ಇತಿಹಾಸ ನಿರ್ಮಾಣಕ್ಕೆ ಭಾರತಕ್ಕೆ ಬೇಕಿರುವುದು 7 ವಿಕೆಟ್
ಕೊಲಂಬೋ, ಆಗಸ್ಟ್. 31: ಭಾರತದ 22 ವರ್ಷಗಳ ಕನಸು ನನಸಾಗುವ ಸಂದರ್ಭ ಹತ್ತಿರ ಬರುತ್ತಿದೆ. ಮಳೆ ಅಡ್ಡಿ ಮಾಡುತ್ತಿದ್ದರೂ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ ಪಂದ್ಯ ರೋಚಕ ಘಟ್ಟ ತಲುಪಿದ್ದು ಭಾರತ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ.
ಶ್ರೀಲಂಕಾಕ್ಕೆ ಗೆಲ್ಲಲು ಭಾರತ 386 ರನ್ ಗುರಿ ನೀಡಿದ್ದು, ಲಂಕಾ 67 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಲಂಕಾ, ಉಪುಲ್ ತರಂಗ 0, ದಿಮೂತ್ ಕರುಣರತ್ನೆ 0, ದಿನೇಶ್ ಚಂಡೀಮಾಲ್ 18 ವಿಕೆಟ್ ಕಳೆದುಕೊಂಡಿದೆ. ಏಳು ವಿಕೆಟ್ ಗಳು ಭಾರತದ ಬುಟ್ಟಿಗೆ ಬಿದ್ದರೆ ಇತಿಹಾಸ ನಿರ್ಮಾಣವಾಗಲಿದೆ.[ಇಶಾಂತ್ ಶರ್ಮಾರನ್ನು ಪ್ರಸಾದ್ ಅಟ್ಟಿಸಿಕೊಂಡು ಹೋಗಿದ್ದೇಕೆ?]

ಏಂಜಲೋ ಮ್ಯಾಥ್ಯೂಸ್ 22 ಮತ್ತು ಕೌಶಲ್ ಸಿಲ್ವಾ 24 ರನ್ ನಾಳೆಗೆ ಆಟ ಕಾಯ್ದುಕೊಂಡಿದ್ದಾರೆ. ಭಾರತದ ಪರ ಇಶಾಂತ್ ಶರ್ಮಾ 2 ಮತ್ತು ಉಮೇಶ್ ಯಾದವ್ 1 ವಿಕೆಟ್ ಕಿತ್ತು ಲಂಕಾಕ್ಕೆ ಒತ್ತಡ ಹೇರಿದರು.
ನಾಲ್ಕನೇ ದಿನದಲ್ಲಿ ಸ್ಟುವರ್ಟ್ ಬಿನ್ನಿ 49 ರನ್, ನಮನ್ ಓಝಾ 35, ಅಮಿತ್ ಮಿಶ್ರಾ 39 ಮತ್ತು ರವಿಚಂದ್ರನ್ ಅಶ್ವಿನ್ 58 ರನ್ ಕೊಡುಗೆ ನೀಡಿದರು. ಇದರ ಪರಿಣಾಮ ಪ್ರಮುಖ ಬ್ಯಾಟ್ಸಮನ್ ಗಳ ವೈಫಲ್ಯದ ನಡುವೆಯೂ ಭಾರತ ಉತ್ತಮ ಮೊತ್ತ ಕಲೆಹಾಕಿ ಲಂಕಾ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು.
1993 ರಲ್ಲಿ ಎಂ ಅಜರುದ್ದೀನ್ ನೇತೃತ್ವದಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಜಯಿಸಿದ್ದು ಹಿಂದಿನ ದಾಖಲೆ. ಒಂದು ವೇಳೆ ಭಾರತ ವಿಜಯ ದಾಖಲು ಮಾಡಿದರೆ ವಿರಾಟ್ ಕೊಹ್ಲಿ ಹೊಸ ಭಾರತದ ಪರ ಹೊಸ ಶ್ರೇಯ ಪಡೆದುಕೊಳ್ಳಲಿದ್ದಾರೆ. ಪಿಚ್ ಸ್ಪಿನ್ ಗೆ ನೆರವು ನೀಡುತ್ತಿದ್ದು ಅಶ್ವಿನ್ ಮತ್ತು ಮಿಶ್ರಾ ಅವರು ದಾಳಿ ಸಂಘಟಿಸಿದರೆ ಭಾರತಕ್ಕೆ ಜಯ ಬಹಳ ದೂರವಿಲ್ಲ.












Click it and Unblock the Notifications