9,00,00,000 ರೂಪಾಯಿ ಮೌಲ್ಯದ ಭೂಮಿ ಸರ್ಕಾರದ ಪಾಲು, ಭೂಗಳ್ಳರಿಗೆ ಆಘಾತ!
ಕನ್ನಡಿಗರ ಬೆಂಗಳೂರಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ಪರಭಾಷಿಕರ ಹಾವಳಿ ಜೋರಾಗಿದ್ದು, ಈ ಮೂಲಕ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಭಾರಿ ಗಂಭೀರ ಆರೋಪ ಇದೆ. ಹಾಗೇ ಕನ್ನಡಿಗರ ಭೂಮಿ ಮೇಲೆ ಕೂಡ ಭೂಗಳ್ಳರ ಕಣ್ಣು ಬಿದ್ದಿದ್ದು, ಕೋಟಿ ಕೋಟಿ ಬೆಲೆಬಾಳುವ ಭೂಮಿ ಪರಭಾಷಿಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬದುಕುತ್ತಿದ್ದಾರೆ ಎಂಬ ಆರೋಪ ಇದೆ. ಹೀಗೆ ಕನ್ನಡ ನಾಡಿನ ಭೂಮಿ ರಕ್ಷಣೆಗಾಗಿ ಸರ್ಕಾರ ಪ್ರಯೋಗ ಮಾಡಿರುವ ಅಸ್ತ್ರ ಇದೀಗ 1,00,000 ಕೋಟಿ ರೂಪಾಯಿಗೂ ಹೆಚ್ಚು ಲಾಭ ತರುವ ನಿರೀಕ್ಷೆ ಮೂಡಿಸಿದೆ.
ಹೌದು, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿ ಆಗಿದ್ದ ಸುಮಾರು 9,00,00,000 ರೂಪಾಯಿ ಮೌಲ್ಯದ ಭೂಮಿಯನ್ನ ಮತ್ತೆ ವಶಕ್ಕೆ ಪಡೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಭೂಗಳ್ಳರ ವಿರುದ್ಧ, ಭಾರಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು ಕನ್ನಡ ನಾಡಿನ ಭೂಮಿ ರಕ್ಷಣೆ ಮಾಡಲಾಗಿದೆ. ಕೆಲ ಸ್ಥಳೀಯ ಪ್ರಭಾವಿಗಳ ಸಹಾಯ ಪಡೆದು ಕೋಟಿ, ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ಗುಳುಂ ಮಾಡಿದ್ದಾರೆ. ಇಂತಹ ಜಾಗದಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಟ್ಟಡ & ಲೇಔಟ್ ನಿರ್ಮಾಣ ಕೂಡ ನಡೆದಿದೆ. ಆದರೆ ಭೂಗಳ್ಳರಿಗೆ ಇದೀಗ ದೊಡ್ಡ ಆಘಾತ ನೀಡುತ್ತಿದೆ ಬೆಂಗಳೂರು ಜಿಲ್ಲಾಡಳಿತ.

ಭೂಮಿ ಕದ್ದ ಕಳ್ಳರಿಗೆ ಆಘಾತ!
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಇಂದು, ಬರೋಬ್ಬರಿ 2 ಎಕರೆ 0.06 ಗುಂಟೆ ಸರ್ಕಾರಿ ಜಮೀನು ಮತ್ತೆ ಸರ್ಕಾರವು ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಜಮೀನಿನ ಅಂದಾಜು ಮೌಲ್ಯ ಭರ್ಜರಿ 8.93 ಕೋಟಿ ರೂಪಾಯಿ ಎನ್ನಲಾಗಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನೇತೃತ್ವದಲ್ಲಿ ಒತ್ತುವರಿಯನ್ನ ತೆರವುಗೊಳಿಸಿ ಜಾಗವನ್ನು ಇದೀಗ ಮತ್ತೆ ಕರ್ನಾಟಕ ಸರ್ಕಾರದ ವಶಕ್ಕೆ ಪಡೆಯಲಾಯಿತು.
ಕೋಟಿ ಕೋಟಿ ಬೆಲೆಬಾಳುವ ಜಮೀನು
ಹೀಗೆ, ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿ ಭಕ್ತಿಪುರದ ಸರ್ವೆ ನಂಬರ್ 38 ಗೋಮಾಳ ತೆರವು ಮಾಡಿ 0.05 ಗುಂಟೆ & ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೆ ನಂಬರ್ 141ರ ಖರಾಬು 0.11 ಗುಂಟೆ ತೆರವು ಮಾಡಲಾಗಿದೆ. ಮಹತ್ವದ ಕಾರ್ಯಾಚರಣೆಯಲ್ಲಿ ಕೆಂಗೇರಿ ಹೋಬಳಿ ಕಂಬೀಪುರದ ಸರ್ವೆ ನಂಬರ್ 173 ಸ್ಮಶಾನ ಒತ್ತುವರಿ ತೆರವುಗೊಳಿಸಿದ ಜಿಲ್ಲಾಡಳಿತ ಅಂದಾಜು 3.50 ಕೋಟಿ ರೂಪಾಯಿ ಮೌಲ್ಯದ ಜಮೀನು ರಕ್ಷಣೆ ಮಾಡಿದೆ.
ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಪೀಣ್ಯ ಗ್ರಾಮದ ಸರ್ಕಾರಿ ಓಣಿ 2.50 ಕೋಟಿ ರೂಪಾಯಿ ಭೂಮಿ ಒತ್ತುವರಿ ತೆರವು, ಯಲಹಂಕ ತಾಲೂಕು ಶಿವನಹಳ್ಳಿ ಗ್ರಾಮದಲ್ಲಿ 1.13 ಕೋಟಿ ರೂಪಾಯಿ ಮೌಲ್ಯದ ಭೂಮಿ ರಕ್ಷಣೆ ಮಾಡಲಾಗಿದೆ. ಹಾಗೇ ಜಾಲ ಹೋಬಳಿ ಗಡೇನಹಳ್ಳಿ ಗ್ರಾಮದ ಸರ್ವೆ ನಂಬರ್ 22 ಗೋಮಾಳದಲ್ಲಿ ಒತ್ತುವರಿ ತೆರವುಗೊಳಿಸಿ ಅಂದಾಜು 0.80 ಲಕ್ಷ ರೂಪಾಯಿ ಮೌಲ್ಯದ ಜಮೀನು ರಕ್ಷಣೆ ಮಾಡಲಾಗಿದೆ. ಈ ಮೂಲಕ ಭೂಗಳ್ಳರಿಗೆ ಸಾಲು ಸಾಲು ಆಘಾತವನ್ನು ನೀಡಲಾಗುತ್ತಿದ್ದು, ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.












Click it and Unblock the Notifications