ಬಿಗ್ ಎಫ್ಎಂ ಪಟ್ ಪಟಾಕಿ ಶ್ರುತಿಗೆ ಪ್ರಶಸ್ತಿಗಳ ಸುರಿಮಳೆ

ಬೆಂಗಳೂರು, ಮೇ 28, 2018: ಭಾರತದ ಅತಿದೊಡ್ಡ ರೇಡಿಯೊ ಜಾಲಗಳಲ್ಲೊಂದಾದ ಬಿಗ್ ಎಫ್ ಎಂ, ಇತ್ತೀಚೆಗೆ ನಡೆದ ಇಂಡಿಯಾ ರೇಡಿಯೊ ಫೋರಂ 2018ರಲ್ಲಿ ಒಟ್ಟು ಎಂಟು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಇದರ ಜೊತೆಗೆ ಇದು ರೇಡಿಯೊ ಉದ್ಯಮದಲ್ಲಿ ಅತ್ಯುತ್ತಮ ವಿಷಯಗಳು ಮತ್ತು ಸೃಜನಶೀಲತೆಯನ್ನು ಗುರುತಿಸಿ, ಗೌರವಿಸುವ ಪ್ರತಿಷ್ಠಿತ ಪ್ರಶಸ್ತಿ ವೇದಿಕೆಯಲ್ಲಿ ಆರು ರನ್ನರ್ ಅಪ್ ಸ್ಥಾನಗಳನ್ನೂ ಪಡೆದುಕೊಂಡಿದೆ.

ಗೆದ್ದಿರುವ ಎಂಟು ಶೀರ್ಷಿಕೆಗಳಲ್ಲಿ 92.7 ಬಿಗ್ ಎಫ್ ಎಂ ಬೆಂಗಳೂರಿನ ಬಿಗ್ ಎಂಜೆ ಶೃತಿಯ ಬಿಗ್ ಕಾಫಿ ಕಾರ್ಯಕ್ರಮವು ಅತ್ಯುತ್ತಮ ರೇಡಿಯೊ ಕಾರ್ಯಕ್ರಮ - ಕನ್ನಡ ವರ್ಗದಲ್ಲಿ ಪ್ರಥಮ ಸ್ಥಾನ ಪಡೆಯಿತು ಮತ್ತು ಅವರಿಗೆ ಕನ್ನಡ ವರ್ಗದಲ್ಲಿ ವರ್ಷದ ಆರ್ ಜೆ ಯ ರನ್ನರ್ ಅಪ್ ಸ್ಥಾನವನ್ನೂ ನೀಡಲಾಯಿತು.

ಪ್ರಶಸ್ತಿ ಗೆದ್ದ ತನ್ನ ಅನುಭವದ ಬಗ್ಗೆ ಮಾತನಾಡುತ್ತ, ಬಿಗ್ ಎಂಜೆ ಶೃತಿ 'ಇದಕ್ಕಿಂತ ಉತ್ತಮವಾದ ಸಮಯವಿರಲಿಲ್ಲ. ನಾನು ಮೇ ತಿಂಗಳಲ್ಲಿ ನನ್ನ ಕೆಲಸದ ವಾರ್ಷಿಕೋತ್ಸವ, ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತೇನೆ ಮತ್ತು ಜೊತೆಗೆ ಈ ಮೇ ನಲ್ಲಿ ಎರಡು ಐ ಆರ್ ಎಫ್ ಗಳೂ ಕೂಡ. ನನ್ನ ಕಾರ್ಯಕ್ರಮವಾದ ಬಿಗ್ ಕಾಫಿ ವಿತ್ ಶೃತಿಗೆ ಬಂದ ಪ್ರಶಸ್ತಿ ಮತ್ತು ವರ್ಷದ ಆರ್ ಜೆ - ಕನ್ನಡ ವರ್ಗ ದಲ್ಲಿ ಪಡೆದ ರನ್ನರ್ ಅಪ್ ಸ್ಥಾನದಿಂದ ನನಗೆ ಬಹಳ ಹರ್ಷವಾಗಿದೆ, ಗೌರವವೆನಿಸಿದೆ' ಎಂದರು.

India Radio Forum : BIG MJ Pat Pataki Shruti wins Best Radio Programme

ಇಂಡಿಯಾ ರೇಡಿಯೊ ಫೋರಂ ಬಹುಮಾನಗಳು

• ವರ್ಷದ ಆರ್ ಜೆ (ಹಿಂದಿ) - ಅನ್ನು ಕಪೂರ್

• ವರ್ಷದ ಆರ್ ಜೆ (ಹಿಂದಿ- ಮೆಟ್ರೊ ಅಲ್ಲದ ಸ್ಟೇಶನ್) - ಆರ್ ಜೆ ಅನ್ನು ಕಪೂರ್

• ವರ್ಷದ ಆರ್ ಜೆ (ತಮಿಳು) - ಆರ್ ಜೆ ಬಾಲಾಜಿ

• ವರ್ಷದ ಆರ್ ಜೆ (ಮರಾಠಿ) - ಆರ್ ಜೆ ಸಂಗ್ರಾಂ ಖೋರ್ಪಡೆ

• ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಮರಾಠಿ) - ಬ್ರೇಕ್ ಫಾಸ್ಟ್ ಶೋ ವಿತ್ ಬಿಗ್ ಎಂಜೆ ಸಂಗ್ರಾಂ

• ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಕನ್ನಡ) - ಬಿಗ್ ಕಾಫಿ

• ಅತ್ಯುತ್ತಮ ರೇಡಿಯೊ ಪ್ರಮೊ - ಇನ್-ಹೌಸ್ (ತಮಿಳು) - ವರ್ಲ್ಡ್ ಟಾಯ್ಲೆಟ್ ಡೇ

• ಅತ್ಯುತ್ತಮ ರೇಡಿಯೊ ಪ್ರಮೊ - ಇನ್-ಹೌಸ್ (ಮರಾಠಿ) - ಬ್ರೇಕ್‍ಫಾಸ್ಟ್ ಶೋ - ಬಿಗ್ ಎಂಜೆ ಸಂಗ್ರಾಂ ರನ್ನರ್ ಅಪ್

• ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಬ್ರೇಕ್ ಫಾಸ್ಟ್ ಅಲ್ಲದ - ತಮಿಳು) - ನೈಟ್ ಶೋ

• ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಬ್ರೇಕ್ ಫಾಸ್ಟ್ ಅಲ್ಲದ - ತೆಲುಗು) - ರೆಟ್ರೊ ಟಾಕೀಸ್

• ಅತ್ಯುತ್ತಮ ರೇಡಿಯೊ ಕಾರ್ಯಕ್ರಮ (ಕನ್ನಡ) - ರೆಟ್ರೊ ಸವಾರಿ - ಆರ್ ಜೆ ರ್ಯಾಪಿಡ್ ರಶ್ಮಿ

• ಅತ್ಯುತ್ತಮ ರೇಡಿಯೊ ಪ್ರಮೊ ಇನ್ -ಹೌಸ್ (ತೆಲುಗು) - ಬಿಗ್ ಜುನಿಯರ್ ರಾಕ್ ಸ್ಟಾರ್ಸ್

• ಅತ್ಯುತ್ತಮ ರೇಡಿಯೊ ಪ್ರಮೊ0 ಇನ್ -ಹೌಸ್ (ಮಲಯಾಳಂ) - ಪ್ರಗಾಶಂ ನೇಶನ್ ಪ್ರೈಡ್

• ವರ್ಷದ ಆರ್ ಜೆ (ಕನ್ನಡ) - ಆರ್ ಜೆ ಶೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+