ಬೆಂಗಳೂರು : 1 ಗಂಟೆಯಲ್ಲಿ 10 ಕಡೆ ಸರಗಳ್ಳತನ

ಬೆಂಗಳೂರು, ಜೂ. 11 : ಬೆಂಗಳೂರಿಗೆ ಸರಗಳ್ಳರು ಮತ್ತೆ ಆಗಮಿಸಿದ್ದಾರೆ. ಗುರುವಾರ ಬೆಳಗ್ಗೆ 1 ಗಂಟೆಯ ಅವಧಿಯಲ್ಲಿ 10 ಕಡೆ ಸರಗಳ್ಳತನ ನಡೆದಿದೆ. ಪೊಲೀಸರು ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಗುರುವಾರ ಬೆಳಗ್ಗೆ 6 ರಿಂದ 7 ಗಂಟೆಯ ಅವಧಿಯಲ್ಲಿ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಕಡೆ ಸರಗಳ್ಳತನವಾಗಿದೆ. ಕಪ್ಪು ಪಲ್ಸರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. [ಬೆಂಗಳೂರಿನ 3 ಕಡೆ ಸರಗಳ್ಳತನ]

chain snatching

ಚಂದ್ರಾ ಲೇಔಟ್‌ ಪೊಲೀಸ್ ಠಾಣಾ ವ್ಯಾಪ್ತಿಯ 2 ಕಡೆ, ವಿಜಯನಗದ 2 ಕಡೆ, ಚನ್ನಮ್ಮನ ಕೆರೆ ಮತ್ತು ಕಾಮಾಕ್ಷಿ ಪಾಳ್ಯದಲ್ಲಿ 3 ಕಡೆ ಸರಗಳ್ಳತನವಾದ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. [ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ]

ಕಳ್ಳತನದ ಪ್ರಕರಣಗಳು : ಕೆಎಚ್‌ಬಿ ಕಾಲೋನಿಯಲ್ಲಿ ದಾಕ್ಷಾಯಿಣಿ ಬೆಳಗ್ಗೆ ಮನೆ ಮುಂದೆ ರಂಗೋಲಿ ಹಾಕುತ್ತಿದ್ದಾಗ ಬೈಕ್‌ನಲ್ಲಿ ಬಂದ ಕಳ್ಳರು 24 ಗ್ರಾಂ ಸರವನ್ನು ಕದ್ದು ಪರಾರಿಯಾಗಿದ್ದಾರೆ. ಇದೇ ಬಡಾವಣೆಯ ಟೆಲಿಕಾಂ ಕಚೇರಿ ಹಿಂಭಾಗದಲ್ಲಿ ಜಗದಾಂಬ ಎಂಬುವವರು ವಾಯುವಿಹಾರ ಮುಗಿಸಿ ವಾಪಸ್ ಬರುತ್ತಿದ್ದಾಗ ಕಳ್ಳರು 40 ಗ್ರಾಂ ಸರವನ್ನು ಅಪಹರಿಸಿದ್ದಾರೆ.

* ಬೆಮೆಲ್ ಲೇಔಟ್‌ನಲ್ಲಿ ಸತ್ಯಭಾಮಾ (60) ಎಂಬುವವರು ಗಿಡಗಳಿಗೆ ನೀರು ಹಾಕುತ್ತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ಬಂದ ಇಬ್ಬರು 40 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.

* ಆರ್‌ಪಿಸಿ ಲೇಔಟ್ ನಿವಾಸಿ ಶುಭಾರಾಣಿ (32) ಅವರು ಬೆಳಗ್ಗೆ 8.15ರಲ್ಲಿ ವಾಯುವಿಹಾರ ಮುಗಿಸಿ ವಾಪಾಸ್ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಕಳ್ಳರು 60 ಗ್ರಾಂ ಚಿನ್ನದ ಸರ ಕದ್ದಿದ್ದಾರೆ.

* ಕಲ್ಯಾಣ ನಗರದ ಶಕ್ತಿ ಗಾರ್ಡನ್ ನಿವಾಸಿ ಇಂದ್ರಮ್ಮ (76) ಅವರು ವಾಯು ವಿವಾರ ಮುಗಿಸಿ ಮನೆಗೆ ಬರುತ್ತಿದ್ದಾಗ 40 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ಹತ್ಯೆ : ಕನಕಪುರ ರಸ್ತೆಯಲ್ಲಿನ ನಿರ್ಮಾಣ ಹಂತದ ನಮ್ಮ ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿಯನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಕೊಲೆ ಮಾಡಿದ್ದಾರೆ. ಕೊಲೆಯಾದವರನ್ನು ಉತ್ಪಲ್ ದತ್ತಾ (30) ಎಂದು ಗುರುತಿಸಲಾಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+