ಬೆಂಗಳೂರು ಗ್ರಾಮಾಂತರ: ಅನಧಿಕೃತ ಬಡಾವಣೆಗಳ ಹಾವಳಿ, ಇದು ಗ್ರಾಹಕರಿಗೆ ಅಧಿಕಾರಿಗಳ ಬಳುವಳಿ!
ಬೆಂಗಳೂರು, ಫೆಬ್ರವರಿ 24: ಇಂದಿನ ದಿನಗಳಲ್ಲಿ ಸೈಟ್ ಮಾರುವುದಿದೆ ಅಂದರೆ ಬಡ, ಮದ್ಯಮ ಮತ್ತು ಶ್ರೀಮಂತ ವರ್ಗದವರು ಸಹ ನಾ ಮುಂದು ತಾ ಮುಂದು ಅಂತಾ ಬರುತ್ತಾರೆ. ಇನ್ನು ಕಡಿಮೆ ಬೆಲೆಗೆ ಸೈಟ್ ದೊರೆಯುತ್ತದೆ ಅಂದರೆ ಸಾಕು ಬಡವರಾದರೂ ಅಲ್ಪ ಸ್ವಲ್ಪ ದುಡ್ಡು ಜೋಡಿಸಿ ಸೈಟ್ ಕೊಂಡುಕೊಳ್ಳೋಣವೆಂದು ಮುಗಿಬೀಳುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಅನಧಿಕೃತ ಬಡಾವಣೆಗಳ ಹಾವಳಿ ಹೆಚ್ಚಾಗಿದ್ದು, ನೀವು ಸೈಟ್ ಕೊಂಡುಕೊಳ್ಳಬೇಕಾದರೆ ಹುಷಾರಾಗಿರುವುದು ಒಳ್ಳೆಯದು. ಒಮ್ಮೆ ನೀವು ಕೊಳ್ಳುವ ಸೈಟ್(ನಿವೇಶನ)ಗೆ ಸಂಬಂಧಿಸಿದ ದಾಖಲೆಗಳನ್ನೊಮ್ಮೆ ಕೂಲಂಕಶವಾಗಿ ಪರಿಶೀಲನೆ ಮಾಡಿಕೊಂಡರೆ ಒಳಿತು. ಇನ್ನು ಬೆಂಗಳೂರಿಗೆ ಹೊಂದಿಕೊಂಡಂತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಂತೂ ಈ ಅನಧಿಕೃತ ಬಡಾವಣೆಗಳ ಹಾವಳಿ ಮಿತಿ ಮೀರಿದ್ದು, ಕಡಿಮೆ ಬೆಲೆಯಲ್ಲಿ ನಿವೇಶನ ನೀಡುತ್ತೇವೆ ಅಂತ ಹೇಳಿ ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ. ಜೊತೆಗೆ ಸರಕಾರದ ಬೊಕ್ಕಸಕ್ಕೂ ಸಹ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ.

ಸರಕಾರದ ನಿಯಮಗಳು ಗಾಳಿಗೆ!
ಯಾವುದೇ ಜಮೀನಿನಲ್ಲಿ ಬಡಾವಣೆ ನಿರ್ಮಾಣ ಮಾಡಿ ನಿವೇಶನಗಳನ್ನು ಮಾರಾಟ ಮಾಡಬೇಕಾದರೆ ಸರಕಾರ ಸಾಕಷ್ಟು ನಿಯಮಗಳನ್ನು ರೂಪಿಸಿದೆ. ಬಡಾವಣೆ ನಿರ್ಮಾಣ ಮಾಡುವ ಭೂಮಿ ಯಾವ ಪ್ರದೇಶದಲ್ಲಿದೆ ಎಂಬುದು ಪ್ರಮುಖವಾಗುತ್ತದೆ. ಜಮೀನು ಗ್ರೀನ್ ಝೋನ್ನಲ್ಲಿದ್ದರೆ ಅಂತಹ ಜಮೀನನ್ನು ಎಲ್ಲೋ ಝೋನ್‌ಗೆ ಬದಲಾಯಿಸಿ ತದನಂತರ ಅಂತಹ ಎಲ್ಲೋ ಝೋನ್ ಜಮೀನನ್ನು ನಿವೇಶನಗಳ ಉದ್ದೇಶಕ್ಕಾಗಿ ಬಳಸುವುದಾಗಿ ಸಂಬಂಧಪಟ್ಟ ಜಿಲ್ಲಾಡಳಿತದಿಂದ ಕನ್ವರ್ಷನ್ ಮಾಡಿಸಬೇಕಾಗುತ್ತದೆ.
ತದನಂತರ ಬಡಾವಣೆ ನಿರ್ಮಾಣ ಮಾಡುವ ನಕ್ಷೆ ತಯಾರು ಮಾಡಿ ಸಂಬಂಧಪಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಅನಧಿಕೃತ ಬಡಾವಣೆಗಳನ್ನು ನಿರ್ಮಾಣ ಮಾಡುವ ಮಾಫಿಯಾಗಳು ಇದಾವುದೇ ಸರಕಾರದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕೃಷಿ ಜಮೀನಿನಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಬಡಾವಣೆಗಳನ್ನು ರಾಜಾರೋಷವಾಗಿ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದಾರೆ.

ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಬಡಾವಣೆಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನಧಿಕೃತ ಬಡಾವಣೆಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ. ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕುಗಳಲ್ಲಿ ನೂರಾರು ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ. ಮಾತ್ರವಲ್ಲ ಇಂದಿಗೂ ಸಾಕಷ್ಟು ಅನಧಿಕೃತ ಬಡಾವಣೆಗಳು ನಿರ್ಮಾಣವಾಗುತ್ತಲೇ ಇವೆ. ಜೊತೆಗೆ ಇಂತಹ ಬಡಾವಣೆಗಳಲ್ಲಿನ ನಿವೇಶನಗಳು ಸಬ್ ರಿಜಿಸ್ಟರ್ಗಳಲ್ಲಿ ಸಹ ರಿಜಿಸ್ಟರ್ ಆಗುತ್ತಿವೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನ ಒಂದರಲ್ಲಿಯೇ 2015ರ ತಹಶೀಲ್ದಾರ ವರದಿ ಪ್ರಕಾರ 107 ಅನಧಿಕೃತ ಬಡಾವಣೆಗಳು ನಿಮಾಣವಾಗಿವೆ. ಇನ್ನು ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಅನಧಿಕೃತ ಬಡಾವಣೆಗಳಿವೆ ಎಂದು ಆಯಾ ತಾಲೂಕಿನ ತಹಶೀಲ್ದಾರಗಳು 2015ರಲ್ಲಿ ವರದಿ ನೀಡಿದ್ದಾರೆ. ಇನ್ನು 2022ರ ಹೊತ್ತಿಗೆ ಇಂತಹ ಅನಧಿಕೃತ ಬಡಾವಣೆಗಳ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ ಇಂತಹ ಬಡಾವಣೆಗಳಿಗೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಮಾತ್ರ ವಿಪರ್ಯಾಸ.

ಕ್ರಮ ಕೈಗೊಳ್ಳದ ಅಧಿಕಾರಿಗಳು
ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳು ಕೊಳ್ಳುವುದರಿಂದ ಸಾಕಷ್ಟು ಗ್ರಾಹಕರು ಮೋಸಕ್ಕೆ ಒಳಗಾಗುತ್ತಿದ್ದು, ಇಂತಹ ಅಕ್ರಮವನ್ನು ತಡೆಯುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಆದರೆ ಇಂತಹ ಅಕ್ರಮವನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೃಷಿ ಜಮೀನಿನಲ್ಲಿ ಸರಕಾರದ ನಿಯಮ ಪಾಲಿಸದೆ ಅಕ್ರಮವಾಗಿ ನಿರ್ಮಾಣವಾದ ಬಡಾವಣೆಗಳನ್ನು ತೆರವುಗೊಳಸಬೇಕಾದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕೇವಲ ನೆಪ ಮಾತ್ರಕ್ಕೆ ಲೇಔಟ್ಗಳನ್ನು ತೆರವುಗೊಳಿಸುವ ನಾಟಕ ಮಾಡಿ ಸುಮ್ಮನಾಗುತ್ತಿದ್ದಾರೆ. ಇನ್ನು ಇಂತಹ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳನ್ನು ರಿಜಿಸ್ಟರ್ ಮಾಡುವುದಿಲ್ಲ ಎಂದು ಹೇಳುತ್ತಿರುವ ಸಬ್ ರಿಜಿಸ್ಟರ್ಗಳು ಸಹ ಯಾವುದೇ ದಾಖಲೆ ಕೇಳದೇ ರಿಜಿಸ್ಟರ್ ಮಾಡುತ್ತಿದ್ದಾರೆ.

ಪಹಣಿಗಳಲ್ಲಿ ಎಂಟ್ರಿಯಾಗುತ್ತಿದೆ ಹುಷಾರ್
ಬೆಂಗಳೂರು ನಗರ ಸೇರಿದಂತೆ ಗ್ರಾಮಾಂತರ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಗಳ ಕುರಿತಾಗಿ ಪಹಣಿಗಳಲ್ಲಿ ಮಾಹಿತಿ ನೀಡಲು ಕಂದಾಯ ಅಧಿಕಾರಿಗಳು ಮುಂದಾಗಿದ್ದಾರೆ. ಯಾವ ಸರ್ವೇ ನಂಬರ್ನಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ ಅಂತಹ ಸರ್ವೇ ನಂಬರ್ಗಳ ಪಹಣಿಗಳಲ್ಲಿ ಅನಧಿಕೃತ ಬಡಾವಣೆ ಎಂದು ನಮೂದು ಮಾಡಲಾಗುತ್ತಿದೆ. ಇದಾಗಲೇ ಇಂತಹ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಪಹಣಿಗಳಲ್ಲಿ ಅನಧಿಕೃತ ಬಡಾವಣೆಗಳು ಎಂದು ನಮೂದಾಗುತ್ತಿದೆ. ಆದರೆ ಕೆಲವೊಂದು ಭಾಗಗಳಲ್ಲಿ ತೋಟಗಳಿರುವ ಸರ್ವೇ ನಂಬರ್ಗಳಿಗೂ ಸಹ ಅನಧಿಕೃತ ಬಡಾವಣೆ ಎಂದು ನಮೂದಾಗುತ್ತಿದ್ದು, ರೈತರು ಸಾಕಷ್ಟು ಗೊಂದಲಕ್ಕೆ ಸಿಲುಕಿ, ತಾಲೂಕು ಕಚೇರಿಗಳತ್ತ ಅಲೆಯುತ್ತಿದ್ದಾರೆ.

ಬೂದಿಗೆರೆ ಗ್ರಾಮದಲ್ಲೇ ಅತೀ ಹೆಚ್ಚು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮವೊಂದರಲ್ಲೇ ಇಡೀ ಜಿಲ್ಲೆಗೆ ಅತೀ ಹೆಚ್ಚು ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ. ಮಾತ್ರವಲ್ಲ ಇಲ್ಲಿನ ಹಲವು ಬಡಾವಣೆಗಳಲ್ಲಿ ಮನೆಗಳು ಸಹ ನಿರ್ಮಾಣವಾಗಿವೆ. ಬೂದಿಗೆರೆ ಗ್ರಾಮ ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಹಾಗೂ ಹೊಸಕೋಟೆ ತಾಲೂಕುಗಳಿಗೆ ಹೊಂದಿಕೊಂಡಿದ್ದು, ಲೇಔಟ್ ಮಾಫಿಯಾದ ಕಣ್ಣು ಇಲ್ಲಿ ಬಿದ್ದಿದೆ. ಇದರಿಂದ ಬೂದಿಗೆರೆ ಗ್ರಾಮವೊಂದರಲ್ಲೇ ನಾಯಿಕೊಡೆಗಳಂತೆ ಬಡಾವಣೆಗಳು ತಲೆಯೆತ್ತಿವೆ. ಮಾತ್ರವಲ್ಲ ಇಲ್ಲಿನ ಗೋಮಾಳ ಜಮೀನುಗಳಲ್ಲಿ ಸಹ ಲೇಔಟ್ಗಳನ್ನು
ನಿರ್ಮಾಣ ಮಾಡಿರುವುದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಷ್ಟೆಲ್ಲ ಬಡಾವಣೆಗಳು ಅನಧಿಕೃತವಾಗಿ ನಿರ್ಮಾಣವಾಗಿದ್ದರೂ ಸಹ, ಇಲ್ಲಿನ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಏನು ಗೊತ್ತೇ ಇಲ್ಲ ಎಂಬಂತೆ ಸುಮ್ಮನೆ ಕುಳಿತಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ












Click it and Unblock the Notifications