ಜಯನಗರ ವಿಧಾನಸಭಾ ಕ್ಷೇತ್ರ 'ಮಾದರಿ' ಪ್ರಣಾಳಿಕೆ
ಬೆಂಗಳೂರು, ಜೂನ್ 03: ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರವಿ ಕೃಷ್ಣಾರೆಡ್ಡಿಯವರು ಜಯನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಜಯನಗರ ಕ್ಷೇತ್ರಕ್ಕೆ ಜೂನ್ 11 ರಂದು ಮತದಾನ ನಡೆಯಲಿದ್ದು,
ಈ ನಿಟ್ಟಿನಲ್ಲಿ ಅವರು ಜಯನಗರ ನಾಲ್ಕನೇ ಬ್ಲಾಕಿನ ಮಯ್ಯಾಸ್ ವೃತ್ತದಲ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಕ್ಷೇತ್ರದ ಹಿರಿಯ ನಾಗರಿಕರಾದ ಶ್ರೀಮತಿ ಶೋಭಾ ಕಿಣಿ, ಡಾ. ಕೆ. ಶಿವರಾಂ, ಆನೆಪ್ಪ ಮತ್ತು ನಂಜುಂಡ ರಾವ್ ಅವರುಗಳು ರವಿ ಕೃಷ್ಣಾರೆಡ್ಡಿಯವರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ತಮ್ಮ ಪ್ರಣಾಳಿಕೆಯಲ್ಲಿ ಜಯನಗರ ಕ್ಷೇತ್ರವನ್ನು ಲಂಚಮುಕ್ತ ಮಾಡುವುದು, ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು, ಪರಿಸರ ಸ್ನೇಹಿ ಹಾಗು ಕಸಮುಕ್ತ ಕ್ಷೇತ್ರವನ್ನಾಗಿ ಮಾಡಲು ಬದ್ಧರಾಗಿರುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.
ಪ್ರಣಾಳಿಕೆಗೆ ಜಯನಗರ ಕ್ಷೇತ್ರದ ಮತದಾರರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಗಳನ್ನು ಪಡೆದು ಹಾಗು ಇಡೀ ಕ್ಷೇತ್ರದ ಪರ್ಯಟನೆ ಮಾಡಿ ತಯಾರಿಸಲಾಗಿದೆ. ಇದೇ ಸಂದರ್ಭದಲ್ಲಿ, ಆಡಳಿತದಲ್ಲಿ ಜನರ ಸಹಭಾಗಿತ್ವ, ಬೀದಿ ವ್ಯಾಪಾರಿಗಳ ರಕ್ಷಣೆ, ಉತ್ತಮ ವಸತಿ ಸೌಕರ್ಯ, ಸರ್ಕಾರಿ ಭೂಮಿಯನ್ನು ರಕ್ಷಿಸಿ, ಅಲ್ಲಿ ಸಾರ್ವಜನಿಕ ಉದ್ಯಾನ ಮತ್ತು ಇತರೆ ಸೌಕರ್ಯಗಳನ್ನು ಒದಗಿಸಲು ಕಾರ್ಯಕ್ರಮ ಹಾಕಿಕೊಂಡಿದ್ದಾರೆ.
ಹಾಗೆಯೇ, ಅವರ ಶಾಸಕರಾಗಿರುವ ಅವಧಿಯಲ್ಲಿ ಯಾವುದೇ ಆಸ್ತಿಯನ್ನು ಕೊಳ್ಳುವುದಿಲ್ಲ, ಯಾವುದೇ ಲಾಭ ತರುವ ವ್ಯವಹಾರವನ್ನಾಗಲಿ, ಉದ್ದಿಮೆಯನ್ನಾಗಲಿ ನಡೆಸುವುದಿಲ್ಲ, ಮತ್ತು ಕುಟುಂಬದ ಖರ್ಚು ವೆಚ್ಚಗಳನ್ನೆಲ್ಲ ಶಾಸಕನಾಗಿ ಅವರಿಗೆ ಬರುವ ಸಂಬಳ ಮತ್ತು ಅವರ ಪತ್ನಿಯ ಆದಾಯದಲ್ಲಿ ಮಾತ್ರ ನಿಭಾಯಿಸುವುದಾಗಿ ಕ್ಷೇತ್ರದ ಜನತೆಗೆ ವಚನ ನೀಡಿದರು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications