ಟಿ20 ವಿಶ್ವಕಪ್: ಗೆಲುವು ಸಂಭ್ರಮಿಸುವ ವೇಳೆ ವ್ಯಕ್ತಿಯೊಬ್ಬನ ಅನುಚಿತ ವರ್ತನೆ: ಇದು ವಿಕೃತಿ ಎಂದ ನೆಟ್ಟಿಗರು
ಬೆಂಗಳೂರು, ಜೂನ್ 30: ಭಾರತೀಯ ಬೌಲರ್ಸ್ ಸೇರಿದಂತೆ ಇಡಿ ಟಿಂ ಇಂಡಿಯಾ ಸದಸ್ಯರು ತೋರಿದ ಪ್ರತಿ ದಾಳಿಗೆ ಸೌಥ್ ಆಫ್ರಿಕಾ ಪಾಲಾಗುತ್ತಿದ್ದ 'ಟಿ20 ವಿಶ್ವಕಪ್' ಕ್ರಿಕೆಟಿಗ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತದ ಪಾಲಾಗಿದೆ. ದೇಶದ ಕ್ರಿಕೆಟ್ ಪ್ರೇಮಿಗಳು ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ವಿಮಾನದಲ್ಲೂ ಭಾರತದ ಗೆಲವನ್ನು ಸಂಭ್ರಮಿಸಲಾಯಿತು.
ಬರೋಬ್ಬರಿ ಹನ್ನೊಂದು ವರ್ಷಗಳ ಬಳಿಕ ಐಸಿಸಿ 'ಟಿ20 ವಿಶ್ವಕಪ್' ಭಾರತಕ್ಕೆ ಧಕ್ಕಿದೆ. ಇದರ ಗೆಲುವನ್ನು ವಿಮಾಣದಲ್ಲಿ ಸಂಭ್ರಮಿಸಿದ ವಿಡಿಯೋವೊಂದು ಹರಿದಾಡುತ್ತಿದೆ. ಈ ವೇಳೆ ವ್ಯಕ್ತಿಯೊಬ್ಬರು ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ಇದನ್ನು ವಿಕೃತಿ ಅಂತಲೂ ಕೆಲವರು ಹೇಳಿದ್ದಾರೆ.

ಭಾರತ ತಂಡ ವಿಶ್ವಕಪ್ ಗೆದ್ದ ಸುದ್ದಿಯನ್ನು ಸಂಚರಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರಿಗೆ ವಿಮಾನದ ಸಿಬ್ಬಂದಿ (ಪೈಲಟ್) ತಿಳಿಸಿದ್ದಾರೆ. ಇದಕ್ಕೆ ಎಲ್ಲ ಪ್ರಯಾಣಿಕರು ಇದೇ ವೇಳೆ ವ್ಯಕ್ತಿಯೊಬ್ಬ ಕೇಕೆ ಹಾಕಿ ಸಂಭ್ರಮಿಸಿದರು. ಖುಷಿ ಹಂಚಿಕೊಂಡರು.
ಈ ವೇಳೆ ವ್ಯಕ್ತಿಯೊಬ್ಬರು ಮಧ್ಯದ ಬೆರಳು ತೋರಿಸಿದ್ದಾರೆ. ಅದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಮೂಲಕ ಆ ವ್ಯಕ್ತಿ ವಿಕೃತಿ ಮೆರೆದಿದ್ದಾರೆ. ಕ್ರಮಕ್ಕೆ ಕೆಲವರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಡಿಯೋದಲ್ಲಿ ಏನಿದೆ?
ಭೂಮಿಯಿಂದ 30,000 ಅಡಿ ಎತ್ತರಲ್ಲಿ ಹಾರಾಡುತ್ತಿದ್ದ ವಿಮಾಣದಲ್ಲಿ ವಿಶ್ವಕಪ್ ಗೆಲವನ್ನು ಸಂಭ್ರಮಿಸಲಾಯಿತು. ಈ ವೇಳೆ ಕೈ ಮೇಲೆ ಎತ್ತಿ ಕೇಕೆ ಹೊಡೆದಿದ್ದಾರೆ. ಈ ವೇಳೆ ಕಂಪು ಬಣ್ಣದ ವ್ಯಕ್ತಿಯೊಬ್ಬರು ಇತರ ಪ್ರಯಾಣಿಕರಂತೆ ಕೇಕೆ ಹಾಕಿ ಮಧ್ಯದ ಬೆರಳು ತೋರಿಸಿದ್ದಾನೆ. ಇದು ಸರಿಯಲ್ಲ, ಆತ ಏಕೆ ಈರೀತಿ ಮಾಡಿದ್ದಾನೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಗೆಲವಿನ ಸಂಭ್ರಮದ ಮಧ್ಯ ವಿಕೃತಿ ಮೆರೆದಿದ್ದಾನೆ ಎಂದು ದೂರಲಾಗಿದೆ.
The exact moment at 30,000 feet the Captain announced we had won the World Cup. On cloud nine indeed! pic.twitter.com/9fLdsDUlRF
— Anand Ranganathan (@ARanganathan72) June 29, 2024
ಈ ವಿಡಿಯೋ ನೋಡಿದ ಹಲವರು ಆತನ ವರ್ತನೆಯನ್ನು ಖಂಡಿಸಿದ್ದಾರೆ. ಆತನ ವಿರುದ್ಧ ದೂರು ದಾಖಲಿಸಬೇಕು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಲವು ಆಗ್ರಹಿಸಿದ್ದಾರೆ.












Click it and Unblock the Notifications