ಬೆಂಗಳೂರು ರೇಸ್ ಕೋರ್ಸ್ ಒಳಗೆ ಅಕ್ರಮ ಬೆಟ್ಟಿಂಗ್, 10 ಮಂದಿ ಬಂಧನ
ಬೆಂಗಳೂರು, ನವೆಂಬರ್ 30 : ರೇಸ್ ಕೋರ್ಸ್ ರಸ್ತೆಯಲ್ಲಿರುವ ಟರ್ಫ್ ಕ್ಲಬ್ ನ ಗೇಟ್ ನಂಬರ್ 3, 1ನೇ ಎನ್ ಕ್ಲೋಸರ್ಸ್ ಒಳಗೆ ಅನಧಿಕೃತವಾಗಿ ಕುದುರೆಗಳ ರೇಸ್ ಬೆಟ್ಟಿಂಗ್ ಎಂಬ ಅದೃಷ್ಟದ ಜೂಜಾಟ ಆಡುತ್ತಿದ್ದವರನ್ನು ಬಂಧಿಸಲಾಗಿದೆ.
ಜ್ಯೋತಿ ಬಸು, ಅಂಜಿನಪ್ಪ, ವಿನೋದ್ ಕುಮಾರ್, ಕಬೀರ್ ಅಹಮದ್, ನವಾಜ್ ಅಹಮದ್ ಖಾನ್, ಹರೀಶ್, ತಿಮ್ಮರಾಜು, ಅಜಯ್ ಕುಮಾರ್, ಲಿಯಾಕತ್, ಕೇಶವ ಬಂಧಿತರು ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಸರಹದ್ದಿನಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಸಿಸಿಬಿ ಘಟಕದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ಅದರ ಆಧಾರದ ಮೇಲೆ ಕಾರ್ಯನಿರತರಾದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ವಿಶೇಷ ವಿಚಾರಣಾ ದಳದ ಎಸಿಪಿ, ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಒಳಗೊಂಡ ತಂಡವು ಶುಕ್ರವಾರ ಅಕ್ರಮ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದೆ.

ಬಂಧಿತರಿಂದ ರೇಸ್ ಬೆಟ್ಟಿಂಗ್ ನಲ್ಲಿ ತೊಡಗಿಸಿದ್ದ ನಗದು ಹಣ 5,91,000 ಹಾಗೂ ಇತರೆ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications