ಮೆಟ್ರೋ ಸುರಂಗ ಕೊರೆಯುವುದಷ್ಟೇ ಅಲ್ಲ, ಕಟ್ಟಡಗಳ ಸುರಕ್ಷತೆಯೂ ಮುಖ್ಯ

ಬೆಂಗಳೂರು, ಜುಲೈ 5: ನಮ್ಮ ಮೆಟ್ರೋ ಕಾಮಗಾರಿ ಬೇಗ ಮುಗಿಯಬೇಕು ಎಂದು ತುರ್ತಾಗಿ ಸುರಂಗ ಮಾರ್ಗವನ್ನು ಕೊರೆಯುವುದಲ್ಲ, ಕಟ್ಟಡಗಳ ಕಡೆಗೂ ಗಮನ ಹರಿಸುವ ಅಗತ್ಯವಿದೆ.

ಮೊದಲ ಹಂತದಲ್ಲಿ 19 ಕಡೆ ಬಿರುಕು ಕಾಣಿಸಿಕೊಂಡಿತ್ತು.ಬೆಂಗಳೂರಿನ ವಾಣಿಜ್ಯ ಪಪ್ರದೇಶದಲ್ಲಿ ಸುರಂಗ ಕೊರೆಯುವಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

19 ಪ್ರಕರಣಗಳಲ್ಲಿ 18 ಪ್ರಕರಣಗಳು ಹಸಿರು ಮಾರ್ಗ ನಿರ್ಮಾಣ ವೇಳೆಯೇ ನಡೆದಿದೆ. ಸಂಪಿಗೆ ರಸ್ತೆಯಿಂದ ಕೆಆರ್‌ ಮಾರುಕಟ್ಟೆ ಸುರಂಗ ಮಾರ್ಗದಲ್ಲೇ ನಿರ್ಮಾಣ ವೇಳೆಯೇ ಬಿರುಕು ಕಾಣಿಸಿಕೊಂಡಿತ್ತು.

In Phase one 19 Developed Cracks so BMRCL takes steps to building safety

ಒಟ್ಟು 19 ಕಟ್ಟಡಗಳ ಮಾಲೀಕರಿಗೆ ಒಟ್ಟು 2.8 ಕೋಟಿ ರೂ ಪರಿಹಾರವನ್ನು ಮೆಟ್ರೋ ನೀಡಿತ್ತು.

ವಾಣಿವಿಲಾಸ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಸುರಂಗ ಮಾರ್ಗ ಬರುವ ಕಡೆಗಳಲ್ಲಿ ಮೊದಲು ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಕಾಮಗಾರಿ ಆರಂಭವಾದ ಮೇಲೆ ಏನೂ ಮಾಡಲು ಸಾಧ್ಯವಿಲ್ಲ ಹಾಗಾಗಿ ಮೊದಲೇ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇದೀಗ ಡೈರಿ ವೃತ್ತದಿಂದ ನಾಗವಾರದವರೆಗೆ 14 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಕ್ರ್ಯಾಕ್ ಮೀಟರ್ ಬಳಕೆ ಮಾಡಲಾಗುತ್ತಿದೆ. ಶಿವಾಜಿನಗರ, ಟ್ಯಾನರಿ ರಸ್ತೆ, ಪಾಟರಿ ಟೌನ್ ಸುತ್ತಮುತ್ತಲ ಪ್ರದೇಶಗಳಲ್ಲಿ ಹಳೆಯ ಕಟ್ಟಡಗಳೇ ಹೆಚ್ಚಿವೆ. ಹೀಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ ಹಾಗಾಗಿ ಕಾಮಗಾರಿ ಕೊಂಚ ತಡವಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+