ಅಶ್ಲೀಲ ಕಾಮಿಕ್ ಪುಸ್ತಕ ಮಕ್ಕಳಿಗೆ ಮಾರಾಟ:ಎಫ್‌ಐಆರ್‌ ದಾಖಲು

ಬೆಂಗಳೂರು, ನವೆಂಬರ್ 23: ಅಶ್ಲೀಲ ಕಾಮಿಕ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದ ಕಾರಣಕ್ಕೆ ಖಾಸಗಿ ಸಂಸ್ಥೆಯೊಂದರ ಮೇಲೆ ಎಫ್‌ಐಆರ್‌ ದಾಖಲಾಗಿದೆ.

ಮಕ್ಕಳ ಬ್ಯಾಗ್ ನಲ್ಲಿದ್ದ ಪುಸ್ತಕ ನೋಡಿ ಪೋಷಕರು ಬೆಚ್ಚಿಬಿದ್ದಿದ್ದಾರೆ, ಹದಿಹರೆಯದ ಮಕ್ಕಳ ಬ್ಯಾಗ್‌ನಲ್ಲಿದ್ದ ಚಿತ್ರಗಳನ್ನು ನೋಡಿದ ಪೋಷಕರೊಬ್ಬರು ಈ ಕುರಿತು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದ ವೈಟ್‌ಫೀಲ್ಡ್ ನಲ್ಲಿರುವ ಕೆಟಿಪಿಒ ಸಭಾಂಗಣದಲ್ಲಿ ನವೆಂಬರ್ 17-18ರಂದು ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ 7 ನೇ ಆವೃತ್ತಿಯ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸಿತ್ತು.

Indecent pictures comic book selling in children festival

ಈ ಕಾರ್ಯಕ್ರಮದಲ್ಲಿ ಆರು ವರ್ಷದಿಂದ 18 ವರ್ಷದ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಟಿಕೆಟ್ ಪಡೆದು ಭಾಗವಹಿಸಿದ್ದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಕಾಮಿಕ್ ಪುಸ್ತಕ, ಬ್ಯಾಡ್ಜ್, ಡಿ-ಶರ್ಟ್ ನೀಡಲಾಗಿತ್ತು. ಮಕ್ಕಳಿಗೆ ವಿತರಿಸಲಾಗಿದ್ದ ಅಮೆರಿಕ ಲೇಖಕ ಬ್ರಿ ಯಾನ್ ಕೆ.ವೌಘನ್ ಅವರು ಬರೆದಿರುವ ಕಾಮಿಕ್ ಪುಸ್ತಕದಲ್ಲಿ ಇಂತಹ ಆಕ್ಷೇಪಾರ್ಹ ಚಿತ್ರಗಳಿವೆ.

ಇಂದಿರಾನಗರ ನಿವಾಸಿ 16 ವರ್ಷದ ಬಾಲಕಿಯೊಬ್ಬಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು, ಗುರುವಾರ ಬೆಳಗ್ಗೆ ಬಾಲಕಿ ತಾಯಿ ಮನೆ ಶುಚಿಗೊಳಿಸುವಾಗ ಕುತೂಹಲ ದಿಂದ ಅಲ್ಲಿಯೇ ಇದ್ದ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ನೀಡಿದ್ದ ಕಿಟ್ ತೆಗೆದು ನೋಡಿದ್ದಾರೆ.

ಈ ವೇಳೆ ಪುಸ್ತಕದಲ್ಇನ ಅಶ್ಲೀಲ ಚಿತ್ರಗಳನ್ನು ನೋಡಿ ಕೂಡಲೇ ಸಂಸ್ಥೆಗೆ ಅಪ್ರಾಪ್ತ ಮಕ್ಕಳಿಗೆ ವಿತರಿಸಲಾಗಿರುವ ಇಂತಹ ಚಿತ್ರಗಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂದೇಶ ಕಳುಹಿಸಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 293 ಅಡಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+