Get Updates
Get notified of breaking news, exclusive insights, and must-see stories!

ಬೆಂಗಳೂರು ಸಮೀಪದ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಟರ್ಮಿನಲ್‌ ನಿರ್ಮಾಣ: ವೆಚ್ಚ, ಪ್ರಯೋಜನಗಳ ವಿವರ ಇಲ್ಲಿದೆ

India's Largest Railway Terminal: ರಾಜ್ಯದ ರೈಲ್ವೆ ವಿಭಾದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿಯಾಗುತ್ತಿದೆ. ಇದೀಗ ಕೆಂದ್ರ ಸರ್ಕಾರವು ಬೆಂಗಳೂರಿನ ರೈಲ್ವೆ ಮೂಲಸೌಕರ್ಯ ವೃದ್ಧಿಗೆ ಹೊಸ ವೇಗ ನೀಡಿದೆ. ನಗರದ ಪ್ರಮುಖ ರೈಲ್ವೆ ಯೋಜನೆಗಳಿಗೆ ಭಾರೀ ಮೊತ್ತದ ಅನುದಾನ ಘೋಷಿಸಲಾಗಿದೆ. ವಿಶೇಷವಾಗಿ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಟರ್ಮಿನಲ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೇಂದ್ರ ಸರ್ಕಾರವು ಬೆಂಗಳೂರಿನ ರೈಲ್ವೆ ಮೂಲಸೌಕರ್ಯ ವೃದ್ಧಿಗೆ ಹೊಸ ವೇಗ ನೀಡಿದೆ. ಯಲಹಂಕದಲ್ಲಿ ಬರೋಬ್ಬರಿ 5,754 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಟರ್ಮಿನಲ್ ನಿರ್ಮಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು 1,370 ಕೋಟಿ ರೂಪಾಯಿ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಯಶವಂತಪುರ ಮತ್ತು ಕ್ಯಾಂಟೋನ್ಮೆಂಟ್ ನಿಲ್ದಾಣಗಳ ಆಧುನೀಕರಣಕ್ಕೂ ನೂರಾರು ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.

India s Largest Railway Terminal to Come Up at Yelahanka Near Bengaluru Know Cost Key Benefits

ಪ್ರಮುಖ ಯೋಜನೆಗಳ ವಿವರ

* ಯಲಹಂಕದಲ್ಲಿ ರೈಲ್ವೆ ಮೆಗಾ ಟರ್ಮಿನಲ್‌ ನಿರ್ಮಾಣ
* ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ
* ಯಶವಂತಪುರ ಮತ್ತು ಬೆಂಗಳೂರು ಕ್ಯಾಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳ ಆಧುನೀಕರಣ

ಪ್ರಯೋಜನಗಳು

* ಯಲಹಂಕದಲ್ಲಿ ರೈಲ್ವೆ ಮೆಗಾ ಟರ್ಮಿನಲ್ ನಿರ್ಮಾಣದಿಂದ ರೈಲು ಸಂಚಾರದ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಉತ್ತರ ಬೆಂಗಳೂರಿನ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ದೊರೆಯಲಿದೆ.

* ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದ್ದು, ನಿಲ್ದಾಣದಲ್ಲಿ ಆಧುನಿಕ ಸೌಲಭ್ಯಗಳು, ಸುಧಾರಿತ ಪ್ರಯಾಣಿಕರ ಸೇವೆಗಳು ಹಾಗೂ ವ್ಯಾಪಾರ ವಲಯಗಳನ್ನು ಅಭಿವೃದ್ಧಿಪಡಿಸುವ ಇದರ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

* ಯಶವಂತಪುರ ಮತ್ತು ಬೆಂಗಳೂರು ಕ್ಯಾಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳ ಆಧುನೀಕರಣ ನಿರ್ಧರಿಸಲಾಗಿದೆ. ಈ ಯೋಜನೆಗಳು ಪೂರ್ಣಗೊಂಡ ಬಳಿಕ ಬೆಂಗಳೂರು ರೈಲ್ವೆ ಜಾಲ ಮತ್ತಷ್ಟು ಸಾಮರ್ಥ್ಯ ಹೆಚ್ಚಿಸಿಕೊಂಡು, ಪ್ರಯಾಣಿಕರಿಗೆ ಸುಧಾರಿತ ಸೇವೆಗಳನ್ನು ಒದಗಿಸಲಿದೆ. ಒಟ್ಟಾರೆ ಈ ಬಹು ಕೋಟಿ ಯೋಜನೆಗಳು ನಗರದಲ್ಲಿನ ರೈಲು ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿಗೆ ದಾರಿ ಆಗಲಿವೆ.

ಯಲಹಂಕದಲ್ಲೇ ಮೆಗಾ ಟರ್ಮಿನಲ್ ನಿರ್ಮಾಣ ಯಾಕೆ?

ಮಾಹಿತಿ ಪ್ರಕಾರ, ಮೆಗಾ ಕೋಚ್ ಟರ್ಮಿನಲ್ ಅನ್ನು ಮೊದಲು ದೇವನಹಳ್ಳಿಯಲ್ಲಿ ನಿರ್ಮಾಣ ಮಾಡುವ ಯೋಜನೆಯಿತ್ತು. ಆದರೆ, ಅದು ಬೆಂಗಳೂರಿಗೆ ದೂರ ಇದ್ದ, ಪ್ರಯಾಣಿಕರ ಸಂಚಾರ ಹಾಗೂ ಲಾಜಿಸ್ಟಿಕ್ಸ್‌ ದೃಷ್ಟಿಯಿಂದ ಸೂಕ್ತ ಅಲ್ಲವೆಂದು ನಿರ್ಧರಿಸಲಾಯಿತು. ಈ ಹಿನ್ನೆಲೆ ನಗರದ ರೈಲು ಜಾಲಕ್ಕೆ ಸುಲಭವಾಗಿ ಸಂಪರ್ಕ ಕಲ್ಪಿಸುವ ಯಲಹಂಕದಲ್ಲಿನ ರೈಲ್ ವೀಲ್ ಫ್ಯಾಕ್ಟರಿ ಸಮೀಪದ ಪ್ರದೇಶವನ್ನು ಪರ್ಯಾಯ ಸ್ಥಳವಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

ಮೇಗಾ ಟರ್ಮಿನಲ್ ನಿರ್ಮಾಣದ ಉದ್ದೇಶ ಏನು?

ಬೆಂಗಳೂರು ನಗರದಲ್ಲಿರುವ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಈಗಾಗಲೇ ಹೆಚ್ಚಿನ ಸಂಚಾರದ ಒತ್ತಡವಿದೆ. ಇದನ್ನು ತಗ್ಗಿಸುವ ದೃಷ್ಟಿಯಿಂದ ಯಲಹಂಕದ ಹೊಸ ಟರ್ಮಿನಲ್ ಅನ್ನು 16 ಪ್ಲಾಟ್‌ಫಾರ್ಮ್‌ಗಳು, 15 ಪಿಟ್ ಲೈನ್‌ಗಳು, 10 ಸ್ಟೇಬ್ಲಿಂಗ್ ಲೈನ್‌ಗಳೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಇದು ಐದು ಹಂತಗಳ ವಿನ್ಯಾಸ ಹೊಂದಿದ್ದು, ಪ್ರಯಾಣಿಕರ ಆಗಮನ, ನಿರ್ಗಮನವನ್ನು ವಿಮಾನ ನಿಲ್ದಾಣದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಇದರಿಂದ ದಟ್ಟಣೆ ಕಡಿಮೆ ಆಗುವುದಲ್ಲದೆ, ಸುರಕ್ಷತೆ ಹಾಗೂ ಕಾರ್ಯಕ್ಷಮತೆ ಹೆಚ್ಚಲಿದೆ. ಇದು ದೇಶದ ಮೊದಲ ಅತೀ ದೊಡ್ಡ ರೈಲು ಟರ್ಮಿನಲ್ ಆಗಿರಲಿದ್ದು, ಚೀನಾದ ಹ್ಯಾಂಗ್‌ಝೌ ನಿಲ್ದಾಣದಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗುತ್ತಿದೆ. ಯಲಹಂಕ ಟರ್ಮಿನಲ್ ಅನ್ನು ಕೋಗಿಲು ಕ್ರಾಸ್‌ನಲ್ಲಿ ಬರಲಿರುವ ಬ್ಲೂ ಲೈನ್ ಮೆಟ್ರೋ ಜಿತೆಗೆ ಸಂಯೋಜಿಸುವ ಯೋಜನೆಯಿದೆ. ಇದರಿಂದ ಪ್ರಯಾಣಿಕರಿಗೆ ಮೆಟ್ರೋ, ರೈಲು ಸಂಪರ್ಕ ಸುಲಭವಾಗವಾಗಲಿದೆ. ಯಲಹಂಕ - ದೊಡ್ಡಬಳ್ಳಾಪುರ ಹೆದ್ದಾರಿಯ ಮೂಲಕ ಮುಖ್ಯ ರಸ್ತೆ ಪ್ರವೇಶವನ್ನು ಕೂಡ ಕಲ್ಪಿಸಲಾಗುತ್ತಿದೆ ಎನ್ನುವ ಮಾಹಿತಿಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+