ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳೆದ 2 ವಾರದಲ್ಲಿ, ಬೆಂಗಳೂರು ಚಿತಾಗಾರದಲ್ಲಿ 1,400 ಶವಗಳ ದಹನ

|
Google Oneindia Kannada News

ಬೆಂಗಳೂರು, ಮೇ 2: ಕಳೆದ ಎರಡು ವಾರಗಳಲ್ಲಿ ಬೆಂಗಳೂರಿನ ಚಿತಾಗಾರದಲ್ಲಿ 1,400 ಶವಗಳನ್ನು ಸುಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ ಒಂದೇ ತಿಂಗಳಲ್ಲಿ 1812 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು, ಸೆಪ್ಟೆಂಬರ್ 2020ರಲ್ಲಿ 971 ಮಂದಿ ಸಾವನ್ನಪ್ಪಿದ್ದರು. ಕಳೆದ 15 ದಿನಗಳಲ್ಲಿ 179 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕಕ್ಕೆ ಹೆಚ್ಚುವರಿಯಾಗಿ ರೆಮ್‌ಡೆಸಿವಿರ್ ಲಸಿಕೆ ಹಂಚಿಕೆ: ಸದಾನಂದಗೌಡಕರ್ನಾಟಕಕ್ಕೆ ಹೆಚ್ಚುವರಿಯಾಗಿ ರೆಮ್‌ಡೆಸಿವಿರ್ ಲಸಿಕೆ ಹಂಚಿಕೆ: ಸದಾನಂದಗೌಡ

ಕೊರೋನಾ 2ನೇ ಆರಂಭವಾದಾಗಿನಿಂದಲೂ ಬಿಬಿಎಂಪಿಗೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ನಗರದಲ್ಲಿ ಕೊರೊನಾ ಸಾವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಮೊದಲು ಸ್ಥಳದ ಅಭಾವ. ನಂತರ ಮೃತದೇಹ ಶವಸಂಸ್ಕಾರದ ವಿಳಂಬ ಸಮಸ್ಯೆಯಾಗಿ ಬಿಬಿಎಂಪಿಯನ್ನು ಕಾಡಿತ್ತು. ಇದೀಗ ಉರುವಲು ಕೊರತೆ ಸಮಸ್ಯೆ ಶುರುವಾಗತೊಡಗಿದೆ.

 In Bengaluru 1,400 Deaths In 2 Weeks

ಈ ಪರಿಸ್ಥಿತಿ ಕುರಿತು ಇದೀಗ ರಾಜ್ಯ ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಅರಣ್ಯ ವ್ಯಾಪ್ತಿಯಲ್ಲಿ ಇದೀಗ ಕೇವಲ 150 ಟನ್ ನಷ್ಟು ಮರಗಳು ಮಾತ್ರ ಬಾಕಿ ಉಳಿದಿವೆ.

ಸರ್ಕಾರ ಈಗಾಗಲೇ ಮೂರು ತಾತ್ಕಾಲಿಕ ಶವಾಗಾರವನ್ನು ತೆರೆದಿದ್ದು, ಈ ಶವಾಗಾರಗಳಲ್ಲಿ 10 ದಿನಗಳಲ್ಲಿ 200 ಟನ್ ನಷ್ಟು ಮರಗಳನ್ನು ಬಳಕೆ ಮಾಡಲಾಗಿದೆ. ಒಬ್ಬ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ 1,300-1,500 ಕೆಜಿ ಮರದ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರತೀ ಶವಾಗಾರದಲ್ಲಿ ಒಂದು ದಿನಕ್ಕೆ 42 ಶವಗಳನ್ನು ಸುಡಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಿದ್ದೇ ಆದರೆ, ಶವಗಳ ಅಂತ್ಯಸಂಸ್ಕಾರಕ್ಕೆ ಉರುವಲು ಕೊರತೆ ಎದುರಾಗಲಿದೆ. ಹೀಗಾಗಿ ನಮಗೆ ಬೇರೆ ದಾರಿಯಿಲ್ಲ. ಪರಿಸ್ಥಿತಿ ನಿಭಾಯಿಸಲು ಮರಗಳನ್ನು ಕಡಿಯಲೇ ಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ರಾಜ್ಯ ಸರ್ಕಾರ ಇದೀಗ ಹಣ ಪಾವತಿ ಮಾಡಿ ಅರಣ್ಯ ಇಲಾಖೆಯಿಂದ ಮರಗಳನ್ನು ಖರೀದಿ ಮಾಡುತ್ತಿದೆ ಎಂದು ತಿಳಿದುಬಂದಿದೆ.

Recommended Video

ಕೊರೊನಾದಿಂದ ಜನ ಸಾಯ್ತಿಲ್ಲ ಸರ್ಕಾರದ ವ್ಯವಸ್ಥೆಯಿಂದ ಜನ ಸಾಯ್ತಿದ್ದಾರೆ | Oneindia Kannada

ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧಿಕಾರಿಗಳು ಮಾತನಾಡಿ, ಸರ್ಕಾರ ಶೀಘ್ರದಲ್ಲಿ ಮರಗಳು ಬೇಕೆಂದು ಹೇಳಿದೆ. ನಮ್ಮ ಬಳಿ ಅಂತ್ಯಸಂಸ್ಕಾರಕ್ಕೆ ಬಳಕೆ ಮಾಡುವ ಮರಗಳು ಇಲ್ಲ. ಹೀಗಾಗಿ ನಾವು ಸರಬರಾಜು ಮಾಡುವವರು, ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆಂದು ಹೇಳಿದ್ದಾರೆ.

English summary
Bengaluru recorded 1,812 Covid-19 deaths in the month of April — the previous high was 971 deaths recorded in September 2020. As many as 1,479 of these deaths in April occurred in the last fortnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X