾಮುಟ್ ಸೇರಿದಂತೆ ಹಲವಾರು ಇತರ ಪ್ರೀಮಿಯಂ ತಳಿ ನಾಯಿಗಳನ್ನು ಸಹ ಸಾಕಿದ್ದಾರೆ. ಕಡಬೊಮ್ ಹೇಡರ್ ಅವರನ್ನು ನಗರಕ್ಕೆ ಪರಿಚಯಿಸಲು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ "ಮೆಗಾ ಈವೆಂಟ್" ನಡೆಸಲು ಸತೀಶ್ ಯೋಜಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+