ಅಗ್ನಿಶಾಮಕ ಇಲಾಖೆಯ ವಿವಿಧ ಸೌಲಭ್ಯಗಳ ಲೋಕಾರ್ಪಣೆ, ಹಾಸ್ಟೆಲ್ ಉದ್ಘಾಟನೆ
ಬೆಂಗಳೂರು, ಮಾರ್ಚ್ 21: ಜಯನಗರ ಬನ್ನೇರುಘಟ್ಟ ರಸ್ತೆಯಲ್ಲಿ ಮಾರ್ಚ್ 22 ರಂದು ಆರ್.ಎ.ಮುಂಡ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವಾ ಅಕಾಡೆಮಿ ಮತ್ತು ವಿದ್ಯಾರ್ಥಿ ಅಕಾಡೆಮಿ ಆವರಣದಲ್ಲಿ ಸುಸಜ್ಜಿತ ಹಾಸ್ಟೆಲ್ ಕಟ್ಟಡ ಹಾಗೂ ಇನ್ನಿತರೆ ಸೌಕರ್ಯಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಗೃಹ ಸಚಿವರಾದ ರಾಮಲಿಂಗಾ ರೆಡ್ಡಿ, ಕೇಂದ್ರ ಮಂತ್ರಿ ಅನಂತ್‌ಕುಮಾರ್ ಮತ್ತು ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್ ಅವರು ಭಾಗವಹಿಸಲಿದ್ದಾರೆ.
ಒಂದು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ವಿದ್ಯಾರ್ಥಿಗಳು ಮತ್ತು ಬೋಧಕರಿಗಾಗಿ ನಿರ್ಮಿಸಿರುವ ಹಾಸ್ಟೆಲ್, ಗ್ರಾಹಕರ ಸಹಾಯಕ್ಕಾಗಿ ರೂಪಿಸಲಾಗಿರುವ ಅಗ್ನಿ-2 ಎಂಬ ತಂತ್ರಾಂಶ ಲೋಕಾರ್ಪಣೆ ಮತ್ತು ತುರ್ತು ಸೇವಾ ನಿರ್ವಹಣಾ ಕೇಂದ್ರ ಕಟ್ಟಡದ ಶಂಕು ಸ್ಥಾಪನೆಯನ್ನು ನೆರವೇರಿಸಲಾಗುತ್ತದೆ.

ಅಗ್ನಿ-2 ತಂತ್ರಾಂಶದಿಂದ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ರಾಜ್ಯಾದ್ಯಂತ ನಿರಪೇಕ್ಷಣಾ ಮತ್ರ ಕ್ಲಿಯರೆನ್ಸ್ ಲೆಟರ್‌ಗಳನ್ನು ಶೀಗ್ರದಲ್ಲಿಯೇ ನೀಡಲು ಈ ತಂತ್ರಾಂಶ ಸಹಾಯ ಮಾಡಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕಾರ್ಯಕ್ರಮವು ಜಯನಗರದ ಬನ್ನೇರುಘಟ್ಟ ರಸ್ತೆಯ ಆರ್.ಎ.ಮುಂಡ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವಾ ಅಕಾಡೆಮಿ ಆವರಣದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.












Click it and Unblock the Notifications